AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂಡಲಗಾ ಜೈಲಿನಲ್ಲಿ ಕಿತ್ತಾಟ: ಕೈದಿ ಸ್ಥಿತಿ ಗಂಭೀರ, ಮಗನನ್ನು ನೋಡಲು ಬಂದ ತಾಯಿ, ಅವಕಾಶ ನೀಡಿದ ಪೊಲೀಸರು

ಜಿಲ್ಲೆಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಜುಲೈ 29ರಂದು ಕೈದಿಗಳ ನಡುವೆ ಮಾರಾಮಾರಿ ನಡೆದು, ಈ ವೇಳೆ ಶಂಕರ್ ಭಜಂತ್ರಿಯಿಂದ ಮತ್ತೊಬ್ಬ ಕೈದಿ ಸಾಯಿಕುಮಾರ್ ಎಂಬಾತನ ಮೇಲೆ ಸ್ಕ್ರೂಡ್ರೈವರ್​ನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದ. ಇದೀಗ ಜೈಲಿನ ಅವ್ಯವಹಾರಗಳು ಗೊತ್ತಾಗಿದ್ದಕ್ಕೆ ಅಧಿಕಾರಿಗಳಿಂದಲೇ ನನ್ನ ಮಗನನ್ನು ಕೊಲ್ಲಿಸಲು ಯತ್ನಿಸಿದ್ದಾರೆಂದು ತಾಯಿ ಆರೋಪಿಸಿದ್ದಾರೆ.

ಹಿಂಡಲಗಾ ಜೈಲಿನಲ್ಲಿ ಕಿತ್ತಾಟ: ಕೈದಿ ಸ್ಥಿತಿ ಗಂಭೀರ, ಮಗನನ್ನು ನೋಡಲು ಬಂದ ತಾಯಿ, ಅವಕಾಶ ನೀಡಿದ ಪೊಲೀಸರು
ಮಗನಿಗಾಗಿ ತಾಯಿಯ ಗೋಳಾಟ
Sahadev Mane
| Updated By: ಕಿರಣ್ ಹನುಮಂತ್​ ಮಾದಾರ್|

Updated on: Aug 02, 2023 | 3:07 PM

Share

ಬೆಳಗಾವಿ, ಆ.2: ಜಿಲ್ಲೆಯ ಹಿಂಡಲಗಾ ಕೇಂದ್ರ ಕಾರಾಗೃಹ(Hindalaga Jail)ದಲ್ಲಿ ಜುಲೈ 29ರಂದು ಕೈದಿಗಳ ನಡುವೆ ಮಾರಾಮಾರಿ ನಡೆದಿತ್ತು. ಈ ವೇಳೆ ಶಂಕರ್ ಭಜಂತ್ರಿಯಿಂದ ಮತ್ತೊಬ್ಬ ಕೈದಿ ಸಾಯಿಕುಮಾರ್ ಮೇಲೆ ಸ್ಕ್ರೂಡ್ರೈವರ್​ನಿಂದ ಐದು ಬಾರಿ ಚುಚ್ಚಿ ಕೊಲೆಗೆ ಯತ್ನಿಸಿದ್ದ. ಈ ಹಿನ್ನಲೆ ಗಾಯಗೊಂಡಿದ್ದ ಕೈದಿ ಸಾಯಿಕುಮಾರ್​ನನ್ನು ಕೂಡಲೇ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಬಳಿಕ ಆಸ್ಪತ್ರೆ ಸುತ್ತ ಬೀಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿತ್ತು. ಇದೀಗ ಆತನ ಸ್ಥಿತಿ ಗಂಭೀರವಾಗಿದ್ದು, ಮಗನ ಭೇಟಿಗೆ ತಾಯಿ ಸೇರಿದಂತೆ ಆತನ ಕುಟುಂಬಸ್ಥರು ಮಂಡ್ಯದಿಂದ ಬೆಳಗಾವಿ ಆಗಮಿಸಿದ್ದಾರೆ.

