Love jihad: ನರ್ಸಿಂಗ್​ ಓದಿಕೊಂಡು ಕೆಲಸ ಮಾಡ್ತಾ ಮನೆಗೆ ಆಧಾರವಾಗಿದ್ದಳು! ಯಾವ ಮಾಯೆಯಲ್ಲಿ ಲವ್ ಜಿಹಾದ್ ಗೆ ಬಲಿಯಾದಳು ಈ ಯುವತಿ?

ಆತ ಯಾರು, ಎನೂ ಅಂತಾ ವಿಚಾರಿಸಿದಾಗ ಈಕೆಯನ್ನ ಎರಡು ವರ್ಷದಿಂದ ಆತ ಪ್ರೀತಿಸುತ್ತಿದ್ದ ಅನ್ನೋದು ಗೊತ್ತಾಗಿದೆ. ಕೂಡಲೇ ತೇಜಸ್ವಿ ತಂದೆ ಗಂಗಪ್ಪಾ ಅವರಿಂದ 306 ಸೆಕ್ಷನ್ ಅಡಿ ಕೇಸ್ ದಾಖಲಿಸಿಕೊಂಡ ಪೊಲೀಸರು ಆತನನ್ನ ನಿನ್ನೆ ಬುಧವಾರ ಬಂಧಿಸಿ ಜೈಲಿಗಟ್ಟಿದ್ದಾರೆ.

Love jihad: ನರ್ಸಿಂಗ್​ ಓದಿಕೊಂಡು ಕೆಲಸ ಮಾಡ್ತಾ ಮನೆಗೆ ಆಧಾರವಾಗಿದ್ದಳು! ಯಾವ ಮಾಯೆಯಲ್ಲಿ ಲವ್ ಜಿಹಾದ್ ಗೆ ಬಲಿಯಾದಳು ಈ ಯುವತಿ?
ಯಾವ ಮಾಯದಲ್ಲಿ ಲವ್ ಜಿಹಾದ್ ಗೆ ಬಲಿಯಾದಳು ಈ ಯುವತಿ? (ಆರೋಪಿ ಆಸಿಫ್)
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 02, 2023 | 6:14 PM

ಆತನಿಗೆ ಈಗಾಗಲೇ ಮದುವೆಯಾಗಿ ಒಂದು ಮಗು ಕೂಡ ಇದೆ. ಇಷ್ಟಾದರೂ ಎರಡು ವರ್ಷದಿಂದ ಅದೊಬ್ಬ ಯುವತಿಯ ಹಿಂದೆ ಬಿದ್ದು ಆಕೆಯನ್ನ ತನ್ನ ಪ್ರೀತಿಯ ಬುಟ್ಟಿಗೆ ಬೀಳಿಸಿಕೊಂಡಿದ್ದ. ಇದಾದ ಬಳಿಕ ಆಕೆಯ ಜತೆಗೆ ಅನ್ಯೋನ್ಯವಾಗ್ತಾ ಮದುವೆ ಆಗುವ ಮಟ್ಟಿಗೆ ಹೋಗಿ ಕೆಲ ದಿನಗಳ ಹಿಂದೆ ಮದುವೆ ಆಗಲ್ಲಾ ಅಂತಾ ಊಲ್ಟಾ ಹೊಡೆದಿದ್ದ. ಇದರಿಂದ ಮನನೊಂದ ಯುವತಿ ಸಾವಿನ ದಾರಿ ಹಿಡಿದಳಾ? ಯುವತಿಯ ಕುಟುಂಬಸ್ಥರ ಆರೋಪ ಎನು? ಇಷ್ಟಕ್ಕೂ ಲವ್ ಜಿಹಾದ್ (Love Jihad) ಆರೋಪ ಯಾಕೆ? ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು ಆಟ ಆಡ್ತಿದ್ದವನ ಅಸಲಿಯತ್ತೇನು? ಈ ಸ್ಟೋರಿ ನೋಡಿ… ಪೋಟೊದಲ್ಲಿರುವ ಚೆಂದುಳ್ಳಿ ಚೆಲುವೆಯ ಹೆಸರು ತೇಜಸ್ವಿನಿ ಗುಜ್ಜರ್ ಅಂತಾ, ವಯಸ್ಸು 21ವರ್ಷ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ (Belagavi, Athani) ತಾವಂಶಿ ಗ್ರಾಮದ ನಿವಾಸಿ. ಇನ್ನೂ ಕಾಲೇಜಿಗೆ ಹೋಗ್ತಾ ನರ್ಸಿಂಗ್ (Nursing) ಕೆಲಸ ಕೂಡ ಮಾಡುತ್ತಿದ್ದ ಈಕೆ ಜನವರಿ 26ರಂದು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ವಿಷ ಕುಡಿದು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ.

