AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂದೇ ಮಾತರಂ ಹಾಡದಿದ್ದರೆ ಶಿಕ್ಷೆ ಇಲ್ಲ: ಸುಪ್ರೀಂ ಕೋರ್ಟ್‌ನಿಂದ ಕೇಂದ್ರಕ್ಕೆ ಖಡಕ್ ಸಂದೇಶ

ವಂದೇ ಮಾತರಂ ಹಾಡುವುದು ಕಡ್ಡಾಯವಲ್ಲ, ಹಾಡದಿದ್ದರೆ ಶಿಕ್ಷೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಆತ್ಮಸಾಕ್ಷಿ ಮತ್ತು ಧಾರ್ಮಿಕ ನಂಬಿಕೆಗಳಿಗೆ ನ್ಯಾಯಾಲಯ ರಕ್ಷಣೆ ನೀಡಿದೆ. 1986ರ ಐತಿಹಾಸಿಕ ತೀರ್ಪನ್ನು ಉಲ್ಲೇಖಿಸಿ, ಕೇಂದ್ರಕ್ಕೆ ಖಡಕ್ ಸಂದೇಶ ರವಾನಿಸಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಚರ್ಚೆಗಳ ನಡುವೆ ಈ ನಿರ್ದೇಶನ ಮಹತ್ವ ಪಡೆದಿದ್ದು, ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಎತ್ತಿಹಿಡಿದಿದೆ.

ವಂದೇ ಮಾತರಂ ಹಾಡದಿದ್ದರೆ ಶಿಕ್ಷೆ ಇಲ್ಲ: ಸುಪ್ರೀಂ ಕೋರ್ಟ್‌ನಿಂದ ಕೇಂದ್ರಕ್ಕೆ ಖಡಕ್ ಸಂದೇಶ
ಸುಪ್ರೀಂಕೋರ್ಟ್​ Image Credit source: PTI
ನಯನಾ ರಾಜೀವ್
|

Updated on: Sep 23, 2026 | 8:43 AM

Share

ನವದೆಹಲಿ, ಸೆಪ್ಟೆಂಬರ್ 23: ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿರುವ ನಿಯಮ ಹಾಗೂ ಅದನ್ನು ಉಲ್ಲಂಘಿಸಿದರೆ ಶಿಕ್ಷೆ ವಿಧಿಸುವ ಕಾನೂನಿನ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಹತ್ವದ ಸೂಚನೆ ನೀಡಿದೆ. ಆತ್ಮಸಾಕ್ಷಿಯ ಆಧಾರದ ಮೇಲೆ ಅಥವಾ ಧಾರ್ಮಿಕ ನಂಬಿಕೆಯ ಕಾರಣಕ್ಕೆ ಯಾರಾದರೂ ವಂದೇ ಮಾತರಂ ಹಾಡಲು ನಿರಾಕರಿಸಿದರೆ ಅವರನ್ನು ದಂಡನಾತ್ಮಕ ಕ್ರಮಗಳಿಗೆ ಗುರಿಪಡಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕರ್ನಾಟಕದಲ್ಲಿ ವಂದೇ ಮಾತರಂ ಗಾಯನ ಕಡ್ಡಾಯಗೊಳಿಸುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇತ್ತೀಚೆಗಷ್ಟೇ ವಿಧಾನಮಂಡಲ ಅಧಿವೇಶನದಲ್ಲೂ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿತ್ತು. ಹೀಗೆ ಕರ್ನಾಟಕದಲ್ಲಿ ಈ ಕುರಿತ ಸಂಘರ್ಷದ ಕಿಡಿ ಜೋರಾಗಿರುವ ಸಂದರ್ಭದಲ್ಲೇ, ಸುಪ್ರೀಂ ಕೋರ್ಟ್ ಈ ನಿರ್ದೇಶನವನ್ನು ನೀಡಿದೆ.

ಏನಿದು ಅರ್ಜಿ ಮತ್ತು ವಿವಾದ? ಪ್ರಸಿದ್ಧ ಕರ್ನಾಟಕ ಸಂಗೀತ ಗಾಯಕ ಟಿ.ಎಂ. ಕೃಷ್ಣ ಅವರು, ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕು ಎಂದು ಕೇಂದ್ರ ಸರ್ಕಾರ ಜಾರಿಗೆ ತಂದ ನಿಯಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2026ರಲ್ಲಿ ತಿದ್ದುಪಡಿ ಮಾಡಲಾದ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971’ ರ ಸೆಕ್ಷನ್ 3 ಹಾಗೂ ಗೃಹ ಸಚಿವಾಲಯದ ಸುತ್ತೋಲೆಗಳನ್ನು ಅವರು ಪ್ರಶ್ನಿಸಿದ್ದರು.

ಮತ್ತಷ್ಟು ಓದಿ: ವಂದೇ ಮಾತರಂ ಗೀತೆ ವಿವಾದ: ಸಿಎಂ ಡಿಕೆಶಿಗೆ ರಾಜ್ಯಪಾಲರ ಪತ್ರ, ಆದೇಶ ಮರುಪರಿಶೀಲಿಸಲು ಸೂಚನೆ

ತಿದ್ದುಪಡಿ ಮಾಡಿದ ನಿಯಮದ ಪ್ರಕಾರ, ರಾಷ್ಟ್ರೀಯ ಗೀತೆ ಹಾಡುವುದನ್ನು ತಡೆದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿತ್ತು. ವಂದೇ ಮಾತರಂನ ಕೊನೆಯ ನಾಲ್ಕು ಚರಣಗಳು ದೇಶದ ಜಾತ್ಯತೀತ ಸ್ವರೂಪಕ್ಕೆ ಮತ್ತು ಸಂವಿಧಾನದ 25 ಹಾಗೂ 26ನೇ ವಿಧಿಗಳ (ಧಾರ್ಮಿಕ ಸ್ವಾತಂತ್ರ್ಯ) ಆಶಯಕ್ಕೆ ವಿರುದ್ಧವಾಗಿವೆ ಎಂಬುದು ಅರ್ಜಿದಾರರ ಪ್ರಮುಖ ವಾದವಾಗಿತ್ತು.

1986ರ ಐತಿಹಾಸಿಕ ತೀರ್ಪನ್ನು ನೆನಪಿಸಿದ ಪೀಠ

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಮೂರ್ತಿ ಬಾಗ್ಚಿ ಅವರು, 1986ರ ಪ್ರಸಿದ್ಧ ‘ಬಿಜೋ ಇಮ್ಯಾನುಯೆಲ್ ವಿರುದ್ಧ ಕೇರಳ ರಾಜ್ಯ’ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದರು. ಆ ಪ್ರಕರಣದಲ್ಲಿ, ತಮ್ಮ ಧಾರ್ಮಿಕ ನಂಬಿಕೆಗೆ ವಿರುದ್ಧವೆಂಬ ಕಾರಣಕ್ಕೆ ರಾಷ್ಟ್ರಗೀತೆಯನ್ನು ಬಾಯಲ್ಲಿ ಹಾಡದೆ, ಎದ್ದು ನಿಂತು ಗೌರವ ಸೂಚಿಸಿದ್ದ ಶಾಲಾ ಮಕ್ಕಳನ್ನು ಸುಪ್ರೀಂ ಕೋರ್ಟ್ ರಕ್ಷಿಸಿತ್ತು. ಅದೇ ಸಾಂವಿಧಾನಿಕ ತತ್ವವು ಪ್ರಸ್ತುತ ತಿದ್ದುಪಡಿಗೂ ಅನ್ವಯವಾಗುತ್ತದೆ ಎಂದು ಪೀಠ ಒತ್ತಿಹೇಳಿತು.

ಕೋರ್ಟ್‌ನಲ್ಲಿ ನಡೆದ ತೀವ್ರ ವಾಕ್ಸಮರ

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್. ಮುರಳೀಧರ್ ಹಾಗೂ ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. “ಜಾತ್ಯತೀತತೆಯ ವ್ಯಾಪ್ತಿ ಇಷ್ಟೊಂದು ಸಂಕುಚಿತವಾಗಿರಲು ಸಾಧ್ಯವಿಲ್ಲ, ಕಾನೂನು ರೂಪಿಸುವ ಪ್ರಕ್ರಿಯೆಯನ್ನು ನಕ್ಸಲೀಯರ ಕಲ್ಪನೆಯಂತೆ ಮಾಡಲು ಆಗುವುದಿಲ್ಲ” ಎಂದು ಮೆಹ್ತಾ ವಾದಿಸಿದರು. ಇದಕ್ಕೆ ಮುರಳೀಧರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದರು. ಅಂತಿಮವಾಗಿ ಪೀಠವು, ರಾಷ್ಟ್ರೀಯ ಭಾವನೆಗಳನ್ನು ನಿರ್ಧರಿಸುವುದು ಸಂಸತ್ತಿನ ಕೆಲಸವಾದರೂ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಆತ್ಮಸಾಕ್ಷಿಯ ಹಕ್ಕುಗಳ ರಕ್ಷಣೆಗೆ ನ್ಯಾಯಾಲಯ ಬದ್ಧವಾಗಿದೆ ಎಂದು ಹೇಳಿ ವಿಚಾರಣೆ ಮುಂದುವರೆಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ಲಡಾಖ್‌ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ
ಲಡಾಖ್‌ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ
ದಸರಾ, ದೀಪಾವಳಿ: ರಾಜ್ಯಾದ್ಯಂತ ಸಿಹಿ ತಿಂಡಿ ಅಂಗಡಿಗಳ ಮೇಲೆ FSSAI ದಾಳಿ
ದಸರಾ, ದೀಪಾವಳಿ: ರಾಜ್ಯಾದ್ಯಂತ ಸಿಹಿ ತಿಂಡಿ ಅಂಗಡಿಗಳ ಮೇಲೆ FSSAI ದಾಳಿ
ಚಲಿಸುತ್ತಿದ್ದಾಗಲೇ ಕಳಚಿಬಿದ್ದ ಕೆಎಸ್‌ಆರ್‌ಟಿಸಿ ಬಸ್‌ ಟೈರ್
ಚಲಿಸುತ್ತಿದ್ದಾಗಲೇ ಕಳಚಿಬಿದ್ದ ಕೆಎಸ್‌ಆರ್‌ಟಿಸಿ ಬಸ್‌ ಟೈರ್
ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನದಲ್ಲೇ ಕುಮಾರಸ್ವಾಮಿ ವಾಗ್ದಾಳಿ
ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನದಲ್ಲೇ ಕುಮಾರಸ್ವಾಮಿ ವಾಗ್ದಾಳಿ
RSSಗೇ ಹೆದರಲಿಲ್ಲ, ನಿಮಗೆ ಹೆದರ್ತೀನಾ?: ಹೆಚ್​​ಡಿಕೆಗೆ ಪ್ರಿಯಾಂಕ್ ಕೌಂಟರ್​
RSSಗೇ ಹೆದರಲಿಲ್ಲ, ನಿಮಗೆ ಹೆದರ್ತೀನಾ?: ಹೆಚ್​​ಡಿಕೆಗೆ ಪ್ರಿಯಾಂಕ್ ಕೌಂಟರ್​