AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆಯಿಲ್ಲ ಎಂದ ಶಶಿ ತರೂರ್; ನೂತನ ರಾಜ್ಯಾಧ್ಯಕ್ಷರ ನೇಮಕಕ್ಕೆ ಆಗ್ರಹ

ಕೇರಳ ಕಾಂಗ್ರೆಸ್ ಘಟಕದೊಳಗಿನ ಆಂತರಿಕ ಗುಂಪುಗಾರಿಕೆಯಿಂದ ಅಂತರ ಕಾಯ್ದುಕೊಂಡಿರುವ ಹಿರಿಯ ಕಾಂಗ್ರೆಸ್ ನಾಯಕ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) ನೂತನ ಅಧ್ಯಕ್ಷರನ್ನು ನೇಮಿಸುವಂತೆ ಪಕ್ಷದ ಹೈಕಮಾಂಡ್​​ಗೆ ಕರೆ ನೀಡಿದ್ದಾರೆ. ತಿರುವನಂತಪುರಂನಲ್ಲಿ ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಶಶಿ ತರೂರ್, ಹೊಸ ಕೆಪಿಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಷಯವನ್ನು ತಾವು ಈಗಾಗಲೇ ಕೇಂದ್ರ ನಾಯಕತ್ವದ ಗಮನಕ್ಕೆ ತಂದಿರುವುದಾಗಿ ದೃಢಪಡಿಸಿದ್ದಾರೆ. ಹಾಗೇ, ಶೀಘ್ರದಲ್ಲೇ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಕೇರಳ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆಯಿಲ್ಲ ಎಂದ ಶಶಿ ತರೂರ್; ನೂತನ ರಾಜ್ಯಾಧ್ಯಕ್ಷರ ನೇಮಕಕ್ಕೆ ಆಗ್ರಹ
ಶಶಿ ತರೂರ್Image Credit source: PTI
ಸುಷ್ಮಾ ಚಕ್ರೆ
|

Updated on: Nov 24, 2026 | 8:11 PM

Share

ನವದೆಹಲಿ, ನವೆಂಬರ್ 24: ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ (ಕೆಪಿಸಿಸಿ) ಗುಂಪುಗಾರಿಕೆ ನಡೆಯುತ್ತಿದೆ ಎಂಬ ವರದಿಗಳನ್ನು ಹಿರಿಯ ಕಾಂಗ್ರೆಸ್ ನಾಯಕ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ಇಂದು ತಳ್ಳಿಹಾಕಿದ್ದಾರೆ. ಇದೇ ವೇಳೆ, ರಾಜ್ಯ ಘಟಕಕ್ಕೆ ನೂತನ ಅಧ್ಯಕ್ಷರನ್ನು ನೇಮಿಸುವಂತೆ ಪಕ್ಷದ ರಾಷ್ಟ್ರೀಯ ನಾಯಕತ್ವಕ್ಕೆ ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಕೇರಳದ ಯುಡಿಎಫ್ ಸರ್ಕಾರದಲ್ಲಿ ಎಲ್ಲಾ ಮಿತ್ರಪಕ್ಷಗಳಿಗೆ ಸೂಕ್ತ ಪ್ರಾತಿನಿಧ್ಯವಿದೆ ಎಂದು ಹೇಳಿದ ಶಶಿ ತರೂರ್, ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಎಲ್ಲಾ ಘಟಕ ಪಕ್ಷಗಳ ಅಭಿಪ್ರಾಯಗಳನ್ನು ಪರಿಗಣಿಸುವ ವ್ಯವಸ್ಥೆ ಜಾರಿಯಲ್ಲಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಪ್ರಸ್ತುತ ರಾಜ್ಯ ವಿದ್ಯುತ್ ಸಚಿವ ಸನ್ನಿ ಜೋಸೆಫ್ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ನಿಭಾಯಿಸುತ್ತಿದ್ದು, ರಾಜ್ಯ ಸಚಿವ ಸಂಪುಟದ ಭಾಗವಾಗಿಲ್ಲದ ನಾಯಕರೊಬ್ಬರನ್ನು ಸಂಘಟನಾ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂಬ ಬೇಡಿಕೆ ಪಕ್ಷದ ಒಂದು ವಲಯದಲ್ಲಿ ಹೆಚ್ಚಾಗಿದೆ. ಕೇರಳ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ ಎನ್ನಲಾದ ಆಂತರಿಕ ಕಚ್ಚಾಟ ಮತ್ತು ಬಣ ರಾಜಕೀಯದ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ಶಶಿ ತರೂರ್, ತಾವು ಪಕ್ಷದೊಳಗಿನ ಯಾವುದೇ ಬಣಕ್ಕೆ ಸೇರಿದವರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ನಾನೇನೂ ಟ್ರಾವೆಲ್ ಏಜೆಂಟ್ ಅಲ್ಲ’; ರಾಹುಲ್ ಗಾಂಧಿಯ ವಿಯೆಟ್ನಾಂ ಪ್ರವಾಸದ ಪ್ರಶ್ನೆಗೆ ಶಶಿ ತರೂರ್ ಖಡಕ್ ಉತ್ತರ

