ಹಾಲ್ನೋರೆಯಂತೆ ಉಕ್ಕುತ್ತಿದೆ ಬಾಬಾ ಫಾಲ್ಸ್: ರುದ್ರರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 16, 2023 | 8:08 PM

ಮಹಾರಾಷ್ಟ್ರ ಬೆಳಗಾವಿ ಗಡಿಯಲ್ಲಿರುವ ಬಾಬಾ ಫಾಲ್ಸ್​​ಗೆ ಇದೀಗ ಜೀವ ಕಳೆ ಬಂದಿದೆ. ಮೂರು ರಾಜ್ಯದ ಸಾವಿರಾರು ಜನರು ಫಾಲ್ಸ್​ ಕಣ್ತುಂಬಿಕೊಂಡು ವಿಕೇಂಡ್​ಗಳಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಅಷ್ಟಕ್ಕೂ ಬಾಬಾ ಫಾಲ್ಸ್​​ಗೆ ಹೋಗುವುದೆ ಹೇಗೆ ಗೊತ್ತಾ?

ಹಾಲ್ನೋರೆಯಂತೆ ಉಕ್ಕುತ್ತಿದೆ ಬಾಬಾ ಫಾಲ್ಸ್: ರುದ್ರರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು
ಬಾಬಾ ಫಾಲ್ಸ್​ಗೆ ಪ್ರವಾಸಿಗರ ದಂಡು
Follow us on

ಬೆಳಗಾವಿ, ಜುಲೈ 16: ಮಳೆಗಾಲ ಬಂದರೆ ಸಾಕು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಶುರುವಾಗಿ ಬಿಡುತ್ತೆ. ದಟ್ಟ ಕಾಡಿನ ನಡುವೆ ಹಾಲ್ನೋರೆಯಂತೆ ಉಕ್ಕುವ ಜಲಪಾತಗಳನ್ನ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಮಹಾರಾಷ್ಟ್ರ ಬೆಳಗಾವಿ ಗಡಿಯಲ್ಲಿರುವ ಬಾಬಾ ಫಾಲ್ಸ್​ಗೆ (Baba Falls) ಇದೀಗ ಜೀವ ಕಳೆ ಬಂದಿದೆ. ಮೂರು ರಾಜ್ಯದ ಸಾವಿರಾರು ಜನರು ಫಾಲ್ಸ್​ ಕಣ್ತುಂಬಿಕೊಂಡು ವಿಕೇಂಡ್​ಗಳಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಅಷ್ಟಕ್ಕೂ ಬಾಬಾ ಫಾಲ್ಸ್​ ಇರೋದೆಲ್ಲಿ? ಹೇಗೆ ಹೋಗಬೇಕು ಅಂತೀರಾ ಇಲ್ಲಿದೆ ಮಾಹಿತಿ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು, ಇದೇ ಕಾರಣಕ್ಕೆ ಗುಡ್ಡದ ಮೇಲಿಂದ ಅಲ್ಲಲ್ಲಿ ನೀರು ಝರಿಗಳಾಗಿ ಉಕ್ಕುತ್ತೆ. ಅದರಲ್ಲೂ ಬೃಹತ್ ಬಂಡೆಗಲ್ಲಿನ ಮೇಲಿಂದ ಸಾವಿರ ಅಡಿಗಳ ಮೇಲಿಂದ ನೀರು ಉಕ್ಕುವುದನ್ನ ನೋಡಲು ಎರಡು ಕಣ್ಣು ಸಾಲದಾಗದು ಅಷ್ಟೊಂದು ಅದ್ಬುತವಾಗಿರುತ್ತೆ ಆ ದೃಶ್ಯ. ಮಹಾರಾಷ್ಟ್ರದ ಸಾವಂತವಾಡಿಯ ಚೌಕುಲಾ ಎಂಬ ಗ್ರಾಮದ ಹೊರ ವಲಯದಲ್ಲಿ ಈ ಫಾಲ್ಸ್​​ಗಳಿದ್ದು ಒಂದೇ ಕಡೆ ಒಂದು ಕಿಮೀ ಅಂತರದಲ್ಲಿ ನಾಲ್ಕೈದು ಫಾಲ್ಸ್​​ಗಳು ಪ್ರವಾಸಿಗರಿಗೆ ಸಿಗುತ್ತೆ.