ಇನ್ನು ಮಗಳು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಳು ಅನ್ನೋದು ಕುಟುಂಬಸ್ಥರಿಗೆ ಗೊತ್ತಾಗದೇ ಸಂಕಷ್ಟದಲ್ಲಿದ್ದವರಿಗೆ ಪೊಲೀಸರು ಆಕೆಯ ಮೊಬೈಲ್ ನಲ್ಲಿ ಅದೊಬ್ಬ ಯುವಕನ ಫೋಟೋ ಇರುವುದನ್ನ ತೋರಿಸಿ ಇದು ಯಾರು ಅಂತಾ ಕೇಳಿದ್ದಾರೆ. ಈ ವೇಳೆ ತಮಗೆ ಎನೂ ಗೊತ್ತಿಲ್ಲಾ ಅಂತಾ ತೇಜಸ್ವಿನಿ ತಂದೆ ತಾಯಿ ಹೇಳಿದ್ದಾರೆ. ಇದಾದ ಬಳಿಕ ತನಿಖೆ ನಡೆಸಿದಾಗ ಆತ ಆಸಿಫ್ ದೇಸಾಯಿ ಎಂಬ ಹುಡುಗ ಎಂಬುದು ಗೊತ್ತಾಗಿದೆ.

ಆತ ಯಾರು, ಎನೂ ಅಂತಾ ವಿಚಾರಿಸಿದಾಗ ಈಕೆಯನ್ನ ಎರಡು ವರ್ಷದಿಂದ ಆತ ಪ್ರೀತಿಸುತ್ತಿದ್ದ ಅನ್ನೋದು ಗೊತ್ತಾಗಿದೆ. ಕೂಡಲೇ ತೇಜಸ್ವಿ ತಂದೆ ಗಂಗಪ್ಪಾ ಅವರಿಂದ 306 ಸೆಕ್ಷನ್ ಅಡಿ ಕೇಸ್ ದಾಖಲಿಸಿಕೊಂಡ ಪೊಲೀಸರು ಆತನನ್ನ ನಿನ್ನೆ ಬುಧವಾರ ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನು ಆಕೆಯ ಸಾವಿಗೆ ಆಸಿಫ್ ಎಂಬಾತನೇ ಕಾರಣವಾಗಿದ್ದು ಆತನಿಗೆ ಕಠಿಣ ಶಿಕ್ಷೆ ಆಗಬೇಕು ಅಂತಾ ಯುವತಿಯ ತಂದೆ-ತಾಯಿ ಒತ್ತಾಯ ಮಾಡಿದ್ದಾರೆ.

ಅಷ್ಟಕ್ಕೂ ಈ ಆಸಿಫ್ ದೇಸಾಯಿ ಯಾರು ಅನ್ನೋದನ್ನ ನೋಡೊದಾದ್ರೇ ಈತ ಅಥಣಿ ಪಟ್ಟಣದ ನಿವಾಸಿಯಾಗಿದ್ದು ಎರಡು ವರ್ಷದ ಹಿಂದೆ ತೇಜಸ್ವಿನಿಯನ್ನು ತನ್ನ ಪ್ರೀತಿಯಲ್ಲಿ ಬೀಳಿಸಿಕೊಂಡು ಮೋಸ ಮಾಡಿದ್ದಾನೆ. ಮದುವೆ ಕೂಡ ಆಗಿರುವ ಈ ಆಸಿಫ್ ಗೆ ಈಗಾಗಲೇ ಒಂದು ಮಗು ಕೂಡ ಇದೆ. ಆದ್ರೇ ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು ಅವರ ಜತೆಗೆ ಪ್ರೀತಿ ಪ್ರೇಮದ ಆಟವಾಡಿ ನಂತರ ಅವರನ್ನ ಮಧ್ಯದಲ್ಲೇ ಬಿಡುವ ಕೆಲಸವನ್ನ ಈತ ಮಾಡ್ತಿದ್ದಾನಂತೆ.