“ನಾನು ರಾಜಕೀಯಕ್ಕೆ ಬಂದಾಗಿನಿಂದಲೂ ಒಂದೇ ಪಕ್ಷದ ಭಾಗವಾಗಿದ್ದಾಗ ಅಲ್ಲಿ ಗುಂಪುಗಾರಿಕೆ ಇರಬಾರದು ಎಂದು ನಂಬಿದ್ದೇನೆ. ನಾನು ಕಾಂಗ್ರೆಸ್ ‘ಐ’ ಅಥವಾ ‘ಎ’ ಗುಂಪಿನವನಲ್ಲ; ನಾನು ಕಾಂಗ್ರೆಸ್ ‘ಯು’ ಸದಸ್ಯ, ಇಲ್ಲಿ ‘ಯು’ ಎಂದರೆ ‘ಯುನೈಟೆಡ್’ (ಒಗ್ಗಟ್ಟು)” ಎಂದು ಶಶಿ ತರೂರ್ ಸುದ್ದಿಗಾರರಿಗೆ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ರಾಜ್ಯ ಘಟಕಕ್ಕೆ ನೂತನ ಅಧ್ಯಕ್ಷರನ್ನು ನೇಮಿಸುವ ಕುರಿತು ಕೇಂದ್ರ ನಾಯಕತ್ವವು ಪರಿಶೀಲಿಸುತ್ತಿದೆ ಎಂದೂ ಅವರು ಹೇಳಿದ್ದಾರೆ.

ಕೇರಳದ ಆಡಳಿತಾರೂಢ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್​) ಮೈತ್ರಿಕೂಟದ ಪ್ರಮುಖ ನಿರ್ಧಾರಗಳನ್ನು ಎಲ್ಲಾ ಮಿತ್ರಪಕ್ಷಗಳೊಂದಿಗೆ ಸಮಾಲೋಚಿಸದೆ ತೆಗೆದುಕೊಳ್ಳಲಾಗುತ್ತಿದೆ ಎಂಬ ಆರೋಪಗಳನ್ನೂ ಶಶಿ ತರೂರ್ ತಳ್ಳಿಹಾಕಿದ್ದಾರೆ. ಯುಡಿಎಫ್ ಸರ್ಕಾರದಲ್ಲಿ ಪ್ರತಿಯೊಂದು ಘಟಕ ಪಕ್ಷಕ್ಕೂ ಪ್ರಾತಿನಿಧ್ಯವಿದೆ ಮತ್ತು ನೀತಿ ನಿರ್ಧಾರಗಳನ್ನು ಅಂತಿಮಗೊಳಿಸುವ ಮುನ್ನ ಅವುಗಳ ಅಭಿಪ್ರಾಯಗಳನ್ನು ಪರಿಗಣಿಸಲು ಸುಸ್ಥಾಪಿತ ವ್ಯವಸ್ಥೆಯೊಂದು ಅಸ್ತಿತ್ವದಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾರ್ಪೊರೇಟ್ ವಲಯದ ವಿರುದ್ಧದ ಪ್ರಧಾನಿ ಮೋದಿ ಟೀಕೆಗೆ ಶಶಿ ತರೂರ್ ಬೆಂಬಲ

