AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

JNU ಆಯ್ತು ಈಗ ಹೊಸ ಸಂಕಷ್ಟ ಶುರುವಾಯ್ತು, ವಿವಾದದ ಸುಳಿಯಲ್ಲಿ ದೀಪಿಕಾ

ಯಾಕೋ ಸದ್ಯದ ಮಟ್ಟಿಗೆ ದೀಪಿಕಾ ಪಡುಕೋಣೆ ಟೈಂ ಸರಿಯಾಗಿಲ್ಲ ಅಂತಾ ಕಾಣುತ್ತೆ. ಆ ಕಡೆ ಬಹುನಿರೀಕ್ಷಿತ ಚಿತ್ರ ‘ಛಪಾಕ್’ ಮಕಾಡೆ ಮಲಗಿದ್ರೆ, ಇನ್ನೊಂದ್ಕಡೆ ಅದೇ ಸಿನಿಮಾದ ಪ್ರಮೋಷನ್ ಮಾಡೋಕೆ ಹೋಗಿ ಡಿಪ್ಪಿ ಎಡವಟ್ಟು ಮಾಡ್ಕೊಂಡಿದ್ದಾಳೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ದೀಪಿಕಾ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ಯಾಂಡಲ್​ವುಡ್​ನ ಐಶ್ವರ್ಯ, ಬಾಲಿವುಡ್​ನ ಪದ್ಮಾವತಿ ದೀಪಿಕಾ ಪಡುಕೋಣೆಗೆ ಒಂದಾದ ನಂತರ ಒಂದು ಸಮಸ್ಯೆಗಳು ಎದುರಾಗ್ತಿವೆ. ಅದ್ಯಾವಾಗ ಜೆಎನ್​ಯು ಹೋರಾಟ ನಡೆಯುತ್ತಿದ್ದ ಜಾಗಕ್ಕೆ ದೀಪಿಕಾ ಹೋಗಿ ಬಂದ್ರೋ, ಆಹೊತ್ತಿನಿಂದ ಇಲ್ಲಿಯವರೆಗೆ […]

JNU ಆಯ್ತು ಈಗ ಹೊಸ ಸಂಕಷ್ಟ ಶುರುವಾಯ್ತು,  ವಿವಾದದ ಸುಳಿಯಲ್ಲಿ ದೀಪಿಕಾ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jan 19, 2020 | 1:21 PM

Share

ಯಾಕೋ ಸದ್ಯದ ಮಟ್ಟಿಗೆ ದೀಪಿಕಾ ಪಡುಕೋಣೆ ಟೈಂ ಸರಿಯಾಗಿಲ್ಲ ಅಂತಾ ಕಾಣುತ್ತೆ. ಆ ಕಡೆ ಬಹುನಿರೀಕ್ಷಿತ ಚಿತ್ರ ‘ಛಪಾಕ್’ ಮಕಾಡೆ ಮಲಗಿದ್ರೆ, ಇನ್ನೊಂದ್ಕಡೆ ಅದೇ ಸಿನಿಮಾದ ಪ್ರಮೋಷನ್ ಮಾಡೋಕೆ ಹೋಗಿ ಡಿಪ್ಪಿ ಎಡವಟ್ಟು ಮಾಡ್ಕೊಂಡಿದ್ದಾಳೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ದೀಪಿಕಾ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಸ್ಯಾಂಡಲ್​ವುಡ್​ನ ಐಶ್ವರ್ಯ, ಬಾಲಿವುಡ್​ನ ಪದ್ಮಾವತಿ ದೀಪಿಕಾ ಪಡುಕೋಣೆಗೆ ಒಂದಾದ ನಂತರ ಒಂದು ಸಮಸ್ಯೆಗಳು ಎದುರಾಗ್ತಿವೆ. ಅದ್ಯಾವಾಗ ಜೆಎನ್​ಯು ಹೋರಾಟ ನಡೆಯುತ್ತಿದ್ದ ಜಾಗಕ್ಕೆ ದೀಪಿಕಾ ಹೋಗಿ ಬಂದ್ರೋ, ಆಹೊತ್ತಿನಿಂದ ಇಲ್ಲಿಯವರೆಗೆ ದೀಪಿಕಾಗೆ ನೆಮ್ಮದಿಯೇ ಇಲ್ಲ. ಆಕಡೆ ‘ಛಪಾಕ್’ ಸಿನಿಮಾ ಮಕಾಡೆ ಮಲಗಿದೆ. ಇನ್ನು ಇದೇ ‘ಛಪಾಕ್’ ಚಿತ್ರಕ್ಕಾಗಿ ಪ್ರಮೋಷನ್ ಮಾಡಲು ಹೋಗಿ ದೀಪಿಕಾ ಎಡವಿದ್ದಾರೆ.

