ಅಪಘಾತ ಮಾಡಿ ಆಸ್ಪತ್ರೆಗೆ ಬಾಲಕನ್ನು ಕರೆತಂದು ಪೊಲೀಸರಿಗೆ ಶರಣಾದ ಚಾಲಕ
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದ ಬಳಿ ಬಾಲಕ ರಸ್ತೆ ದಾಟುವಾಗ ಕಾರು ಗುದ್ದಿದೆ. ಅಪಘಾತವಾದ ಬಳಿಕ ತನ್ನದೇ ವಾಹನದಲ್ಲಿ ಚಾಲಕ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಬಳಿಕ ಕಾರು ಚಾಲಕ ತಾನೇ ಹೋಗಿ ಪೊಲೀಸಿರಿಗೆ ಶರಣಾಗಿರುವಂತಹ ಘಟನೆ ನಡೆದಿದೆ.
ಬೆಳಗಾವಿ, ಜೂನ್ 17: ಅಪಘಾತ (accident) ಮಾಡಿದ್ದಲ್ಲದೇ ಬಾಲಕನನ್ನು ಆಸ್ಪತ್ರೆಗೆ ಸೇರಿ ಬಳಿಕ ತಾನೇ ಹೋಗಿ ಚಾಲಕ ಪೊಲೀಸರಿಗೆ ಶರಣಾಗಿರುವಂತಹ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ಬಾಲಕ ವಿನಯ್ ಲಕ್ಷ್ಮಣ್ ಕೆಂಚನ್ನವರ್(8) ಮೃತಪಟ್ಟಿದ್ದಾರೆ. ನಾಗನೂರು ಬಳಿ ಬಾಲಕ ರಸ್ತೆ ದಾಟುವಾಗ ಕಾರು ಗುದ್ದಿದೆ. ಅಪಘಾತವಾದ ಬಳಿಕ ತನ್ನದೇ ವಾಹನದಲ್ಲಿ ಚಾಲಕ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ.
ಆದರೆ ಬಾಲಕ ಮೃತಪಟ್ಟಿರುವುದಾಗಿ ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಅಲ್ಲಿಂದ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆಸ್ಪತ್ರೆ ಒಳಗೆ ಪೋಷಕರು ಬಾಲಕನನ್ನ ತೆಗೆದುಕೊಂಡು ಹೋಗುತ್ತಿದ್ದಂತೆ ಇತ್ತ ಚಾಲಕ ಪೊಲೀಸ್ ಠಾಣೆಗೆ ಓಡಿ ಹೋಗಿ ಶರಣಾಗಿದ್ದಾನೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಿರಿಯ ಅಧಿಕಾರಿ ಮೇಲೆ ವಾರ್ಡನ್ನಿಂದ ಹಲ್ಲೆ
ಯಾದಗಿರಿ: ಹಿರಿಯ ಅಧಿಕಾರಿ ಮೇಲೆ ವಾರ್ಡನ್ನಿಂದ ಹಲ್ಲೆ ಮಾಡಿರುವಂತಹ ಘಟನೆ ನಗರದ ಸಮಾಜ ಕಲ್ಯಾಣ ಇಲಾಖೆ ಯಾದಗಿರಿ ತಾಲೂಕು ಕಚೇರಿಯಲ್ಲಿ ಕಳೆದ ಶನಿವಾರ ನಡೆದಿದೆ. ಸಮಾಜ ಕಲ್ಯಾಣ ಯಾದಗಿರಿ ತಾಲೂಕು ಅಧಿಕಾರಿ ಸಂಗಪ್ಪ ಪೂಜಾರಿ ಮೇಲೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ವಾರ್ಡನ್ ಶಾಂತಮ್ಮರಿಂದ ಹಲ್ಲೆ ಮಾಡಲಾಗಿದೆ.
ಇದನ್ನೂ ಓದಿ: ಶಿವಮೊಗ್ಗದ ಮಹಿಳೆ, ವಿಜಯಪುರದ ಯುವಕ: ಫೇಸ್‌ಬುಕ್ ಲವ್ ಕೊಲೆಯಲ್ಲಿ ಅಂತ್ಯ
ಕರ್ತವ್ಯ ಲೋಪ ಹಿನ್ನಲೆ ಜಿಲ್ಲಾ ಪಂಚಾಯತ ಸಿಇಒ ಶಾಂತಮ್ಮಳನ್ನ ಅಮಾನತು ಮಾಡಲಾಗಿದೆ. ಸಸ್ಪೆಂಡ್ ಆದೇಶ ಪ್ರತಿ ಕೊಡಲು ವಾರ್ಡನ್ ಶಾಂತಮ್ಮಗೆ ಸಂಗಪ್ಪ ಕಚೇರಿಗೆ ಕರೆದಿದ್ದರು. ಈ ವೇಳೆ ಸಸ್ಪೆಂಡ್ ಮಾಡಿಸಿದ್ದಿಯಾ ಎಂದು ಜೋರಾಗಿ ಕಿರುಚಾಡಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿರುವ ವಿಡಿಯೋ ಹಾಗೂ ಆಡಿಯೋ ಕಚೇರಿಯ ಸಿಸಿಟಿವಿ ಕ್ಯಾಮರದಲ್ಲಿ ಸೆರೆ ಆಗಿದೆ. ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
ನಿಂತಿದ್ದ ವಾಟರ್ ಟ್ಯಾಂಕ್ಗೆ ಬೈಕ್ ಡಿಕ್ಕಿ: ಸವಾರ ಸಾವು
ರಾಯಚೂರು: ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಬಳಿ ವಾಟರ್ ಟ್ಯಾಂಕ್ಗೆ ಬೈಕ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಮಸ್ಕಿ ತಾಲೂಕಿನ ಗುಡಿಹಾಳ ಗ್ರಾಮದ ಯಮನಪ್ಪ (40) ಮೃತ ವ್ಯಕ್ತಿ. ಮತ್ತೊಬ್ಬ ಸವಾರನಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.