ಕೇರಳ ಕಾಂಗ್ರೆಸ್‌ನಲ್ಲಿ ಸಾಂಪ್ರದಾಯಿಕವಾಗಿ ಕೆ. ಕರುಣಾಕರನ್ ನೇತೃತ್ವದ ‘ಐ’ ಗುಂಪು ಮತ್ತು ಎ.ಕೆ. ಆಂಟನಿ ನೇತೃತ್ವದ ‘ಎ’ ಗುಂಪುಗಳ ಪ್ರಾಬಲ್ಯವಿತ್ತು. ಇತ್ತೀಚಿನ ಚುನಾವಣೆಗಳ ಬಳಿಕ ರಾಜ್ಯ ಘಟಕದಲ್ಲಿ ಮತ್ತೆ ಆಂತರಿಕ ಭಿನ್ನಾಭಿಪ್ರಾಯ ಮತ್ತು ಗುಂಪುಗಾರಿಕೆಯ ಚರ್ಚೆಗಳು ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ, ಪಕ್ಷದ ಒಗ್ಗಟ್ಟು ಮತ್ತು ನಾಯಕತ್ವ ಬದಲಾವಣೆಯ ಕುರಿತು ಶಶಿ ತರೂರ್ ನೀಡಿರುವ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಧಾರಾಕಾರ ಮಳೆಯ ನಡುವೆಯೂ ಆಶಾ ಕಾರ್ಯಕರ್ತೆಯರ ಹೋರಾಟ
ಧಾರಾಕಾರ ಮಳೆಯ ನಡುವೆಯೂ ಆಶಾ ಕಾರ್ಯಕರ್ತೆಯರ ಹೋರಾಟ
ಗೊರಗುಂಟೆಪಾಳ್ಯದಿಂದ ಬೊಮ್ಮಸಂದ್ರಕ್ಕೆ ಹೃದಯ ಸಾಗಣೆ
ಗೊರಗುಂಟೆಪಾಳ್ಯದಿಂದ ಬೊಮ್ಮಸಂದ್ರಕ್ಕೆ ಹೃದಯ ಸಾಗಣೆ
ರಾಜೀನಾಮೆ ನೀಡಲು ಮುಂದಾಗಿದ್ದ ಕೈ ಶಾಸಕರನ್ನು ತಡೆದ ಕೆಪಿಸಿಸಿ ಅಧ್ಯಕ್ಷ
ರಾಜೀನಾಮೆ ನೀಡಲು ಮುಂದಾಗಿದ್ದ ಕೈ ಶಾಸಕರನ್ನು ತಡೆದ ಕೆಪಿಸಿಸಿ ಅಧ್ಯಕ್ಷ
‘100 ವರ್ಷ ಆದರೂ ಮರೆಯೋಕೆ ಸಾಧ್ಯವಿಲ್ಲ’: ಅಂಬರೀಷ್ ಬಗ್ಗೆ ಸುಮಲತಾ ಮಾತು
‘100 ವರ್ಷ ಆದರೂ ಮರೆಯೋಕೆ ಸಾಧ್ಯವಿಲ್ಲ’: ಅಂಬರೀಷ್ ಬಗ್ಗೆ ಸುಮಲತಾ ಮಾತು
ಕೆಲಸಕ್ಕೆ ಬಾರದವರೆಂದು ಕುಮಾರಸ್ವಾಮಿಯ ನಾಮಫಲಕ ತೆಗೆಸಿದ ಕಾಂಗ್ರೆಸ್ ಶಾಸಕ
ಕೆಲಸಕ್ಕೆ ಬಾರದವರೆಂದು ಕುಮಾರಸ್ವಾಮಿಯ ನಾಮಫಲಕ ತೆಗೆಸಿದ ಕಾಂಗ್ರೆಸ್ ಶಾಸಕ
ಜಪಾನ್‌ನಿಂದಲೇ ಆಶಾ ಕಾರ್ಯಕರ್ತೆಯರಿಗೆ ವಿಡಿಯೋ ಕಾಲ್ ಮಾಡಿದ ಸಿಎಂ!
ಜಪಾನ್‌ನಿಂದಲೇ ಆಶಾ ಕಾರ್ಯಕರ್ತೆಯರಿಗೆ ವಿಡಿಯೋ ಕಾಲ್ ಮಾಡಿದ ಸಿಎಂ!
ಜಪಾನ್ ನಗರ ಸಂಚಾರ ಮಾದರಿಗಳತ್ತ ಕರ್ನಾಟಕದ ಚಿತ್ತ
ಜಪಾನ್ ನಗರ ಸಂಚಾರ ಮಾದರಿಗಳತ್ತ ಕರ್ನಾಟಕದ ಚಿತ್ತ
ಅಂಬರೀಷ್ 8ನೇ ವರ್ಷದ ಪುಣ್ಯಸ್ಮರಣೆ; ಅಂಬಿ ಸಮಾಧಿಗೆ ವಿಶೇಷ ಪೂಜೆ
ಅಂಬರೀಷ್ 8ನೇ ವರ್ಷದ ಪುಣ್ಯಸ್ಮರಣೆ; ಅಂಬಿ ಸಮಾಧಿಗೆ ವಿಶೇಷ ಪೂಜೆ
ಬಿಜೆಪಿ ಗೆದ್ದರೆ 5 ಗ್ಯಾರಂಟಿಗಳು ವಾಪಸ್‌: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ
ಬಿಜೆಪಿ ಗೆದ್ದರೆ 5 ಗ್ಯಾರಂಟಿಗಳು ವಾಪಸ್‌: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ
ಸತ್ತ ಮರಿಯನ್ನೂ ಬಿಟ್ಟುಕೊಡದ ತಾಯಿ ಕೋತಿ: ಮುಂಡರಗಿಯಲ್ಲಿ ಮನಕಲಕುವ ದೃಶ್ಯ
ಸತ್ತ ಮರಿಯನ್ನೂ ಬಿಟ್ಟುಕೊಡದ ತಾಯಿ ಕೋತಿ: ಮುಂಡರಗಿಯಲ್ಲಿ ಮನಕಲಕುವ ದೃಶ್ಯ