Belagavi: ಪ್ರತಿಭಟನಾಕಾರರು ಬಿಸಾಡಿದ್ದ ಊಟ ತಿಂದು 10 ಕುರಿಗಳು ಸಾವು

| Updated By: ವಿವೇಕ ಬಿರಾದಾರ

Updated on: Dec 26, 2022 | 6:25 PM

ಪ್ರತಿಭಟನಾಕಾರರು ಬಿಸಾಡಿದ್ದ ಊಟ ತಿಂದು 10 ಕುರಿಗಳು ಸಾವನ್ನಪ್ಪಿರುವ ಘಟನೆ ಸುವರ್ಣಸೌಧದಕ್ಕೆ ಹತ್ತಿರವಿರುವ ಕೊಂಡಸಕೊಪ್ಪ ಗ್ರಾಮದ ಬಳಿ ನಡೆದಿದೆ.

Belagavi: ಪ್ರತಿಭಟನಾಕಾರರು ಬಿಸಾಡಿದ್ದ ಊಟ ತಿಂದು 10 ಕುರಿಗಳು ಸಾವು
ಬಿಸಾಡಿದ ಆಹಾರ ತಿಂದು ಕುರಿಗಳು ಸಾವು
Follow us on

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ (Suvarna Soudha) ಚಳಿಗಾಲದ ಅಧಿವೇಶನ (Assembly winter session) ಪ್ರಾರಂಭವಾದಾಗಿನಿಂದ, ಸುವರ್ಣಸೌಧದದ ಎದುರು ಅನೇಕ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ಈಗ ಪ್ರತಿಭಟನಾಕಾರರು ಬಿಸಾಡಿದ್ದ ಆಹಾರ ತಿಂದು 70 ಕುರಿಗಳು ಅಸ್ವಸ್ಥವಾಗಿದ್ದು, 10 ಕುರಿಗಳು (Sheeps) ಸಾವನ್ನಪ್ಪಿರುವ ಘಟನೆ ಸುವರ್ಣಸೌಧದಕ್ಕೆ ಹತ್ತಿರವಿರುವ ಕೊಂಡಸಕೊಪ್ಪ ಗ್ರಾಮದ ಬಳಿ ನಡೆದಿದೆ.

ಕಳೆದ 4 ದಿನಗಳ ಹಿಂದೆ ಬಸ್ತವಾಡ ಬಳಿ ದೊಡ್ಡ ಸಮಾವೇಶ ನಡೆದಿತ್ತು. ಸಮಾವೇಶದ ನಂತರ ಉಳಿದ ಅನ್ನ, ರೊಟ್ಟಿಯನ್ನು ಆಯೋಜಕರು ಒಂದೆರಡು ದಿನಗಳ ಬಳಿಕ ಬಿಸಾಡಿದ್ದರು. ಬಿಸಾಡಿದ ಈ ಆಹಾರವನ್ನು ನಿಂಗಪ್ಪ ದೇಮಣ್ಣವರ್, ಸುನಿಲ್ ದೇಮಣ್ಣವರ್​ಗೆ ಸೇರಿದ ಕುರಿಗಳು ತಿಂದಿವೆ. ಇದರಿಂದ 70 ಕುರಿಗಳು ಅಸ್ವಸ್ಥವಾಗಿದ್ದು, 10 ಕುರಿಗಳು ಸಾವನ್ನಪ್ಪಿವೆ. ಪಶು ವೈದ್ಯರ ತಂಡ ಅಸ್ವಸ್ಥ ಕುರಿಗಳಿಗೆ ಡ್ರಿಪ್ಸ್, ಇಂಜೆಕ್ಷನ್​ ನೀಡಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:14 pm, Mon, 26 December 22