ಫ್ರೀ ಕರೆಂಟ್ ಘೋಷಣೆ ಬೆನ್ನಲ್ಲೇ ಎಲೆಕ್ಟ್ರಿಕ್ ವಸ್ತುಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು, ಈ ಬೈಕ್ಗಳು ಭರ್ಜರಿ ಸೇಲ್
ರಾಜ್ಯ ಸರ್ಕಾರದಿಂದ ಗೃಹಜ್ಯೋತಿ ಯೋಜನೆ ಘೋಷಣೆ ಬೆನ್ನಲ್ಲೆ ರಾಜ್ಯದಲ್ಲಿ ಎಲೆಕ್ಟ್ರಿಕ್ ವಸ್ತುಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಎಲೆಕ್ಟ್ರಿಕ್ ಬೈಕ್ಗಳು, ಇಂಡಕ್ಷನ್ ಸ್ಟವ್ ಖರೀದಿಗೆ ಜನ ಮುಗಿಬಿದ್ದಿದ್ದಾರೆ.
ಬೆಳಗಾವಿ: ರಾಜ್ಯದಲ್ಲಿ ಕರೆಂಟ್ ಉಚಿತವಾಗಿ(Gruha Jyothi scheme) ಸರ್ಕಾರ ನೀಡ್ತಿದ್ದಂತೆ ಎಲೆಕ್ಟ್ರಿಕ್ ಬೈಕ್‌ಗಳಿಗೆ(Electric Bikes) ಬಹಳ ಡಿಮ್ಯಾಂಡ್ ಬಂದಿದೆ. ಅದರಲ್ಲೂ ಗಡಿ ಜಿಲ್ಲೆ ಬೆಳಗಾವಿಯಲ್ಲಿ(Belagavi) ಹೆಚ್ಚಿನ ಪ್ರಮಾಣದಲ್ಲಿ ಈ ಬೈಕ್ಗಳು ಮಾರಾಟ ಆಗ್ತಿವೆ. ಈ ವರೆಗೂ ದಿನಕ್ಕೆ ಎರಡರಿಂದ ಮೂರು ಮಾರಾಟ ಆಗ್ತಿದ್ದ ಬೈಕ್ಗಳು ಇದೀಗ ದಿನಕ್ಕೆ ಎಂಟರಿಂದ ಹತ್ತು ಮಾರಾಟ ಆಗ್ತಿವೆ.
ದಿನಕ್ಕೆ ಮೂವತ್ತರಷ್ಟು ಜನ ಬಂದು ಬೈಕ್ಗಳ ಕುರಿತು ವಿಚಾರಿಸುತ್ತಿದ್ದು ಅದರಲ್ಲಿ ಸಾಕಷ್ಟು ಜನ ಬೈಕ್ ಕೊಂಡುಕೊಳ್ಳುತ್ತಿದ್ದಾರೆ ಅಂತಾ ಡೀಲರ್ ಕರ್ಲೇಕರ್ ಎಂಬುವವರು ಮಾಹಿತಿ ನೀಡಿದ್ದಾರೆ. ಇನ್ನೂ ಕಳೆದ ಹದಿನೈದು ದಿನಗಳಿಂದ ಈಚೆಗೆ ಹೆಚ್ಚಿನ ಪ್ರಮಾಣದಲ್ಲಿ ಇಲೆಕ್ಟ್ರಿಕಲ್ ಬೈಕ್ ಗಳು ಮಾರಾಟವಾಗಿವೆ. ಒಂದು ಬಾರಿ ಚಾರ್ಜ್ ಮಾಡಿದ್ರೇ ಎರಡು ಯುನಿಟ್ ನಷ್ಟು ವಿದ್ಯುತ್ ಖರ್ಚಾಗುತ್ತಿದ್ದು ಹೀಗಾಗಿ ಸಾಕಷ್ಟು ಜನ ಬೈಕ್ ಕೊಂಡುಕೊಳ್ಳುತ್ತಿದ್ದಾರೆ. ಇನ್ನೂ ಕೆಲ ದಿನಗಳಿಗೆ ಆಗುವಷ್ಟು ಸ್ಟಾಕ್ ಇದ್ದು ಇದೇ ರೀತಿ ಬೇಡಿಕೆ ಮುಂದುವರೆದ್ರೇ ಸ್ಟಾಕ್ ಖಾಲಿಯಾಗಲಿದೆ ಎಂದು ಡೀಲರ್‌ಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲೂ ಹೆಚ್ಚಿದ ಎಲೆಕ್ಟ್ರಿಕ್ ಬೈಕ್ ಬೇಡಿಕೆ
