ಕನ್ನಡ ಬಾವುಟ ಪ್ರದರ್ಶಿಸಿದ್ದ ವಿದ್ಯಾರ್ಥಿ ಮೇಲೆ‌ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್: ವೈಯಕ್ತಿಕ ಜಗಳದಲ್ಲಿ ಬಾವುಟ ತಂದ್ರಾ?

| Updated By: ವಿವೇಕ ಬಿರಾದಾರ

Updated on: Dec 03, 2022 | 8:44 PM

ವೈಯಕ್ತಿಕ ಕಾರಣಕ್ಕೆ ಹಲ್ಲೆ ಮಾಡಲಾಗಿದೆ, ಕನ್ನಡ ಬಾವುಟ ತೆಗೆದಿದ್ದಕ್ಕೆ ಅಲ್ಲ ಎಂದು ಹಲ್ಲೆ ಮಾಡಿದ ವಿದ್ಯಾರ್ಥಿ ಹೇಳಿದ್ದಾನೆ.

ಕನ್ನಡ ಬಾವುಟ ಪ್ರದರ್ಶಿಸಿದ್ದ ವಿದ್ಯಾರ್ಥಿ ಮೇಲೆ‌ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್: ವೈಯಕ್ತಿಕ ಜಗಳದಲ್ಲಿ ಬಾವುಟ ತಂದ್ರಾ?
ಬೆಳಗಾವಿ
Follow us on

ಬೆಳಗಾವಿ: ಕಳೆದ ತಿಂಗಳು ನ.30 ರಂದು ಕನ್ನಡ ಬಾವುಟ ಪ್ರದರ್ಶಿಸಿದ್ದಕ್ಕೆ ವಿದ್ಯಾರ್ಥಿ ಮೇಲೆ‌ ಹಲ್ಲೆ ಮಾಡಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ವೈಯಕ್ತಿಕ ಕಾರಣಕ್ಕೆ ಹಲ್ಲೆ ಮಾಡಲಾಗಿದೆ, ಕನ್ನಡ ಬಾವುಟ ತೆಗೆದಿದ್ದಕ್ಕೆ ಅಲ್ಲ ಎಂದು ಹಲ್ಲೆ ಮಾಡಿದ ವಿದ್ಯಾರ್ಥಿ ಹೇಳಿದ್ದಾನೆ.

ಇಂದು (ಡಿ. 3) ಹಲ್ಲೆ ಮಾಡಿದ ವಿದ್ಯಾರ್ಥಿಯ ಜೊತೆ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ವೇಳೆ ಮಾತನಾಡಿದ ವಿದ್ಯಾರ್ಥಿ ಹಲ್ಲೆಗೊಳಗಾದ ವಿದ್ಯಾರ್ಥಿ ಮೊದಲು ಅವಾಚ್ಯವಾಗಿ ನಿಂದಿಸಿದ್ದನು. ಅವಾಚ್ಯವಾಗಿ ನಿಂದಿಸಿ ಕಾಲು ತುಳಿದಿದ್ದಕ್ಕೆ ಹಲ್ಲೆ ಮಾಡಲಾಗಿದೆ. ನಾನು ದಲಿತ ಅಂತ ಹಲವು ಬಾರಿ ಸಹಪಾಠಿ ವಿದ್ಯಾರ್ಥಿ ನಿಂದಿಸಿದ್ದನು. ಕಾಲೇಜು ಕಾರ್ಯಕ್ರಮದಲ್ಲೂ ಅವಾಚ್ಯವಾಗಿ ನಿಂದಿಸಿದ್ದಕ್ಕೆ ಹಲ್ಲೆಗೈದಿದ್ದೇನೆ. ತನ್ನ ವಿರುದ್ಧ ದಾಖಲಿಸಿರುವ ಕೇಸ್ ಹಿಂಪಡೆಯುವಂತೆ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾನೆ.

ಇದನ್ನೂ ಓದಿ: Kannada Flag: ಬೆಳಗಾವಿಯಲ್ಲಿ ಕನ್ನಡ ಬಾವುಟ ಹಾರಿಸಿದ್ದಕ್ಕೆ ವಿದ್ಯಾರ್ಥಿಗೆ ಥಳಿತ: ನಮ್ಮ ನಾಡಲ್ಲಿ ಇದೆಂಥಾ ದೌರ್ಜನ್ಯ..?

ಕನ್ನಡ ಪರ ಸಂಘಟನೆ ಮುಖಂಡ ಸಂಪತ್‌ ಕುಮಾರ್‌ ದೇಸಾಯಿ ಕ್ರಮ ಕೈಗೊಳ್ಳುವಂತೆ ಒತ್ತಾಯ

ಸಂಪತ್‌ ಕುಮಾರ್‌ ದೇಸಾಯಿ ಕನ್ನಡಪರ ಹೋರಾಟಗಾರರ ಕುಮ್ಮಕ್ಕಿನಿಂದ ಗಲಾಟೆ ಮಾಡಿದ್ದಾನೆ. ಹೀಗಾಗಿ ಸಂಪತ್ ಕುಮಾರ್​ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ದಲಿತಪರ ಸಂಘಟನೆಗಳು ಒತ್ತಾಯ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:35 pm, Sat, 3 December 22