ಪ್ರಚಾರದ ಅಬ್ಬರದಲ್ಲಿ ದೀಪಿಕಾ ಎಡವಟ್ಟು! ಅಂದಹಾಗೆ ವಿಭಿನ್ನ ಕಥೆಯ ಮೂಲಕವೇ ಇಡೀ ಭಾರತ ಸಿನಿಮಾರಂಗದ ಗಮನ ಸೆಳೆದಿದ್ದ ಛಪಾಕ್ ಮೂವಿ, ಅಟ್ಟರ್ ಫ್ಲಾಪ್ ಆಗಿದೆ. ಅತ್ತ ಜನರಿಂದಲೂ ದೀಪಿಕಾ ಕೆಂಗಣ್ಣಿಗೆ ಗುರಿಯಾಗಿರುವಾಗಲೇ, ಇತ್ತ ಬಾಕ್ಸ್ ಆಫೀಸ್​ನಲ್ಲು ಸದ್ದು ಮಾಡುತ್ತಿಲ್ಲ. ಹೀಗಾಗಿ ಚಿತ್ರ ಬಿಡುಗಡೆಯಾಗಿ 1 ವಾರದ ನಂತರವೂ ಪ್ರಮೋಷನ್​ಗಾಗಿ ಡಿಪ್ಪಿ ಹೊಸದೊಂದು ಪ್ರಯತ್ನ ಮಾಡಿದ್ದರು. ಟಿಕ್​ಟಾಕ್ ಮೂಲಕ ಪ್ರಮೋಟ್ ಮಾಡಲು ಹೋಗಿದ್ದಾಗ, ಆಸಿಡ್ ಸಂತ್ರಸ್ತರಿಗೆ ಅವಮಾನ ಮಾಡಲಾಗಿದೆ ಅಂತಾ ದೀಪಿಕಾ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗುತ್ತಿದೆ.

ದೀಪಿಕಾ ಸಿನಿ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ? ಇನ್ನು ಈ ಘಟನೆಗಳೆಲ್ಲಾ ನೇರ ಪರಿಣಾಮ ಬೀರುತ್ತಿರೋದು ದೀಪಿಕಾ ಪಡುಕೋಣೆಯ ಸಿನಿ ಭವಿಷ್ಯದ ಮೇಲೆ. ಒಂದ್ಕಡೆ ಜಾಹೀರಾತು ಕಂಪೆನಿಗಳು ಕೂಡ ಹೆದರಿಕೊಂಡಿದ್ದರೆ, ಮುಂದೆ ದೀಪಿಕಾಗೆ ಬರುವ ಸಿನಿಮಾ ಆಫರ್​ಗಳಿಗೂ ಪ್ರಸಕ್ತ ಘಟನೆಗಳು ಎಫೆಕ್ಟ್ ಕೊಡುವ ಸಾಧ್ಯತೆ ದಟ್ಟವಾಗಿದೆ.

ಒಟ್ನಲ್ಲಿ ದೀಪಿಕಾ ಏನೋ ಮಾಡಲು ಹೋಗಿ ಏನೋ ಮಾಡ್ಕೊಂಡಿದ್ದಾರೆ. ಪ್ರಮೋಷನ್​ನಲ್ಲಿ ಮಾಡಿಕೊಂಡ ಯಡವಟ್ಟು ಮತ್ತೊಂದು ಎಫೆಕ್ಟ್ ಕೊಡುತ್ತಿದೆ. ಆದರೆ ಇದನ್ನೆಲ್ಲಾ ದೀಪಿಕಾ ಭವಿಷ್ಯದಲ್ಲಿ ಹೇಗೆ ಫೇಸ್ ಮಾಡುತ್ತಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