AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hockey World Cup: ಬಲಿಷ್ಠ ಚೀನಾ ಎದುರು ಭಾರತದ ವನಿತೆಯರ ಕೆಚ್ಚೆದೆಯ ಹೋರಾಟ

Hockey World Cup 2026: 2026ರ ಪುರುಷ ಮತ್ತು ಮಹಿಳಾ ಹಾಕಿ ವಿಶ್ವಕಪ್ ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ಆರಂಭವಾಗಿದ್ದು, ಭಾರತದ ತಂಡಗಳು ಉತ್ತಮ ಆರಂಭ ಕಂಡಿವೆ. ಪುರುಷರ ತಂಡ ವೇಲ್ಸ್ ವಿರುದ್ಧ ಗೆದ್ದರೆ, ಮಹಿಳಾ ತಂಡವು ಒಲಿಂಪಿಕ್ಸ್ ಪದಕ ವಿಜೇತ ಚೀನಾ ವಿರುದ್ಧ 2-2 ಗೋಲುಗಳಿಂದ ಡ್ರಾ ಮಾಡಿಕೊಂಡಿತು. ಈ ಸಮಬಲ ಭಾರತದ ಮಹಿಳಾ ತಂಡಕ್ಕೆ ಸವಾಲಾಗಿ ಪರಿಗಣಿಸಲ್ಪಟ್ಟಿರುವ ಬಲಿಷ್ಠ ಚೀನಾ ತಂಡದ ವಿರುದ್ಧದ ಒಂದು ಮಹತ್ವದ ಸಾಧನೆಯಾಗಿದೆ.

Hockey World Cup: ಬಲಿಷ್ಠ ಚೀನಾ ಎದುರು ಭಾರತದ ವನಿತೆಯರ ಕೆಚ್ಚೆದೆಯ ಹೋರಾಟ
Hockey India
ಪೃಥ್ವಿಶಂಕರ
|

Updated on: Aug 16, 2026 | 10:48 PM

Share

2026 ರ ಪುರುಷ ಮತ್ತು ಮಹಿಳಾ ಹಾಕಿ ವಿಶ್ವಕಪ್‌ (2026 Hockey World Cup) ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ಏಕಕಾಲದಲ್ಲಿ ಪ್ರಾರಂಭವಾಗಿದ್ದು, ಭಾರತದ ಎರಡೂ ತಂಡಗಳು ನಿರೀಕ್ಷಿತ ಆರಂಭ ಪಡೆದುಕೊಂಡಿವೆ. ಪುರುಷರ ವಿಶ್ವಕಪ್‌ನಲ್ಲಿ, ಟೀಂ ಇಂಡಿಯಾ ತನ್ನ ಮೊದಲ ಪೂಲ್ ಪಂದ್ಯದಲ್ಲಿ ವೇಲ್ಸ್ ತಂಡವನ್ನು 3-1 ಗೋಲುಗಳಿಂದ ಸೋಲಿಸಿದರೆ, ಇತ್ತ ಮಹಿಳಾ ಹಾಕಿ ತಂಡವು (India Women’s Hockey), ಮಹಿಳಾ ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸದಿದ್ದರೂ ಒಲಿಂಪಿಕ್ಸ್‌ ಪದಕ ವಿಜೇತ ಚೀನಾ ವಿರುದ್ಧ 2-2 ಗೋಲುಗಳಿಂದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಭಾರತ ವನಿತೆಯರ ಕೆಚ್ಚೆದೆಯ ಹೋರಾಟ

