ಕಬ್ಬಿನ ಗದ್ದೆಯಲ್ಲಿ ಎಂಟು ನವಿಲುಗಳು ಮೃತ ದೇಹ ಪತ್ತೆ

| Updated By: ವಿವೇಕ ಬಿರಾದಾರ

Updated on: Jan 13, 2024 | 11:04 AM

ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಹೊರ ವಲಯದ ಕಬ್ಬಿನ ಗದ್ದೆಯಲ್ಲಿ ರಾಷ್ಟ್ರಪಕ್ಷಿ ಎಂಟು ನವಿಲುಗಳು ಮೃತ ದೇಹಗಳು ಪತ್ತೆಯಾಗಿವೆ. ಸ್ಥಳಕ್ಕೆ ಚಿಕ್ಕೋಡಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಪಂಚನಾಮೆ ನಡೆಸಿದರು.

ಕಬ್ಬಿನ ಗದ್ದೆಯಲ್ಲಿ ಎಂಟು ನವಿಲುಗಳು ಮೃತ ದೇಹ ಪತ್ತೆ
ನವಿಲುಗಳು
Follow us on

ಚಿಕ್ಕೋಡಿ, ಜನವರಿ 13: ಚಿಕ್ಕೋಡಿ (Chikkodi) ತಾಲೂಕಿನ ಮಾಂಜರಿ ಗ್ರಾಮದ ಹೊರ ವಲಯದ ಕಬ್ಬಿನ ಗದ್ದೆಯಲ್ಲಿ ರಾಷ್ಟ್ರಪಕ್ಷಿ ಎಂಟು ನವಿಲುಗಳು (Peacock) ಮೃತ ದೇಹಗಳು ಪತ್ತೆಯಾಗಿವೆ. ಸ್ಥಳಕ್ಕೆ ಚಿಕ್ಕೋಡಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಪಂಚನಾಮೆ ನಡೆಸಿದರು. ಬಳಿಕ ಸತ್ತಿರುವ ನವಿಲುಗಳನ್ನು ತೆಗೆದುಕೊಂಡು ಹೋದರು. ನವಿಲುಗಳಿಗೆ ವಿಷ ಹಾಕಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನವಿಲುಗಳ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿಗೆ ರವಾನಿಸಲಾಗಿದೆ. ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಿಟ್ & ರನ್​​ಗೆ ಕುರಿಗಾಹಿ ಹಾಗೂ ಕುರಿಗಳ ಸಾವು

ರಾಯಚೂರು: ಹಿಟ್ & ರನ್​​ಗೆ ಕುರಿಗಾಹಿ ಹಾಗೂ ಕುರಿಗಳು ಮೃತಪಟ್ಟಿರುವ ಘಟನೆ  ರಾಯಚೂರು ಬಳಿಯ ಪವರ್ ಗ್ರೀಡ್ ಬಳಿ ನಡೆದಿದೆ. ತೆಲಂಗಾಣದ ಕೆ.ಟಿ.ದೊಡ್ಡಿಯ ಶಿವು (35) ಮೃತ ದುರ್ದೈವಿ. 6 ಕುರಿಗಳು ಸಾವಿಗೀಡಾಗಿವೆ. ಸ್ಥಳಕ್ಕೆ ಪಶ್ಚಿಮ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುರಿಗಾಹಿ ಶಿವು ಬೆಳಿಗ್ಗೆ ಕುರಿಗಳನ್ನ ಮೇಯಿಸಲು ಹೊರಟಿದ್ದರು. ಈ ವೇಳೆ ಕುರಿಗಾಹಿ ಶಿವು ಹಾಗೂ ಕುರಿಗಳಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಶಿವು ಹಾಗೂ ಆರು ಕುರಿಗಳು ಮೃತಪಟ್ಟಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:59 am, Sat, 13 January 24