ಇನ್ನು ಈತನ ಮೇಲೆ ಹಾಫ್ ಮರ್ಡರ್ ಕೇಸ್ ಕೂಡ ಇದ್ದು ಜೈಲಿಗೆ ಹೋಗಿ ಬಂದು ಮತ್ತೆ ಹುಡುಗಿಯರ ಹಿಂದೆ ಬಿದ್ದು ಈ ರೀತಿ ಜೀವ ಬಲಿ ಪಡೆದಿದ್ದಾನೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ತೇಜಸ್ವಿನಿ ಸಾವಿಗೆ ಕಾರಣ ಲವ್ ಜಿಹಾದ್ ಅನ್ನೋ ಅನುಮಾನ ಕಾಡುತ್ತಿದೆ. ಯಾಕಂದ್ರೇ ಆಸಿಫ್ ಎಂಬಾತ ಈಕೆಯೊಂದಿಗೆ ಲವ್ ನಾಟಕವಾಡಿ ಮದುವೆ ಆಗುತ್ತೇನೆ ಅಂತಾ ನಂಬಿಸಿ ಕೆಲ ದಿನಗಳ ಹಿಂದೆ ಕೈಕೊಟ್ಟಿದ್ದ. ಇದರಿಂದ ಮನನೊಂದಿದ್ದ ತೇಜಸ್ವಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಗಳ ಸಾವಿಗೆ ಮುಸ್ಲಿಂ ಯುವಕನೇ ಕಾರಣವಾಗಿದ್ದು, ಏನೂ ಅರಿಯದ ಮಗಳಿಗೆ ಆತ ಮೋಸ ಮಾಡಿದ್ದು ನಮಗೆ ನ್ಯಾಯ ಕೊಡಿಸಿ ಅಂತಾ ಯುವತಿಯ ತಂದೆ ಮನವಿ ಮಾಡಿಕೊಳ್ತಿದ್ದಾರೆ.

ಒಟ್ಟಾರೆ ಓದಿನ ಜತೆಗೆ ಕೆಲಸ ಮಾಡಿಕೊಂಡು ತನ್ನ ಜೀವನ ಕಟ್ಟಿಕೊಳ್ಳುವುದರ ಜತೆಗೆ ಮನೆ ಕೂಡ ನಿರ್ವಹಣೆ ಮಾಡ್ತಿದ್ದ ಯುವತಿಯ ಬಾಳಲ್ಲಿ ಆಡಬಾರದ ಆಟ ಆಡಿ ಇದೀಗ ಆಕೆಯನ್ನೇ ಬಲಿ ಪಡೆದಿದ್ದಾನೆ. ಮಗಳನ್ನ ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿಡ್ತಿದ್ದಾರೆ. ಆರೋಪಿಯನ್ನ ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಅದೇನೆ ಇರಲಿ ಮದುವೆಯಾದ ಬಳಿಕವೂ ಯುವತಿಯ ಬಾಳಲ್ಲಿ ಆಟವಾಡುವ ಇಂತಹವರಿಗೆ ಕಠಿಣ ಶಿಕ್ಷೆ ಆಗಬೇಕು. ಇಲ್ಲವಾದ್ರೇ ಇನ್ನಷ್ಟು ಯುವತಿಯರ ಜೀವದಲ್ಲಿ ಚೆಲ್ಲಾಟವಾಡಿ ಬಲಿ ಪಡೆಯುತ್ತಾರೆ. ಈ ನಿಟ್ಟಿನಲ್ಲಿ ಪೊಲೀಸರು ಈತನಿಗೆ ತಕ್ಕ ಶಿಕ್ಷೆ ಕೊಡಿಸಲಿ.

ವರದಿ: ಸಹದೇವ ಮಾನೆ, ಟಿವಿ 9, ಬೆಳಗಾವಿ 

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್