ಬೆಳಗಾವಿ: 2013ರ ಡಿಸೆಂಬರ್ 21ರಂದು ಅಂಕೋಲಾ ಉದ್ಯಮಿ ಆರ್.ಎನ್.ನಾಯಕ್ ಹತ್ಯೆ(Murder) ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಅಧಿಕೃತವಾಗಿ ತೀರ್ಪು ಹೊರಬಿದ್ದಿದೆ. ಪ್ರಕರಣದ 6, 11 ಹಾಗೂ 16ನೇ ಆರೋಪಿಗಳು (Accused) ನಿರ್ದೋಷಿ ಎಂದು ತೀರ್ಪು ನೀಡಲಾಗಿದೆ. 6ನೇ ಆರೋಪಿ ಕೇರಳದ ರಬ್ದಿನ್ ಫಿಚೈ, 11ನೇ ಆರೋಪಿ ಬೆಂಗಳೂರಿನ ಮೊಹಮ್ಮದ್ ಶಾಬಂದರಿ, 16ನೇ ಆರೋಪಿ ಉತ್ತರ ಕನ್ನಡದ ಆನಂದ ನಾಯ್ಕ್ ನಿರ್ದೋಷಿ ಎಂದು ಬೆಳಗಾವಿಯ ಕೋಕಾ ನ್ಯಾಯಾಲಯ ಆದೇಶ ಪ್ರಕಟಿಸಿದೆ.
ಇನ್ನು ಪ್ರಕರಣದಲ್ಲಿ 9 ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ವಿವೇಕ್ ಉಪಾಧ್ಯಾಯ ಮಥರಪಟ್ಟಿದ್ದಾನೆ. ಉಳಿದಂತೆ 2ನೇ ಆರೋಪಿ ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್, ಮೂರನೇ ಆರೋಪಿ ಬೆಂಗಳೂರಿನ ಅಭಿ ಭಂಡಗಾರ, ನಾಲ್ಕನೇ ಆರೋಪಿ ಉಡುಪಿಯ ಗಣೇಶ್ ಭಜಂತ್ರಿ, 5ನೇ ಆರೋಪಿ ಕೇರಳದ ಕೆ.ಎಂ.ಇಸ್ಮಾಯಿಲ್, 7ನೇ ಆರೋಪಿ ಹಾಸನದ ಮಹೇಶ ಅಚ್ಛಂಗಿ, 8ನೇ ಆರೋಪಿ ಕೇರಳದ ಎಂ.ಬಿ.ಸಂತೋಷ, 9ನೇ ಆರೋಪಿ ಉಡುಪಿ ಮೂಲದ ಬನ್ನಂಜೆ ರಾಜಾ, 10ನೇ ಆರೋಪಿ ಬೆಂಗಳೂರಿನ ಜಗದೀಶ್ ಚಂದ್ರರಾಜ್, 12ನೇ ಆರೋಪಿ ಯುಪಿಯ ಅಂಕಿತಕುಮಾರ್ ಕಶ್ಯಪ್ ದೋಷಿ ಎಂದು ಸಾಬೀತಾಗಿದೆ. ಏಪ್ರಿಲ್ 4ರಂದು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣವನ್ನು ಕೋರ್ಟ್ ಪ್ರಕಟಿಸಲಿದೆ.
ರಾಜ್ಯದ ಮೊದಲ ಕೋಕಾ ಪ್ರಕರಣದ ತೀರ್ಪು ಓದುತ್ತಿರುವ ನ್ಯಾಯಾಧೀಶ ಸಿ.ಎಂ.ಜೋಶಿ
ಬೆಳಗಾವಿಯ ಕೋಕಾ ನ್ಯಾಯಾಲಯಕ್ಕೆ ನ್ಯಾಯಾಧೀಶ ಸಿ.ಎಂ.ಜೋಶಿ ಆಗಮಿಸಿದ್ದು, ರಾಜ್ಯದ ಮೊದಲ ಕೋಕಾ ಪ್ರಕರಣದ ತೀರ್ಪು ನ್ಯಾಯಾಧೀಶ ಸಿ.ಎಂ.ಜೋಶಿ ಓದುತ್ತಿದ್ದಾರೆ. ಸರ್ಕಾರದ ಪರ ವಿಶೇಷ ಅಭಿಯೋಜಕ ಕೆ.ಜಿ. ಪುರಾಣಿಕಮಠ, ಹೆಚ್ಚುವರಿ ಅಭಿಯೋಜಕ ಶಿವಪ್ರಸಾದ್ ಆಳ್ವಾ ವಕಾಲತ್ತು ವಹಿಸಿದ್ದಾರೆ. ಬನ್ನಂಜೆ ರಾಜಾ ಪರ ವಕೀಲ ಎಂ.ಶಾಂತಾರಾಮ ಶೆಟ್ಟಿ ವಾದ ಮಂಡಿಸಿದ್ದಾರೆ. ಭದ್ರತೆ ಕಾರಣಕ್ಕೆ ಹಿಂಡಲಗಾ ಜೈಲಿನಿಂದಲೇ ಅನ್ಲೈನ್ ಮೂಲಕ ಆರೋಪಿತರು ಹಾಜರಾಗಿದ್ದಾರೆ.
ಇದನ್ನೂ ಓದಿ:
ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ; ಬೆಂಗಳೂರಿನ ಎನ್ಐಎ ಅಧಿಕೃತ ಕಚೇರಿಯಲ್ಲಿ ಕಾರ್ಯಾರಂಭ
ಹಿಜಾಬ್ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಬೆದರಿಕೆ ಪ್ರಕರಣ; ಮತ್ತೊಬ್ಬ ಆರೋಪಿಯನ್ನ ವಶಕ್ಕೆ ಪಡೆದ ಪೊಲೀಸರು
Published On - 5:23 pm, Wed, 30 March 22