ಮಳೆ ಅವಾಂತರದಿಂದ ಬೀದಿಗೆ ಬಿತ್ತು ವೃದ್ಧೆಯರ ಬದುಕು; ಮನಕಲಕುವಂತಿದೆ ಇವರ ನರಳಾಟ

ಮಳೆಗಾಲ ಶುರುವಾಗುತ್ತಿದ್ದಂತೆ ಕೆಲವರಿಗೆ ಎಲ್ಲಿಲ್ಲದ ಸಂತೋಷ, ಹೊಸ ರೂಪ ತಾಳುವ ಪ್ರಕೃತಿಯನ್ನು ಕಾಣಲು ಕಾರದಲ್ಲಿರುತ್ತಾರೆ. ಆದರೆ, ಕೆಲವರಿಗೆ ಹೇಗಪ್ಪಾ? ಬದುಕು ಸಾಗಿಸುವುದು ಎಂಬ ಚಿಂತೆ ಕಾಡಲು ಶುರುವಾಗುತ್ತದೆ. ಅದರಂತೆ ಇದೀಗ ಬೆಳಗಾವಿಯಲ್ಲಿ ಮಳೆ ಅವಾಂತರಕ್ಕೆ ವೃದ್ಧೆಯರ ಬದುಕು ಬೀದಿಗೆ ಬಿದ್ದಿದ್ದು, ತಾಡಪಲ್ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ.

ಮಳೆ ಅವಾಂತರದಿಂದ ಬೀದಿಗೆ ಬಿತ್ತು ವೃದ್ಧೆಯರ ಬದುಕು; ಮನಕಲಕುವಂತಿದೆ ಇವರ ನರಳಾಟ
|

Updated on:Jul 09, 2024 | 4:52 PM

ಬೆಳಗಾವಿ, ಜು.09: ಮಳೆ ಅವಾಂತರಕ್ಕೆ ವೃದ್ಧೆಯರ ಬದುಕು ಬೀದಿಗೆ ಬಿದ್ದಿದ್ದು, ವೃದ್ಧೆಯರ ನರಳಾಟ ಮನಕಲಕುವಂತಿದೆ. ಹೌದು,  ಕೆಲ ದಿನಗಳ ಹಿಂದೆ ಮಳೆಗೆ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಈ ಹಿನ್ನಲೆ ಬೆಳಗಾವಿಯ ಕ್ಯಾಂಪ್​ನ ಮಹಿಳಾ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಪುಟ್ ಪಾತ್ ಮೇಲೆ ತಾಡಪಲ್ ಕಟ್ಟಿಕೊಂಡು ಅಕ್ಕ ಮಂಗಲಾ ಅಜ್ಗಾಂವಕರ್(75) ಮತ್ತು ಮನೋರಮಾ(70) ಎಂಬುವವರು ಜೀವನ ನಡೆಸುತ್ತಿದ್ದು, ಎಂತಹವರನ್ನಾದರೂ ಕರುಳು ಹಿಂಡುವಂತೆ ಮಾಡುತ್ತದೆ.

ಪುಟ್​ಪಾತ್​ನಲ್ಲಿ ವಾಸ

ಇನ್ನು ಇವರ ಸಾಮಾಗ್ರಿಗಳೆಲ್ಲವೂ ಬಿದ್ದ ಮನೆಯಲ್ಲಿಯೇ ಹಾನಿಯಾಗಿದೆ. ಹೆಚ್ಚು ಮಳೆಯಾದರೆ ಈ ವೃದ್ಧೆಯರು ನೀರಿನಲ್ಲಿ ನೆನೆದುಕೊಂಡೆ  ಜೀವನ ಸಾಗಿಸುತ್ತಿದ್ದಾರೆ. ನಡುಗುತ್ತಾ ಬೀದಿಯಲ್ಲಿಯೇ ವೃದ್ದೆಯರು ಕಾಲ ಕಳೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಅಂತಿದ್ದು, ಇತ್ತ ಮಹಾನಗರ ಪಾಲಿಕೆ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ. ಸ್ಕೂಲ್​ನಿಂದ ಬರುವ ಊಟವನ್ನ ಮಾಡಿ ಜೀವ ಉಳಿಸಿಕೊಂಡಿದ್ದಾರೆ. ಈ ಕುರಿತು ಅವರನ್ನು ನಮ್ಮ ಪ್ರತಿನಿಧಿ ಮಾತನಾಡಿಸಿದ್ದು, ವೃದ್ಧೆ ಮಂಗಲಾ, ‘ನಾವು ಹುಟ್ಟಿದ್ದು ಇಲ್ಲೇ, ಸಾಯುವುದು ಇಲ್ಲೇ ಅಂತಿದ್ದಾರೆ. ಈಗಲಾದರೂ ಇವರ ಸಹಾಯಕ್ಕೆ ಜಿಲ್ಲಾಡಳಿತ ಬರಲಿ ಎಂಬುದೇ ನಮ್ಮ ಆಶಯ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:41 pm, Tue, 9 July 24

Follow us