ಕೊಳೆತ ತರಕಾರಿ, ಹುಳುಗಳು ತುಂಬಿದ ಧಾನ್ಯಗಳಿಂದ ವಿದ್ಯಾರ್ಥಿಗಳಿಗೆ ಅಡುಗೆ; BCM ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟ
ಗಬ್ಬೆದ್ದು ನಾರುವ ತರಕಾರಿ, ವಿವಿಧ ಧಾನ್ಯಗಳಲ್ಲಿ ಸಂಸಾರ ಕಟ್ಟಿಕೊಂಡ ಹುಳಗಳನ್ನೇ ಬೇಯಿಸಿ ವಿದ್ಯಾರ್ಥಿಗಳಿಗೆ ಬಡಿಸಲಾಗುತ್ತಿದೆ. ರವೆ, ವಿವಿಧ ಕಾಳು ಪದಾರ್ಥಗಳಲ್ಲಿ ನುಸಿಗಳು ಕಂಡು ಬಂದಿವೆ. ಇಂತಹ ಕಳಪೆ ಮಟ್ಟದ ಪದಾರ್ಥಗಳಿಂದ ವಿದ್ಯಾರ್ಥಿಗಳಿಗೆ ಅಡುಗೆ ಮಾಡಲಾಗುತ್ತಿದೆ.
ಗದಗ: ಜಿಲ್ಲೆಯ BCM ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ನಗರದ ಸಂಭಾಪುರ ರಸ್ತೆಯಲ್ಲಿರುವ ದೇವರಾಜ ಅರಸು ಬಾಲಕರ ವಸತಿ ನಿಲಯದಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದ್ದು ಗಬ್ಬೆದ್ದು ನಾರುವ ತರಕಾರಿ, ವಿವಿಧ ಧಾನ್ಯಗಳಲ್ಲಿ ಸಂಸಾರ ಕಟ್ಟಿಕೊಂಡ ಹುಳಗಳನ್ನೇ ಬೇಯಿಸಿ ವಿದ್ಯಾರ್ಥಿಗಳಿಗೆ ಬಡಿಸಲಾಗುತ್ತಿದೆ. ರವೆ, ವಿವಿಧ ಕಾಳು ಪದಾರ್ಥಗಳಲ್ಲಿ ನುಸಿಗಳು ಕಂಡು ಬಂದಿವೆ. ಇಂತಹ ಕಳಪೆ ಮಟ್ಟದ ಪದಾರ್ಥಗಳಿಂದ ವಿದ್ಯಾರ್ಥಿಗಳಿಗೆ ಅಡುಗೆ ಮಾಡಲಾಗುತ್ತಿದೆ.
ಸರ್ಕಾರ ಬಡ ಮಕ್ಕಳ ಶಿಕ್ಷಣಕ್ಕೆ ಅನಕೂಲ ಆಗ್ಲಿ ಅಂತ ಕೋಟಿ ಕೋಟಿ ವೆಚ್ಚ ಮಾಡಿ ಹೈಟೆಕ್ ಹಾಸ್ಟೆಲ್ ನಿರ್ಮಾಣ ಮಾಡಿದೆ. ಅಲ್ಲಿ ಎಲ್ಲ ಸೌಲಭ್ಯ ನೀಡಲಾಗಿದೆ. ಆದ್ರೆ, ಅಧಿಕಾರಿಗಳ ಹಣದ ದಾಹ ವಿದ್ಯಾರ್ಥಿಗಳ ಜೀನವ ಜೊತೆ ಚೆಲ್ಲಾಟ ಆಡುವಂತೆ ಮಾಡಿದೆ. ಹೌದು ಇಲ್ಲೊಂದು