ಆಗಸ್ಟ್ 16 ರಂದು ಭಾನುವಾರ ನೆದರ್ಲ್ಯಾಂಡ್ಸ್‌ನ ಆಮ್ಸ್ಟೆಲ್ವೀನ್‌ನಲ್ಲಿ ನಡೆದ ತಮ್ಮ ಮೊದಲ ಪೂಲ್ ಡಿ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಅದ್ಭುತ ಪ್ರದರ್ಶನ ನೀಡಿತು. 8 ನೇ ನಿಮಿಷದಲ್ಲಿ ನವನೀತ್ ಕೌರ್ ಫೀಲ್ಡ್ ಗೋಲ್ ಗಳಿಸುವುದರೊಂದಿಗೆ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಆದಾಗ್ಯೂ, ಈ ಮುನ್ನಡೆ ಹೆಚ್ಚು ಕಾಲ ಉಳಿಯಲಿಲ್ಲ, ಏಕೆಂದರೆ ಮೊದಲ ಕ್ವಾರ್ಟರ್‌ನ ಕೊನೆಯ ನಿಮಿಷದಲ್ಲಿ (15) ಚೀನಾ ಪೆನಾಲ್ಟಿ ಸ್ಟ್ರೋಕ್ ಪಡೆದು ಗೋಲು ಗಳಿಸಿ ಮೊದಲ ಕ್ವಾರ್ಟರ್‌ ಅನ್ನು 1-1 ರಿಂದ ಸಮಬಲಗೊಳಿಸಿತು. ಕೇವಲ 10 ನಿಮಿಷಗಳ ನಂತರ, ಟೀಂ ಇಂಡಿಯಾ ಮತ್ತೆ ಮುನ್ನಡೆ ಸಾಧಿಸಿತು. ಈ ಬಾರಿ, 25 ನೇ ನಿಮಿಷದಲ್ಲಿ, ದೀಪಿಕಾ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ 2-1 ರಿಂದ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಮುಂದಿನ 14 ನಿಮಿಷಗಳ ಕಾಲ ಟೀಂ ಇಂಡಿಯಾ ಮುನ್ನಡೆ ಕಾಯ್ದುಕೊಂಡಿತು. ಆದರೆ 39 ನೇ ನಿಮಿಷದಲ್ಲಿ, ಚೀನಾ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ಸ್ಕೋರ್ ಅನ್ನು 2-2 ರಿಂದ ಸಮಬಲಗೊಳಿಸಿತು. ಚೀನಾ ಮುನ್ನಡೆ ಸಾಧಿಸುತ್ತದೆ ಎಂದು ತೋರುತ್ತಿತ್ತು, ಆದರೆ ಭಾರತದ ಬಲವಾದ ರಕ್ಷಣಾ ಪಡೆ ಮೂರು ಪೆನಾಲ್ಟಿ ಕಾರ್ನರ್‌ಗಳು ಸೇರಿದಂತೆ ಪ್ರತಿಯೊಂದು ಪ್ರಯತ್ನವನ್ನು ವಿಫಲಗೊಳಿಸಿಪಂದ್ಯವನ್ನು 2-2 ರಿಂದ ಡ್ರಾದಲ್ಲಿ ಕೊನೆಗೊಂಡಿತು. ಈ ಫಲಿತಾಂಶದೊಂದಿಗೆ, ಎರಡೂ ತಂಡಗಳು ತಲಾ 1 ಅಂಕಗಳನ್ನು ಪಡೆದವು. ಚೀನಾ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಭಾರತ ಮೂರನೇ ಸ್ಥಾನದಲ್ಲಿದೆ. ತನ್ನ ಮೊದಲ ಪಂದ್ಯವನ್ನು ಗೆದ್ದ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ.

ಈ ಡ್ರಾ ಏಕೆ ಮುಖ್ಯ?

ಚೀನಾದಂತಹ ಬಲಿಷ್ಠ ತಂಡವನ್ನು ಎದುರಿಸುವಾಗ ಭಾರತ ತಂಡಕ್ಕೆ ಸವಾಲು ಸುಲಭವಾಗಿರಲಿಲ್ಲ. ಈ ಚೀನಾ ತಂಡ 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿತು, ಆದರೆ ಭಾರತ ಮಹಿಳಾ ತಂಡಕ್ಕೆ ಆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಕ್ಕೂ ಅವಕಾಶ ಸಿಕ್ಕಿರಲಿಲ್ಲ. ಅದಕ್ಕೂ ಮೊದಲು, ಅದೇ ಚೀನಾ ತಂಡ 2023 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿತ್ತು. ಆದ್ದರಿಂದ, ಇಂತಹ ಬಲಿಷ್ಠ ತಂಡದ ವಿರುದ್ಧ ಭಾರತ ಮಹಿಳಾ ತಂಡದ ಪ್ರದರ್ಶನ ಸ್ಮರಣೀಯವಾಗಿತ್ತು. ಇದೀಗ ಟೀಂ ಇಂಡಿಯಾದ ಮುಂದಿನ ಪಂದ್ಯ ಆಗಸ್ಟ್ 18 ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿದೆ. ಈ ಪಂದ್ಯದಲ್ಲಾದರೂ ಭಾರತ ಗೆಲುವಿನ ಖಾತೆ ತೆರೆಯುತ್ತಾ ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