200 ಯುನಿಟ್ ವರೆಗೆ ಉಚಿತ ವಿದ್ಯುತ್ ಕೊಡುಗೆಯಿಂದ ಎಲೆಕ್ಟ್ರಾನಿಕ್ ಬೈಕ್ ಖರೀದಿ ಕಡೆಗೆ ಜನರ ಒಲವು ಹೆಚ್ಚಿದೆ. ದುಬಾರಿ ಪೆಟ್ರೋಲ್ ಬೆಲೆಗೆ ಪರ್ಯಾಯವಾಗಿ ವಿದ್ಯುತ್ ಚಾಲಿತ ವಾಹನ ಖರೀದಿಗೆ ಹಾಸನದಲ್ಲಿ ಡಿಮ್ಯಾಂಡ್ ಹೆಚ್ಚಿದೆ. ಬೈಕ್ ಖರೀದಿಗಾಗಿ ಶೋ ರೂಂ ನತ್ತ ಜನ ಹೆಜ್ಜೆ ಹಾಕುತ್ತಿದ್ದಾರೆ. ಎರಡು ಯುನಿಟ್ ಬಳಸಿದ್ರೆ 80.ಕಿಲೋಮೀಟರ್ ಪ್ರಯಾಣ ಮಾಡಬಹುದು. ಕೇವಲ 6 ರೂಗೆ 80. ಕಿಲೋಮೀಟರ್ ಸಂಚಾರ, ಅದೂ ಕೂಡ ಕರೆಂಟ್ ಉಚಿತವಾಗಿ ಸಿಕ್ಕೊಂದ್ರಿಂದ ಹೆಚ್ಚಿನ ಲಾಭ ಹಿನ್ನೆಲೆಯಲ್ಲಿ ಜನರಲ್ಲಿ ಆಸಕ್ತಿ ಹೆಚ್ಚಿದೆ. ಎಲೆಕ್ಟ್ರಾನಿಕ್ ಬೈಕ್ ಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ.
ಇನ್ನು ಮತ್ತೊಂದೆಡೆ ಇಂಡಕ್ಷನ್ ಸ್ಟವ್ಗೂ ಡಿಮ್ಯಾಂಡ್ ಹೆಚ್ಚಿದೆ. ಇಂಡಕ್ಷನ್ ಸ್ಟವ್ ಉತ್ತಮ ಮಾರಾಟವಾಗುತ್ತಿದೆ. ಇದರಿಂದ ಗ್ಯಾಸ್ ಬಳಕೆ ಮಾಡೋದು ಕಡಿಮೆ ಆಗಬಹುದು. ಮುಂದೆ ಸೇಲ್ ಇನ್ನಷ್ಟು ಜಾಸ್ತಿಯಾಗುವ ನಿರೀಕ್ಷೆಯಿದೆ. ಇಂಡಕ್ಷನ್ ಸ್ಟವ್ ನಲ್ಲಿ ವೇಗವಾಗಿ ಆಹಾರ ಮಾಡಬಹುದು. ಸ್ಟವ್ ಮಾಡೆಲ್, ಕಂಪೆನಿ, ವ್ಯಾಟ್ಸ್ ಮೇಲೆ ವಿದ್ಯುತ್ ಖರ್ಚು ಅವಲಂಬಿತ ಆಗಿರುತ್ತೆ. ಸಾಮಾನ್ಯವಾಗಿ 2000 ವ್ಯಾಟ್ ನ ಇಂಡಕ್ಷನ್ ಸ್ಟವ್ ಒಂದು ಗಂಟೆ ಬಳಕೆ ಮಾಡಿದ್ರೆ 2.2 ಯುನಿಟ್ ವಿದ್ಯುತ್ ಖರ್ಚು ಆಗುತ್ತೆ. ಒಳ್ಳೆಯ ಸೇಲ್ ಆಗಬಹುದು ಎಂಬ ನಿರೀಕ್ಷೆಯಿದೆ. ಕರೆಂಟ್ ಗೀಸರ್ ಸಹ ಹೆಚ್ಚಿನ ಮಾರಾಟ ಆಗಬಹುದು. ಕಡಿಮೆ ಕರೆಂಟ್ ಖರ್ಚಿನಲ್ಲಿ ಇದನ್ನು ಬಳಕೆ ಮಾಡಬಹುದು ಎಂದು ಮಂಗಳೂರಿನ ಗಿರಿಯಾಸ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಉದ್ಯೋಗಿ ಶ್ರೀಕಾಂತ್ ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