ಬೆಳಗಾವಿ: ಬೆಳಗಾವಿ ನಮಗೆ ಯಾವಾಗಲೂ ವಿಶೇಷತೆಯಿಂದ ಕೂಡಿರುತ್ತದೆ. ಗಡಿ ವಿವಾದ ಬಿಟ್ಟು ಬಿಡಿ. ಆದ್ರೆ ಬೆಳಗಾವಿಯ ಸುತ್ತ ಮುತ್ತ ಕಾರವಾರ ಇದೆ, ನಿಪ್ಪಾಣಿ ಇದೆ, ಖಾನಾಪುರ ಇದೆ. ಅಲ್ಲಿನ ಮರಾಠಿ ಜನರು 70 ವರ್ಷಗಳಿಂದ ಮಹಾರಾಷ್ಟ್ರಕ್ಕೆ ಸೇರಲು ಹೋರಾಟ ಮಾಡ್ತಿದ್ದಾರೆ ಎಂದು ಗಡಿ ವಿಚಾರವಾಗಿ ಮತ್ತೆ ಶಿವಸೇನೆ ವಕ್ತಾರ ಸಂಜಯ್ ರಾವತ್ ಕ್ಯಾತೆ ತೆಗೆದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರ ಸಮಸ್ಯೆಯನ್ನ ಬಗೆಹರಿಸಿದ್ದಾರೆ. ಜಮ್ಮು & ಕಾಶ್ಮೀರದಿಂದ ಆರ್ಟಿಕಲ್ 370 ಅನ್ನು ರದ್ದು ಮಾಡಿದ್ದಾರೆ. ಇಂತಹ ಸದೃಢ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಯಸಿದರೆ, ಬೆಳಗಾವಿ ಗಡಿ ವಿವಾದ ಪರಿಹರಿಸಲಿ. 70 ವರ್ಷಗಳ ವಿವಾದದ ಕಡೆ ಅಮಿತ್ ಶಾ ಗಮನ ಕೊಡಲಿ ಎಂದು ಕಾಶ್ಮೀರಕ್ಕೂ ಕರ್ನಾಟಕಕ್ಕೂ ಸಂಬಂಧ ಕಲ್ಪಿಸಿ ಶಿವಸೇನೆ ವಕ್ತಾರ ಸಂಜಯ್ ರಾವತ್ರಿಂದ ಉದ್ಧಟತನದ ಹೇಳಿಕೆ ನೀಡಿದ್ದಾರೆ.
Published On - 4:24 pm, Sun, 19 January 20