ಬೆಂಗಳೂರು: ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯಕ್ ಗರಂ ಆದ ಪ್ರಸಂಗ ನಡೆದಿದೆ. ಅಲ್ಲಿದ್ದ ಸಿಬ್ಬಂದಿಯೊಂದಿಗೆ ಜೋರು ಧ್ವನಿಯಲ್ಲಿ ಕೂಗಾಡಿದ್ದಾರೆ. ಪಿ.ಟಿ.ಪರಮೇಶ್ವರ ನಾಯಕ್ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಕೃಷ್ಣಾಗೆ ಆಗಮಿಸಿದ್ದ ವೇಳೆ ಇಂತಹ ಘಟನೆ ನಡೆದಿದೆ.
ಪಿ.ಟಿ.ಪರಮೇಶ್ವರ ನಾಯಕ್ ಇದ್ದ ಕಾರು ಕೃಷ್ಣಾದೊಳಗೆ ಪ್ರವೇಶಿಸಿದಾಗ ಸಂಚಾರಿ ಪೊಲೀಸ್ ಸಿಬ್ಬಂದಿಯವರು ಎಡ ಭಾಗದಲ್ಲಿ ತೆರಳುವಂತೆ ಸೂಚಿಸಿದ್ದಾರೆ. ಆದರೆ ಸಂಚಾರಿ ಪೊಲೀಸ್ ಸಿಬ್ಬಂದಿ ಸೂಚನೆ ನಿರ್ಲಕ್ಷಿಸಿ ಪರಮೇಶ್ವರ ನಾಯ್ಕ್ ಕಾರು ಚಾಲಕ ಎಡಭಾಗಕ್ಕೆ ತೆರಳದೇ ನೇರವಾಗಿ ಬಲಭಾಗದಲ್ಲಿ ಚಲಾಯಿಸಿದ್ದಾರೆ.
ಬಳಿಕ ಕಾರಿನಿಂದ ಇಳಿದ ಪರಮೇಶ್ವರ ನಾಯಕ್ ಆಯ್ತಪ್ಪಾ! ಆ ಮುಖ್ಯಮಂತ್ರಿ ಇದ್ದಾಗ ಆ ಭಾಗದಲ್ಲಿ ಬರುತ್ತಿದ್ದೆವು.. ಈ ಮುಖ್ಯಮಂತ್ರಿ ಇದ್ದಾಗ ಈ ಭಾಗದಲ್ಲಿ ಬರ್ತಿದ್ದೇವೆ! ಏನಿದೆ ಅಂತಾ ನಮಗೂ ಗೊತ್ತಾಗಬೇಕಲ್ವಾ? ಎಂದು ಜೋರು ಧ್ವನಿಯಲ್ಲಿ ಹೇಳಿದ್ದಾರೆ. ಪರಮೇಶ್ವರ ನಾಯಕ್ ಅವರ ಜೋರು ಧ್ವನಿ ಕೇಳಿಸುತ್ತಿದ್ದಂತೆ ಸಿಎಂ ಸಲಹೆಗಾರ ಲಕ್ಷ್ಮೀನಾರಾಯಣ ಏನಾಯ್ತು ಅಂತಾ ವಿಚಾರಿಸಿ ಕೃಷ್ಣಾ ಒಳಗೆ ಕರೆದೊಯ್ದು ಸಮಾಧಾನಪಡಿಸಿದ್ರು.
ಟೀ ಕುಡಿಯುವ ವೇಳೆ.. ಉಸಿರು ಚೆಲ್ಲಿದ ಕುಂದಾನಗರಿಯ ಗ್ರಾ.ಪಂ ಚುನಾವಣೆ ಅಭ್ಯರ್ಥಿ