ಟೀ ಕುಡಿಯುವ ವೇಳೆ.. ಉಸಿರು ಚೆಲ್ಲಿದ ಕುಂದಾನಗರಿಯ ಗ್ರಾ.ಪಂ ಚುನಾವಣೆ ಅಭ್ಯರ್ಥಿ

ಗ್ರಾ.ಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿ ಹೃದಯಾಘಾತದಿಂದ ಅಸು ನೀಗಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ನಡೆದಿದೆ. ಟೀ ಕುಡಿಯುವ ವೇಳೆ ಚುನಾವಣಾ ಅಭ್ಯರ್ಥಿ ಮಾರುತಿಗೌಡ ಭೀಮಗೌಡ ಪಾಟೀಲ್(65) ಕೊನೆಯುಸಿರೆಳೆದಿದ್ದಾರೆ.

ಟೀ ಕುಡಿಯುವ ವೇಳೆ.. ಉಸಿರು ಚೆಲ್ಲಿದ ಕುಂದಾನಗರಿಯ ಗ್ರಾ.ಪಂ ಚುನಾವಣೆ ಅಭ್ಯರ್ಥಿ
ಹೃದಯಾಘಾತದಿಂದ ಅಸುನೀಗಿದ ಗ್ರಾ.ಪಂ ಚುನಾವಣೆ ಅಭ್ಯರ್ಥಿ

Updated on: Dec 24, 2020 | 11:44 AM

ಬೆಳಗಾವಿ: ಗ್ರಾ.ಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿ ಹೃದಯಾಘಾತದಿಂದ ಅಸು ನೀಗಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ನಡೆದಿದೆ. ಟೀ ಕುಡಿಯುವ ವೇಳೆ ಚುನಾವಣಾ ಅಭ್ಯರ್ಥಿ ಮಾರುತಿಗೌಡ ಭೀಮಗೌಡ ಪಾಟೀಲ್(65) ಕೊನೆಯುಸಿರೆಳೆದಿದ್ದಾರೆ.

ಮಾರುತಿಗೌಡ ಭೀಮಗೌಡ ಪಾಟೀಲ್ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದ ನಿವಾಸಿ. ಡೆಸೆಂಬರ್​ 22ರಂದು ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗ್ರಾಮದ ವಾರ್ಡ್ ನಂ 3ರಲ್ಲಿ ಸ್ಪರ್ಧೆ ಮಾಡಿದ್ದರು. ಮಾರುತಿಗೌಡ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧ‌ನರಾಗಿದ್ದಾರೆ.

ಹಾಲು ಉತ್ಪಾದಕರ ಸಂಘ: ಶಾಸಕ ಭೀಮಾ ನಾಯ್ಕ್‌ ಸದಸ್ಯತ್ವ ರದ್ದು.. ಕಾರಣವೇನು ಗೊತ್ತಾ?