ಹಸುವಿನ ಮೇಲೆ ದಾಳಿ ಮಾಡಿ.. ನಾಯಿಯನ್ನು ಎಳೆದೊಯ್ದ ಚಿರತೆಗಳು

ನಿನ್ನೆ ತಡರಾತ್ರಿ ಸಿದ್ದಿಕೇರಿ ಕ್ಯಾಂಪ್ನ ರಮೇಶ್ ಘಾಯಕವಾಡ ಎಂಬುವವರಿಗೆ ಸೇರಿದ ಹಸುವಿನ ಮೇಲೆ ಎರಡು ಚಿರತೆಗಳು ದಾಳಿ ಮಾಡಿ ನಾಯಿಯನ್ನು ಎಳೆದೊಯ್ದಿದೆ.

  • TV9 Web Team
  • Published On - 12:01 PM, 24 Dec 2020
ಹಸುವಿನ ಮೇಲೆ ದಾಳಿ ಮಾಡಿ.. ನಾಯಿಯನ್ನು ಎಳೆದೊಯ್ದ ಚಿರತೆಗಳು
ಗಾಯಗೊಂಡ ಹಸುಗಳು

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಸಿದ್ದಿಕೇರಿ ಕ್ಯಾಂಪ್ ಬಳಿ ಹಸುವಿನ ಮೇಲೆ ಚಿರತೆಗಳಿಂದ ದಾಳಿ ನಡೆದಿದ್ದು, ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿನ್ನೆ ತಡರಾತ್ರಿ ಸಿದ್ದಿಕೇರಿ ಕ್ಯಾಂಪ್​ನ ರಮೇಶ್  ಗಾಯಕವಾಡ ಎಂಬುವವರಿಗೆ ಸೇರಿದ ಹಸುವಿನ ಮೇಲೆ ಎರಡು ಚಿರತೆಗಳು ದಾಳಿ ಮಾಡಿ ನಾಯಿಯನ್ನು ಎಳೆದೊಯ್ದಿವೆ. ಚಿರತೆಯ ದಾಳಿಯನ್ನು ಕಂಡ ಸ್ಥಳೀಯರು ಹಸುವನ್ನು ರಕ್ಷಿಸಲು ಮುಂದಾಗಿ ಚಿರತೆಗಳನ್ನು ಓಡಿಸಿದರು.

ಎರಡು ಚಿರತೆ ಸಾವು, ಔಷಧ ಮಿಶ್ರಿತ ಆಹಾರ ತಿಂದು ಸಾವನ್ನಪ್ಪಿರುವ ಶಂಕೆ