ಭೇಟಿಗೆ ಅವಕಾಶ ನೀಡದ ಪೊಲೀಸರ ವಿರುದ್ಧ ಆಕ್ರೋಶ

ಮಗನ ಸ್ಥಿತಿ ಗಂಭೀರವಾಗಿದ್ದು, ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲವೆಂದು ಕೈದಿಯ ತಾಯಿ ಪುಟ್ಟತಾಯಮ್ಮ ಆಸ್ಪತ್ರೆ ಮುಂದೆ ಕಣ್ಣೀರು ಹಾಕುತ್ತಾ ಪೊಲೀಸರ ವಿರುದ್ದ ಆರೋಪಿಸಿದ್ದಾರೆ. ಇಂದು(ಆ.2) ಬೆಳಗ್ಗೆಯಿಂದ ಉಸಿರಾಟದ ಸಮಸ್ಯೆಯಿಂದ ಸಾಯಿಕುಮಾರ್ ಬಳಲುತ್ತಿದ್ದಾನೆ. ಆದರೂ ಐಸಿಯುವಿಗೆ ಶಿಪ್ಟ್ ಮಾಡಿ ಚಿಕಿತ್ಸೆ ಕೊಡಿಸುತ್ತಿಲ್ಲ, ಜೊತೆಗೆ ಭೇಟಿಗೂ ಬಿಡುತ್ತಿಲ್ಲ. ಮಗನ ಸ್ಥಿತಿ ಗಂಭೀರ ಇದ್ದರೂ ಜೈಲು ಅಧಿಕಾರಿಗಳು ನಮಗೆ ಎನೂ ಹೇಳಿಲ್ಲ. ನ್ಯೂಸ್​ನಲ್ಲಿ ನೋಡಿ, ಇಂದು ಮಗನ ಭೇಟಿಗೆ ಬಂದಿದ್ದೇವೆ ಎಂದು ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕೈದಿಯಿಂದ ಮತ್ತೊಬ್ಬ ಕೈದಿಯ ಕೊಲೆಗೆ ಯತ್ನ

ಜೈಲಿನ ಅವ್ಯವಹಾರಗಳು ಗೊತ್ತಾಗಿದ್ದಕ್ಕೆ ಅಧಿಕಾರಿಗಳಿಂದಲೇ ಕೊಲ್ಲಿಸಲು ಯತ್ನ

ಇನ್ನು ಹಿಂಡಲಗಾ ಜೈಲಿನ ಅವ್ಯವಹಾರಗಳು ಗೊತ್ತಾಗಿದ್ದಕ್ಕೆ ನನ್ನ ಮಗನನ್ನು ಅಧಿಕಾರಿಗಳೇ ಸೇರಿ ಕೊಲ್ಲಿಸಲು ಯತ್ನಿಸಿದ್ದಾರೆಂದು ಹಿಂಡಲಗಾ ಜೈಲು ಅಧಿಕಾರಿಗಳ ವಿರುದ್ಧ ಸಾಯಿಕುಮಾರ್​ನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಜೈಲಿನಲ್ಲಿ ಸ್ಕ್ರೂಡ್ರವರ್ ಹೇಗೆ ಬಂತೂ, ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆ ಮಾಡಲು ಏಕೆ ಯತ್ನಿಸಿದ್ದಾರೆ. ಇದೀಗ ಕೊಲೆ ಮಾಡಲು ಯತ್ನಿಸಿದ ಕೈದಿ ಹುಚ್ಚನೆಂದು ಹೇಳುತ್ತಿದ್ದಾರೆ. ಹುಚ್ಚ ಆಗಿದ್ದರೇ ಯಾಕೆ ಸೆಲ್​ನಲ್ಲಿ ಬಿಟ್ಟರು ಎಂದು ಜೈಲರ್ ವಿರುದ್ಧ ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