ಹಾಸ್ಟೆಲ್ ನಲ್ಲಿ ಆಹಾರ ಪದಾರ್ಥಗಳಲ್ಲಿ ನುಸಿಗಳು ಭುಸುಗುಟ್ಟುತ್ತಿವೆ. ತರಕಾರಿ ಗಬ್ಬು ವಾಸನೆ ಬೀರುತ್ತಿವೆ. ಇಂಥ ಪದಾರ್ಥಗಳಿಂದಲೇ ವಿದ್ಯಾರ್ಥಿಗಳಿಗೆ ಅಡುಗೆ ಮಾಡಲಾಗುತ್ತಿದೆ. ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ರೂಂನಲ್ಲಿ ಗಬ್ಬೆದ್ದು ನಾರುತ್ತಿರುವ ತರಕಾರಿ. ಹಾಸ್ಟೆಲ್ ನಲ್ಲಿ ಕಾಲಿಟ್ರೆ ಸಾಕು ಕೊಳೆತು ಗಬ್ಬೆದ್ದು ನಾರುತ್ತಿರೋ ವಾಸನೆ. ರವೆ, ಧಾನ್ಯಗಳಲ್ಲಿ ಬುಸುಗುಟ್ಟುತ್ತಿರೋ ಹುಳುಗಳು. ಕಳಪೆ ಧಾನ್ಯ ಹಾಗೂ ತರಕಾರಿಗಳಿಂದಲೇ ತಯ್ಯಾರಿಸಿ ಆಹಾರ ಮಾಡ್ತಾರೆ ಅಂತ ವಿದ್ಯಾರ್ಥಿಗಳ ಆಕ್ರೋಶ. ಈ ಎಲ್ಲ ಅವ್ಯವಸ್ಥೆ ತಾಂಡವಾಡುತ್ತಿರೋದು ಗದಗ ನಗರದ ಸಂಭಾಪೂರ ರಸ್ತೆಯಲ್ಲಿರೋ ದಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ. ಬಡತದಲ್ಲಿ ಬೆಂದ ಹಿಂದುಳಿದ ವರ್ಗಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗದಿಲಿ. ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಅನಕೂಲ ಆಗಲಿ ಅಂತ ಸರ್ಕಾರ ಕೋಟಿ ಕೋಟಿ ವೆಚ್ಚದಲ್ಲಿ ಹೈಟೆಕ್ ವಸತಿ ನಿಲಯಗಳು ನಿರ್ಮಾಣ ಮಾಡಿದೆ. ಜೊತೆಗೆ ಎಲ್ಲ ಅಗತ್ಯ ಸೌಲಭ್ಯ ನೀಡುವ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಅನಕೂಲ ಮಾಡಿದೆ. ಆದ್ರೆ, ಅಧಿಕಾರಿಗಳ ನಿರ್ಲಕ್ಷ್ಯ, ಹಣದ ದಾಹಕ್ಕೆ ಬಡ ಮಕ್ಕಳು ಕಳೆಪೆ ಮಟ್ಟದ ಊಟ ಮಾಡುವ ದುಸ್ಥಿತಿ ಬಂದೊದಗಿದೆ.
