ಬೆಳಗಾವಿ ತಾಲೂಕಿನ ಸುತಗಟ್ಟಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೈಕ್ ಮತ್ತು ಸರ್ಕಾರಿ ಬಸ್ಗೆ ಬೈಕ್ ಡಿಕ್ಕಿಹೊಡೆದಿದೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದ ಅಪಘಾತದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು ಅದೃಷ್ಟವಶಾಂತ್ ಅಪಾಯದಿಂದ ಪಾರಾಗಿದ್ದಾರೆ. ಸದ್ರುದ್ದೀನ್, ಮಾರುತಿ ಖೋತ, ರಾಮ ವಂಟಮೂರಿ ಎಂಬ ಮೂವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಳಗಾವಿಯಿಂದ ಸಂಕೇಶ್ವರದತ್ತ ಎನ್‌ಹೆಚ್4 ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಸರ್ಕಾರಿ ಬಸ್ ಎದುರು ತಗಟ್ಟಿಯಿಂದ ಎಂ-80 ಮೋಟಾರ್ ಸೈಕಲ್ ಬಂದಿದೆ. ಈ ವೇಳೆ ಅಪಘಾತ ತಪ್ಪಿಸಲು ಹೋಗಿ ರಸ್ತೆ ದಾಟಲು ನಿಂತಿದ್ದ ಮತ್ತೊಂದು ರಾಮಾ ವಂಟಮೂರಿ, ಮಾರುತಿ ಖೋತರ ಬೈಕ್‌ಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿದ್ಯುತ್ ತಂತಿ ತುಂಡಾಗಿ ಬಿದ್ದು ಚಾಲಕ ಮೃತ
ಮಡಿಕೇರಿ: ಆಟೋ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದು ಚಾಲಕ ಮೃತಪಟ್ಟ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆಯ ಗಾಂಧಿನಗರದಲ್ಲಿ ನಡೆದಿದೆ. ಮುಂಜಾನೆ ಆಟೋ ತೊಳೆಯುತ್ತಿದ್ದ ವೇಳೆ ದಿವಾಕರ್(58) ಎಂಬ ವ್ಯಕ್ತಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ವಿರಾಜಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ವಿದ್ಯುತ್ ತಂತಿ ತಗುಲಿ ಆಟೋ ಚಾಲಕ ಸಾವು ಹಿನ್ನಲೆ ಕುಟುಂಬಸ್ಥರು ಮತ್ತು ಆಟೋ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿರಾಜಪೇಟೆ ತಾಲೂಕು ಆಸ್ಪತ್ರೆ ಶವಾಗಾರದ ಎದುರು ಚೆಸ್ಕಾಂ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳದಲ್ಲೇ ಎರಡು ಲಕ್ಷ ರೂ ಪರಿಹಾರಕ್ಕೆ ಆಗ್ರಹಿಸಿ ಶವ ಸ್ವೀಕರಿಸದೆ ಕುಟುಂಬಸ್ಥರು ಧರಣಿ ನಡೆಸುತ್ತಿದ್ದಾರೆ.
ಕುಡಿದ ಮತ್ತಿನಲ್ಲಿ ಹಲ್ಲೆ ವ್ಯಕ್ತಿ ಸಾವು
ಕುಡಿದ ಮತ್ತಿನಲ್ಲಿ ಹಣದ ವಿಚಾರಕ್ಕೆ ಮಾರಣಾಂತಿಕ ಹಲ್ಲೆ ನಡೆದಿದ್ದು ವ್ಯಕ್ತಿ ಮೃತಪಟ್ಟ ಘಟನೆ ಯಲಹಂಕ ನ್ಯೂ ಟೌನ್ ನ ಅಟ್ಟೂರು ಬಳಿ ನಡೆದಿದೆ. ರವಿಕಿರಣ್ (27) ಮೃತ ದುರ್ದೈವಿ. ಕಳೆದ ತಿಂಗಳ 25 ರಂದು ರಾತ್ರಿ ರವಿ ಕಿರಣ್ ಜೊತೆ ಕುಡಿದು ಗಲಾಟೆ ಮಾಡಿದ್ದ ಬಾಲಕೃಷ್ಣ ಇದೇ ವೇಳೆ ಕಿರಣ್ ತಲೆ ಮೇಲೆ ಇಟ್ಟಿಗೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಗಾಯಾಳುವನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. 307 ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಾಲಕೃಷ್ಣನನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ 302 ಅಡಿ ಪ್ರಕರಣ ದಾಖಲು ದಾಖಲಾಗಿದ್ದು ಬಾಲಕೃಷ್ಣ ಅಪರಾಧ ಹಿನ್ನಲೆವುಳ್ಳವನಾಗಿದ್ದು, ಆಗಾಗ ಏರಿಯಾದಲ್ಲಿ ಕುಡಿದು ಹಲ್ಲೆ ಗಲಾಟೆ ಮಾಡ್ತಿದ್ದ ಎಂದು ತಿಳಿದು ಬಂದಿದೆ.
Published On - 9:46 am, Sun, 8 May 22