SC ST Reservation Hike Bill: ಎಸ್​​ಸಿ, ಎಸ್​​ಟಿ ಮೀಸಲಾತಿ ಹೆಚ್ಚಳ ವಿಧೇಯಕ ಅಂಗೀಕಾರ

ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಎಸ್ ಸಿ, ಎಸ್ ಟಿ ಮೀಸಲಾತಿ ವಿಧೇಯಕಯನ್ನು ಅಂಗೀಕರಿಸಿದೆ.

SC ST Reservation Hike Bill: ಎಸ್​​ಸಿ, ಎಸ್​​ಟಿ ಮೀಸಲಾತಿ ಹೆಚ್ಚಳ ವಿಧೇಯಕ ಅಂಗೀಕಾರ
ವಿಧಾನಸಭೆ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Dec 26, 2022 | 7:53 PM

ಬೆಳಗಾವಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳ ವಿಧೇಯಕ(SC ST Reservation Hike Bill) ಅಂಗೀಕಾರವಾಗಿದೆ. ಇಂದು(ಡಿಸೆಂಬರ್ 16) ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನದ(Belagavi Winter Session) ವಿಧಾನಸಭೆಯಲ್ಲಿ ಸರ್ವಾನುಮತದಿಂದ SC, ST ಮೀಸಲಾತಿ ಪ್ರಮಾಣ ಹೆಚ್ಚಳ ವಿಧೇಯಕ ಅಂಗೀಕಾರಿಸಲಾಗಿದೆ.

ಎಸ್​​ಸಿ, ಎಸ್​​ಟಿ ಸಮುದಾಯದ ಮೀಸಲಾತಿ ಹೆಚ್ಚಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಸೂದೆ 2022 ಅನ್ನು ಡಿಸೆಂಬರ್ 20ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಅವರು ವಿಧಾನಸಭೆಯಲ್ಲಿ ಮಂಡಿಸಿದ್ದರು. ಚರ್ಚೆಯ ಬಳಿಕ ಇಂದು ವಿಧೇಯಕವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

ಇದನ್ನೂ ಓದಿ: SC, STಗೆ ಮೀಸಲಾತಿ ಹೆಚ್ಚಳ : ಅದು ಅಷ್ಟು ಸುಲಭವೇ? ಕಾನೂನು ಏನು ಹೇಳುತ್ತೆ? ಬೊಮ್ಮಾಯಿ ಮುಂದಿರುವುದು ಒಂದೇ ದಾರಿ

ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15 ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಡಗಳ ಮೀಸಲಾತಿ ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲಾಗಿದೆ. ಆದರೆ ಕೇವಲ ಸರ್ಕಾರಿ ಆದೇಶದ ಮೂಲಕ ಮೀಸಲಾತಿ ಹೆಚ್ಚಿಸಿದರೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಬಹುದು ಎಂಬ ಕಾರಣಕ್ಕೆ ಮಸೂದೆಯೊಂದನ್ನು ರೂಪಿಸಿ, ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಬಳಿಕ ಸುಗ್ರೀವಾಜ್ಞೆ ಮೂಲಕ ಅದನ್ನು ಜಾರಿಗೊಳಿಸಲಾಗಿದೆ.

ಆರು ತಿಂಗಳೊಳಗೆ ಈ ತಿದ್ದುಪಡಿ ಮಸೂದೆಗೆ ವಿಧಾನ ಮಂಡಲದ ಒಪ್ಪಿಗೆ ಪಡೆಯಬೇಕು. ನಂತರ ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂಬ ಸಲಹೆಯನ್ನು ನಾಗಮೋಹನ್ ದಾಸ್ ಅವರು ವರದಿ ನೀಡಿದ್ದರು. ಅದರ ಅನ್ವಯ ಈ ಅಧಿವೇಶನದಲ್ಲಿ ಎಸ್​​ಸಿ, ಎಸ್​​ಟಿ ಸಮುದಾಯದ ಮೀಸಲಾತಿ ಹೆಚ್ಚಳ ವಿಧೇಯಕ ಮಂಡಿಸಿ, ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ನಂತರ ವಿಧಾನ ಪರಿಷತ್ ನಲ್ಲಿ ವಿಧೇಯಕ ಮಂಡಿಸಲಾಗುತ್ತಿದೆ.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದೇನು?

ಇನ್ನು ಈ ಬಗ್ಗೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದು, ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ್ವಿ. ಈಗ ಸರ್ವಾನುಮತದಿಂದ ಬಿಲ್ ಪಾಸ್ ಮಾಡಲು ಸಫಲರಾಗಿದ್ದೇವೆ. ನಾಗಮೋಹನ್ ದಾಸ್ ವರದಿ ಆಧರಿಸಿ ಮೀಸಲಾತಿ ಹೆಚ್ಚಿಸಿದ್ದೇವೆ ಶಿಕ್ಷಣ, ಉದ್ಯೋಗಕ್ಕೆ ಸಹಾಯವಾಗುವ ಕೆಲಸ ಸರ್ಕಾರ ಮಾಡಿದೆ ಎಂದು ಹೇಳಿದರು.

ಮೀಸಲಾತಿ ಗಿಮಿಕ್ ಪ್ರಯತ್ನ ಎಂಬ ಸಿದ್ದರಾಮಯ್ಯ ಟೀಕೆಗೆ ಪ್ರಕ್ರಿಯಿಸಿದ ಮಾಧುಸ್ವಾಮಿ, ಸಿದ್ದರಾಮಯ್ಯನವರಿಗೂ 4 ವರ್ಷದ ಮೊದಲು ಈ ಗಿಮಿಕ್ ಮಾಡುವ ಅವಕಾಶವಿತ್ತು. ಆಗ ಸಿದ್ದರಾಮಯ್ಯ ಈ ಪ್ರಯತ್ನ ಮಾಡಲಿಲ್ಲ. ಮಾಡುವ ಕೆಲಸಕ್ಕೆ ಬೆಂಬಲ ಕೊಡುವ ಪ್ರಯತ್ನವಿರಬೇಕು. ನಾವು ಮಾಡಿದ್ದೇವೆ ಗಿಮಿಕ್ ಎನ್ನುವ ಪ್ರಶ್ನೆ ಇಲ್ಲ ಎಂದು ತಿರುಗೇಟು ನೀಡಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು
ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು
Nithya Bhavishya: ನವರಾತ್ರಿಯ ಐದನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಐದನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್