ಗೋಶಾಲೆಗೆ ಮೇವು ದಾನ: ಹುಟ್ಟುಹಬ್ಬ ಸರಳವಾಗಿ ಆಚರಿಸಲು ದಚ್ಚು ಮನವಿ

ಮಂಡ್ಯ: ಪ್ರಾಣಿಗಳ ಮೇಲೆ ಅಪಾರ ಕಾಳಜಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಗೋಶಾಲೆಗೆ 15 ಟ್ರ್ಯಾಕ್ಟರ್ ಮೇವು ನೀಡಿ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಪಾಂಡವಪುರ ತಾಲೂಕಿನ ದೊಡ್ಡ ಬ್ಯಾಡರಹಳ್ಳಿಯ ಚೈತ್ರಾ ಗೋಶಾಲೆಗೆ ಸ್ವತಹ ಭೇಟಿ ನೀಡಿ ದರ್ಶನ್ ಮೇವು ನೀಡಿದ್ದಾರೆ. ದವಸ ಧಾನ್ಯ ತರಲು ದಾಸ ಮನವಿ: ಫೆ.16ರಂದು ದರ್ಶನ್ ಹುಟ್ಟುಹಬ್ಬವಿರುವ ಹಿನ್ನೆಲೆಯಲ್ಲಿ ಸರಳ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಹುಟ್ಟುಹಬ್ಬದಂದು ಬ್ಯಾನರ್, ಕೇಕ್, ಹಾರಗಳನ್ನ ತರಬೇಡಿ. ಬದಲಿಗೆ ದವಸ ಧಾನ್ಯಗಳನ್ನ ನೀಡಿ. ಅಗತ್ಯ […]

ಗೋಶಾಲೆಗೆ ಮೇವು ದಾನ: ಹುಟ್ಟುಹಬ್ಬ ಸರಳವಾಗಿ ಆಚರಿಸಲು ದಚ್ಚು ಮನವಿ

Updated on: Jan 19, 2020 | 7:06 PM

ಮಂಡ್ಯ: ಪ್ರಾಣಿಗಳ ಮೇಲೆ ಅಪಾರ ಕಾಳಜಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಗೋಶಾಲೆಗೆ 15 ಟ್ರ್ಯಾಕ್ಟರ್ ಮೇವು ನೀಡಿ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಪಾಂಡವಪುರ ತಾಲೂಕಿನ ದೊಡ್ಡ ಬ್ಯಾಡರಹಳ್ಳಿಯ ಚೈತ್ರಾ ಗೋಶಾಲೆಗೆ ಸ್ವತಹ ಭೇಟಿ ನೀಡಿ ದರ್ಶನ್ ಮೇವು ನೀಡಿದ್ದಾರೆ.

ದವಸ ಧಾನ್ಯ ತರಲು ದಾಸ ಮನವಿ:
ಫೆ.16ರಂದು ದರ್ಶನ್ ಹುಟ್ಟುಹಬ್ಬವಿರುವ ಹಿನ್ನೆಲೆಯಲ್ಲಿ ಸರಳ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಹುಟ್ಟುಹಬ್ಬದಂದು ಬ್ಯಾನರ್, ಕೇಕ್, ಹಾರಗಳನ್ನ ತರಬೇಡಿ. ಬದಲಿಗೆ ದವಸ ಧಾನ್ಯಗಳನ್ನ ನೀಡಿ. ಅಗತ್ಯ ಇರೋರಿಗೆ ಅವುಗಳನ್ನು ತಲುಪಿಸುತ್ತೇನೆ ಎಂದು ಬಹಿರಂಗ ಪತ್ರದ ಮೂಲಕ ಅಭಿಮಾನಿಗಳಲ್ಲಿ ದಚ್ಚು ಮನವಿ ಮಾಡಿದ್ದಾರೆ. ಇದಿಷ್ಟೇ ಅಲ್ಲದೆ ಹುಟ್ಟುಹಬ್ಬದ ದಿನ ಅನುಚಿತ ವರ್ತನೆ ಮೂಲಕ ಅಕ್ಕಪಕ್ಕದ ಮನೆಯವ್ರಿಗೆ ತೊಂದರೆ ಕೊಡಬಾರದೆಂದು ಸಹ ಮನವಿ ಮಾಡಿಕೊಂಡಿದ್ದಾರೆ.