ಹೌದು ಈ ವಸತಿ ನಿಲಯದಲ್ಲಿ ತರಹಕಾರಿ, ದವಸಧಾನ್ಯಗಳು ನೋಡಿದ್ರೆ ಮೈಜುಮ್ ಎನ್ನುತ್ತೆ. ರೂಂನಲ್ಲಿ ಇಟ್ಟಿರೋ ತರಕಾರಿ ಕೊಳೆತು ಗಬ್ಬೆದ್ದು ನಾರುತ್ತಿದೆ. ಇಂಥ ತರಕಾರಿ ರೂಂ ಬಾಗಿಲು ಮುಚ್ಚಿಕೊಂಡು ಸ್ವಚ್ಛತೆ ಮಾಡಿ ವಿದ್ಯಾರ್ಥಿಗಳಿಗೆ ಅಡುಗೆ ಮಾಡಲು ಸಿದ್ದತೆ ಮಾಡ್ತಾಯಿದ್ದಾರೆ. ವಿದ್ಯಾರ್ಥಿಗಳಿಗೆ ಗಬ್ಬು ವಾಸನೆ ನೋಡಿ ಏನಿದೆ ಅಂತ ನೋಡಿದಾಗಿ ಅಧಿಕಾರಿಗಳ ಅಸಲಿ ಮುಖವಾಡ ಬಯಲಾಗಿದೆ. ಹಾಸ್ಟೆಲ್ ವಾರ್ಡ್ ಬಾರಾಟೆಕ್ಕೆ ಮೇಡಂ ಹಣದ ದಾಹವೇ ಈ ಎಲ್ಲ ಅವ್ಯವಸ್ಥೆ ಕಾರಣ ಅಂತ ವಿದ್ಯಾರ್ಥಿಗಳ ಆರೋಪ. ಈ ಬಗ್ಗೆ ಬಿಸಿಎಂ ಇಲಾಖೆ ಜಿಲ್ಲಾಧಿಕಾರಿ ಮಹೆಬೂಬ್ ತುಂಬರಮಟ್ಟಿ ವಿದ್ಯಾರ್ಥಿಗಳು ಎರಡ್ಮೂರು ಬಾರಿ ಮನವಿ ಮಾಡಿದ್ರು. ಈ ಅಧಿಕಾರಿ ವಿದ್ಯಾರ್ಥಿಗಳ ಗೋಳು ಕೇಳಿಲ್ಲ. ಹೀಗಾಗಿ ರೊಚ್ಚಿಗೆದ್ದ ವಿದ್ಯಾರ್ಥಿಗಳು ಇವತ್ತು ಬಿಸಿಎಂ ಇಲಾಖೆ ಅಧಿಕಾರಿಗಳ ಅಸಲಿ ಮುಖವಾಡ ಬಯಲು ಮಾಡಿದ್ದಾರೆ.
BCM ಇಲಾಖೆ ಅಧಿಕಾರಿಗಳು ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡ್ತಾಯಿದ್ದಾರೆ. ಗಬ್ಬೆದ್ದು ನಾರುವ ತರಕಾರಿ, ರವೆ, ಹುರಳಿಕಾಳು ಸೇರಿ ವಿವಿಧ ಧಾನ್ಯಗಳಲ್ಲಿ ಬುಸುಗುಟ್ಟುತ್ತಿವೆ ಹುಳಗಳು ನೋಡಿ ವಿದ್ಯಾರ್ತಿಗಳು ಕಂಗಾಲಾಗಿದ್ದಾರೆ. ನಾವು ನಿತ್ಯವೂ ಇಂಥ ಧಾನ್ಯಗಳು, ತರಕಾರಿಗಳಿಂದ ಮಾಡಿದ ಆಹಾರ ಸೇವಿಸುತ್ತಿದ್ದೇವೆ ಅಂತ ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ಗುಣಮಟ್ಟದ ದವಸಧಾನ್ಯಗಳು ಖರೀದಿಗೆ ಟೆಂಡರ್ ನೀಡಿದೆ. ಆದ್ರೆ, ಗದಗ ಜಿಲ್ಲೆಯಲ್ಲಿ ವಸತಿ ನಿಲಯಗಳಿಗೆ ಸಂಪೂರ್ಣ ಕಳಪೆ ಆಹಾರ ಪೂರೈಕೆ ಆಗ್ತಾಯಿದೆ ಅನ್ನೋದು ಇಲ್ಲಿನ ವ್ಯವಸ್ಥೆ ಸತ್ಯ ಹೇಳುತ್ತಿದೆ. ಇಷ್ಟೊಂದು ಕಳಪೆ ದವಸಧಾನ್ಯಗಳು ಪೂರೈಕೆ ಆಗ್ತಗಾಯಿದ್ರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು ಯಾಕೇ ಅನ್ನೋ ಅನುಮಾನ, ಪ್ರಶ್ನೆ ಕಾಡ್ತಾಯಿದೆ. ರವೆ, ವಿವಿಧ ಕಾಳು ಪದಾರ್ಥಗಳಲ್ಲಿ ಬುಸುಗುಟ್ಟುವ ನುಸಿಗಳು ಮಕ್ಕಳಲ್ಲಿ ಭಯ ಹುಟ್ಟಿಸಿದೆ. ಅವ್ಯವಸ್ಥೆ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿವಿ9 ವಸತಿ ನಿಲಯಕ್ಕೆ ಬರ್ತಾಯಿದೆ ಅನ್ನೋ ವಿಷಯ ಗೋತ್ತಾದ ಬಳಿಕ BCM ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಮಹೆಬೂಬ್ ತುಂಬರಮಟ್ಟಿ ಓಡಿ ಬಂದಿದ್ದಾರೆ. ಆದ್ರೆ, ಈ ಬಗ್ಗೆ ಅವ್ರನ್ನು ಕೇಳಿದ್ರೆ ಏನಿಲ್ಲ ಬಿಟ್ಟುಬಿಡಿ ಸಣ್ಣ ಸಮಸ್ಯೆ ಆಗಿದೆ ಅಂತ ಬೇಜವಾಬ್ದಾರಿ ಮಾತನಾಡಿದ್ದಾರೆ. ಮಾತನಾಡಲು ನಿರಾಕರಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸರಿಯಾಗಿ ಊಟದ ವ್ಯವಸ್ಥೆ ಇಲ್ಲ. ಹೀಗಿಗಾ ನಿತ್ಯವೂ ಅರೆಬರೆ ಹೊಟ್ಟೆಯಿಂದ ಒದ್ದಾಡುವಂತಾಗಿದೆ ಅಂತ ವಿದ್ಯಾರ್ಥಿಗಳು ತಮ್ಮ ಗೋಳು ತೋಡಿಕೊಂಡಿದ್ದಾರೆ. ಬಿಸಿಎಂ ಇಲಾಖೆ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಮೂರು ಬಾರಿ ಗಮನಕ್ಕೆ ತಂದ್ರೂ ಡೋಂಟ್ ಎಂದಿದ್ದಾರೆ. ತರಕಾರಿ ಗಬ್ಬು ವಾಸನೆ ಬಳಿಕ ಮತ್ತಷ್ಟು ಅವ್ಯವಸ್ಥೆ ಬಯಲಾಗಿದೆ. ಶೌಚಾಲಯ, ಬಾತ್ ರೂಂಗಳು ಸ್ವಚ್ಚತೆ ಬಗ್ಗೆಯೂ ನಿರ್ಲಕ್ಷ್ಯ ತೋರಿದ್ದಾರೆ ಅಂತ ವಿದ್ಯಾರ್ಥಿಗಳು ಕಿಡಿ ಕಾರಿದ್ದಾರೆ. ಸಂಬಂಧಿಸಿದ ಇಲಾಖೆ ಸಚಿವರು ಗಮನ ಹರಿಸುವಂತೆ ವಿದ್ಯಾರ್ಥಿಗಳ ಮನವಿ ಮಾಡಿದ್ದಾರೆ. ಸರ್ಕಾರ ಕೋಟಿ ಕೋಟಿ ಕೊಟ್ರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತಾಗಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ಭಾರಿ ಮಳೆ; ಸೂರಿಲ್ಲದೆ ನಿವಾಸಿಗಳ ಪರದಾಟ, ಅಪಾರ ಪ್ರಮಾಣದ ಹಾನಿ
N Chandrasekharan: ಮುಂಬೈನಲ್ಲಿ 98 ಕೋಟಿ ರೂಪಾಯಿಗೆ ಡೂಪ್ಲೆಕ್ಸ್ ಖರೀದಿಸಿದ ಟಾಟಾ ಸಮೂಹದ ಅಧ್ಯಕ್ಷ ಚಂದ್ರಶೇಖರನ್
Published On - 9:16 am, Sun, 8 May 22