ಬೆಳಗಾವಿ, ಜುಲೈ 10: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಬಹುಕೋಟಿ ಬಿಟ್ ಕಾಯಿನ್ (Bit Coin) ಹಗರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಹಗರಣದಲ್ಲಿ ಪೊಲೀಸ್ ಇಲಾಖೆ (Police Department) ಹಿರಿಯ ಅಧಿಕಾರಿಯೊಬ್ಬರ ಹೆಸರು ತಳುಕು ಹಾಕಿಕೊಂಡಿದೆ. ಪ್ರಕರಣದಲ್ಲಿ ಬಂದಿಖಾನೆ ಇಲಾಖೆ ಮತ್ತು ಬೆಳಗಾವಿ (Belagavi) ಉತ್ತರ ವಲಯ ಡಿಐಜಿ ಟಿ.ಪಿ.ಶೇಷ (TP Shesha) ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಹಗರಣದಲ್ಲಿ ಡಿಐಜಿ ಟಿ.ಪಿ.ಶೇಷ ಅವರು ಭಾಗಿಯಾಗಿದ ಬಗ್ಗೆ ನಾಗೇಂದ್ರ ಅಲಿಯಾಸ್ ನಾಗ ಎಂಬ ಕೈದಿ ಎಡಿಜಿಪಿ ಅವರಿಗೆ ಜೂನ್ 26 ರಂದು ದೂರು ನೀಡಿದ್ದನು. ಈ ಕೈದಿಯನ್ನು ಹಿಂಡಲಾಗದಲ್ಲಿದ್ದ ಕಾರಣ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡವು ಜೈಲಿಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.
ಇದನ್ನೂ ಓದಿ: ಬಿಟ್ ಕಾಯಿನ್ ಕೇಸ್ ಆರೋಪಿ ಶ್ರೀಕೃಷ್ಣಗೆ ಬಿಗ್ ರಿಲೀಫ್; ಸಂಘಟಿತ ಅಪರಾಧಗಳ ಕಾಯ್ದೆ ರದ್ದುಪಡಿಸಿ ಹೈಕೋರ್ಟ್ ಆದೇಶ
ದೂರಿನ ಅರ್ಜಿ ಇಟ್ಟುಕೊಂಡು ಮೂರು ಗಂಟೆಗಳ ಕಾಲ ಕೈದಿಯ ವಿಚಾರಣೆ ನಡೆಸಿದ ಎಸ್ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಟಿಪಿ ಶೇಷ ಅವರು ಹ್ಯಾಕರ್ ಶ್ರೀಕಿಗೆ ಲ್ಯಾಪ್ಟಾಪ್ ನೀಡಿ 20 ಕೋಟಿ ಮೌಲ್ಯದ ಬಿಟ್‌ಕಾಯಿನ್ ವರ್ಗಾವಣೆ ಮಾಡಿಸಿದ್ದಾರೆ ಎಂದು ನಾಗೇಂದ್ರ ದೂರಿದ್ದನು.
ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಶ್ರೀಕಿಯನ್ನು ನೋಡಿಯೇ ಇಲ್ಲ ಎಂದು ಡಿಐಜಿ ಟಿ.ಪಿ.ಶೇಷ ಅವರು ಹೇಳಿದ್ದಾರೆ. ಪ್ರಕರಣ ಸಂಬಂಧ ಡಿಐಜಿ ಟಿ.ಪಿ.ಶೇಷ ಅವರಿಗೂ ಎಸ್ಐಟಿ ತಂಡ ನೋಟಿಸ್ ನೀಡಿವ ಸಾಧ್ಯತೆ ಇದೆ.
2017ರಲ್ಲಿ ತುಮಕೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಯುನೋ ಕಾಯಿನ್ ಕಳವು ಪ್ರಕರಣದಲ್ಲಿ ಶ್ರೀಕಿಯನ್ನು ಸಿಐಡಿ ವಿಶೇಷ ತನಿಖಾ ಅಧಿಕಾರಿಗಳು (SIT) ಬಂಧಿಸಿದ್ದಾರೆ. ಪ್ರಕರಣ ಎಸ್ಐಟಿಗೆ ವರ್ಗಾವಣೆ ಆಗಿತ್ತು.
2015ರಲ್ಲಿ ಕೆಂಪೇಗೌಡನಗರ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಕೇಸ್‌ನಲ್ಲಿ ಶ್ರೀಕಿಯನ್ನು ಬಂಧಿಸಲಾಗಿತ್ತು.ಈ ಕೇಸ್ ತನಿಖೆ ವೇಳೆ ಬಿಟ್‌ಕಾಯಿನ್ ಪ್ರಕರಣ ಬೆಳಕಿಗೆ ಬಂದಿತ್ತು.2020ರಲ್ಲಿ ಸುಮಾರು 1000 ಕೋಟಿ ಹಗರಣದ ಬಿಟ್‌ಕಾಯಿನ್ ಕೇಸ್‌ನಲ್ಲಿ ಶ್ರೀಕಿ ಬಂಧನವಾಗಿತ್ತು.ಅಲ್ಲದೆ ಶ್ರೀಕಿ ಕಳೆದ ಐದಾರು ವರ್ಷಗಳಿಂದ ವಿವಿಧ ಕ್ರಿಪ್ಟೋ ಕರೆನ್ಸಿ ಮಾರಾಟ ಪ್ಲಾಟ್‌ಫಾರ್ಮ್‌ಗಳನ್ನು ಹ್ಯಾಕ್ ಮಾಡಿ ಅವುಗಳಿಂದ ಸಾವಿರಾರು ಬಿಟ್‌ಕಾಯಿನ್‌ಗಳನ್ನು ಎಗರಿಸಿದ್ದನು. ಅಲ್ಲದೇ ರಾಜ್ಯ ಸರ್ಕಾರದ ಇ-ಸಂಗ್ರಹಣಾ ಪೋರ್ಟಲ್ ಜಾಲತಾಣ ಹ್ಯಾಕ್ ಮಾಡಿದ್ದನು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:07 am, Wed, 10 July 24