ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಬಗ್ಗೆ ಚರ್ಚೆ ಆಗಿಲ್ಲ; ಅಂಜಲಿ ನಿಂಬಾಳ್ಕರ್, ಯತ್ನಾಳ್, ಶಿವಲಿಂಗೇಗೌಡ ಬೇಸರ

| Updated By: ganapathi bhat

Updated on: Dec 24, 2021 | 4:07 PM

10 ‌ದಿನದಲ್ಲಿ ಕೇವಲ 52 ಗಂಟೆ ವಿಧಾನಸಭೆ ಕಲಾಪ ನಡೆದಿದೆ. ಕಾಟಾಚಾರದ ಅಧಿವೇಶನ ನಡೆಸುತ್ತಿರುವುದು ತಪ್ಪು. ವಿರೋಧ ಪಕ್ಷ ನಾಯಕರಿಗೆ ಮಾತಾಡಲು ಅವಕಾಶ ಸಿಗಲಿಲ್ಲ ಎಂದು ಬೆಳಗಾವಿಯಲ್ಲಿ ಜೆಡಿಎಸ್​​ ಶಾಸಕ ಶಿವಲಿಂಗೇಗೌಡ ಬೇಸರ ತೋಡಿಕೊಂಡಿದ್ದಾರೆ.

ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಬಗ್ಗೆ ಚರ್ಚೆ ಆಗಿಲ್ಲ; ಅಂಜಲಿ ನಿಂಬಾಳ್ಕರ್, ಯತ್ನಾಳ್, ಶಿವಲಿಂಗೇಗೌಡ ಬೇಸರ
ಶಾಸಕಿ ಅಂಜಲಿ ನಿಂಬಾಳ್ಕರ್
Follow us on

ಬೆಳಗಾವಿ: ಒಂದು ದಿನ ಅಷ್ಟೇ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಅವಕಾಶ ಕೊಟ್ಟರು. ರಾಜಕೀಯವಾಗಿ ಚರ್ಚಿಸಬೇಕು ಎಂದು ಚರ್ಚೆ ಮಾಡಿದ್ದಾರೆ. ಉತ್ತರ ಕರ್ನಾಟಕದ ಸಮಸ್ಯೆ ಹೇಳಬೇಕು ಎಂದು ಆಸೆ ಇತ್ತು. ಆದರೆ 10 ನಿಮಿಷವೂ ಕೂಡ ನಮಗೆ ಅವಕಾಶ ಕೊಡಲಿಲ್ಲ. ಚರ್ಚೆ ಮಾಡಲು ವಿಪಕ್ಷ ನಾಯಕರಿಗೂ ಅವಕಾಶ ನೀಡಿಲ್ಲ ಎಂದು ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಯ ನೀಡದ ಬಗ್ಗೆ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಅಷ್ಟೊಂದು ಮಹತ್ವ ಇಲ್ಲ ಎಂದು ಅವರು ಹೇಳಿದ್ದಾರೆ.

ಮತಾಂತರ ಬಿಲ್ ಪಾಸ್ ಮಾಡುವುದೇ ಇವರ ಗುರಿಯಾಗಿತ್ತು. ಬಿಲ್ ಪಾಸ್ ಮಾಡುವುದಕ್ಕೇ ಈ ಅಧಿವೇಶನವನ್ನು ಕರೆದಿದ್ದಾರೆ. 10 ‌ದಿನದಲ್ಲಿ ಕೇವಲ 52 ಗಂಟೆ ವಿಧಾನಸಭೆ ಕಲಾಪ ನಡೆದಿದೆ. ಕಾಟಾಚಾರದ ಅಧಿವೇಶನ ನಡೆಸುತ್ತಿರುವುದು ತಪ್ಪು. ವಿರೋಧ ಪಕ್ಷ ನಾಯಕರಿಗೆ ಮಾತಾಡಲು ಅವಕಾಶ ಸಿಗಲಿಲ್ಲ ಎಂದು ಬೆಳಗಾವಿಯಲ್ಲಿ ಜೆಡಿಎಸ್​​ ಶಾಸಕ ಶಿವಲಿಂಗೇಗೌಡ ಬೇಸರ ತೋಡಿಕೊಂಡಿದ್ದಾರೆ.

ಅಧಿವೇಶನ ಪ್ರಾರಂಭದಲ್ಲೆೇ ಉತ್ತರ ಕರ್ನಾಟಕ ಭಾಗದ ಬಗ್ಗೆ ಚರ್ಚಿಸಬೇಕಿತ್ತು. ಉದ್ದೇಶಪೂರ್ವಕವಾಗಿ ಚರ್ಚೆ ಆಗಲಿಲ್ಲ. ಆಡಳಿತ ಪಕ್ಷದವರು ಸರಿಯಾಗಿ ಉತ್ತರ ಹೇಳಲು ಬಿಡಲಿಲ್ಲ. ಇನ್ಮುಂದೆ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸುವುದಾದ್ರೆ ಅಧಿವೇಶನ ಕರೆಯಲಿ. ಜಾತ್ರೆ ಮಾಡೋಕೆ ಅಧಿವೇಶನ ಮಾಡೋದು ಬೇಡ. ಈ ಅಧಿವೇಶನ ಜಾತ್ರೆ ಆದಂತೆ ಆಯ್ತು. ನಮಗೆ ನಿರಾಸೆ ಆಗಿದೆ ಎಂದು ಅಧಿವೇಶನದ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: ಹತ್ತು ದಿನ 52 ಗಂಟೆಗಳ ಕಾಲ ವಿಧಾನಸಭೆ ಅಧಿವೇಶನ ನಡೆಸಲಾಗಿದೆ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿವರಣೆ

ಇದನ್ನೂ ಓದಿ: ಉತ್ತರ ಕರ್ನಾಟಕ ಹಾಗೂ ಬೇರೆ ಬೇರೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ: ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