ಇದನ್ನೂ ಓದಿ: Uttara Kannada News: ದೂಧ್​ ಸಾಗರ್‌ಗೆ ಟ್ರೆಕ್ಕಿಂಗ್ ತೆರಳಿದ ಯುವಕರಿಗೆ ಬಸ್ಕಿ ಹೊಡೆಸಿದ ಪೊಲೀಸ್; ವಿಡಿಯೋ ವೈರಲ್​

ಬಾಬಾ ಫಾಲ್ಸ್​ ಈ ವರ್ಷದಿಂದ ಹೆಚ್ಚು ಪ್ರಸಿದ್ಧವಾಗಿದೆ. ಈ ಮೊದಲು ಫಾಲ್ಸ್​​ನಿಂದ ಇಪ್ಪತ್ತು ಕಿಮೀ ದೂರದಲ್ಲಿರುವ ಅಂಬೋಲಿ ಫಾಲ್ಸ್​​ಗೆ ಸಾಕಷ್ಟು ಪ್ರವಾಸಿಗರು ಬರುತ್ತಿದ್ದರು. ಆದರೆ ಈ ಬಾರಿ ಅಲ್ಲಿಗಿಂತ ಬಾಬಾಫಾಲ್ಸ್​​ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಬೆಳಗಾವಿಯಿಂದ 50ಕಿಮೀ ದೂರದಲ್ಲಿರುವ ಈ ಫಾಲ್ಸ್​​​ಗೆ ಸದ್ಯಕ್ಕೆ ಯಾವುದೇ ಬಸ್ ವ್ಯವಸ್ಥೆ ಇಲ್ಲ. ಬೈಕ್, ಕಾರು ಸೇರಿದಂತೆ ಖಾಸಗಿ ವಾಹನಗಳ ಮೂಲಕ ಇಲ್ಲಿಗೆ ಹೋಗಬಹುದಾಗಿದೆ.

ಚೌಕುಲಾ ಅನ್ನೋ ಗ್ರಾಮದಿಂದ ಎರಡು ಕಿಮೀ ಕಾಲ್ನಡಿಗೆಯಲ್ಲಿ ಹೋದರೆ ಈ ಫಾಲ್ಸ್​ ಸಿಗುತ್ತೆ. ಆರಂಭದಲ್ಲಿ ಸಣ್ಣ ಝರಿಗಳಾಗಿ ಜಲಪಾತಗಳು ಸಿಗುತ್ತವೆ. ಮುಂದೆ ಹೋದಂತೆ ನಾಲ್ಕು ಬಂಡೆಗಲ್ಲಿನ ಮೇಲೆ ಉಕ್ಕುವ ಜಲಪಾತಗಳು ಕಾಣಬಹುದು. ಬಂಡೆ ಗಲ್ಲಿನ ಮಧ್ಯೆ ಹೋಗಿ ಮೇಲಿಂದ ಧುಮ್ಮಿಕ್ಕುವ ನೀರಿಗೆ ಮೈಯೊಡ್ಡಿ ಎಂಜಾಯ್ ಮಾಡಬಹುದು. ಈ ರುದ್ರರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ದೂರದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜನ ಹಾಗೂ ಗೋವಾ ಮತ್ತು ಮಹಾರಾಷ್ಟ್ರದಿಂದಲೂ ಪ್ರವಾಸಿಗರು ಬಂದು ಇಲ್ಲಿ ಎಂಜಾಯ್ ಮಾಡುತ್ತಾರೆ.

ಇದನ್ನೂ ಓದಿ: ಸವಣೂರಿನ ಅಪರೂಪದ ತ್ರಿವಳಿ ಹುಣಸೆ ಮರಗಳು: ನೆಲಕ್ಕುರುಳಿದ ಸಾವಿರಾರು ವರ್ಷಗಳ ಮರಕ್ಕೆ ಮರು ಜೀವ ತುಂಬಿದ ಸ್ಥಳೀಯರು, ಜಿಲ್ಲಾಡಳಿತ

ವಿಕೇಂಡ್ ಬಂದರೆ ಸಾಕು ಈ ಬಾಬಾ ಫಾಲ್ಸ್​ ಪ್ರವಾಸಿಗರಿಂದ ತುಂಬಿ ತುಳುಕುತ್ತೆ. ಬಂಡೆಗಲ್ಲಿನ ಮೇಲಿಂದ ಉಕ್ಕುವ ಜಲಪಾತವನ್ನ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಬಸ್ ವ್ಯವಸ್ಥೆ ಮಾಡಿದರೆ ಇನ್ನೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಕುಟುಂಬ ಸಮೇತ ಬಂದು ನೀವು ಒಂದು ಬಾರಿ ಈ ಫಾಲ್ಸ್​​ನಲ್ಲಿ ಎಂಜಾಯ್ ಮಾಡಿ ಧುಮ್ಮಕ್ಕುವ ಜಲಪಾತದ ರುದ್ರರಮಣೀಯ ದೃಶ್ಯ ಕಣ್ತುಂಬಿಕೊಳ್ಳಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.