ಬೆಳಗಾವಿಯಲ್ಲಿ ಬ್ರೇಕ್ ಫೇಲ್ ಆಗಿ ರಸ್ತೆ ಡಿವೈಡರ್‌ಗೆ ಗುದ್ದಿದ ಕ್ರೇನ್: ಕೂದಲೆಳೆ ಅಂತರದಲ್ಲಿ ಪಾರಾದ ಶಾಲಾ ವಾಹನ

ಬೆಳಗಾವಿಯಲ್ಲಿ ಬ್ರೇಕ್ ಫೇಲ್ ಆಗಿ ರಸ್ತೆ ಡಿವೈಡರ್‌ಗೆ ಗುದ್ದಿದ ಕ್ರೇನ್: ಕೂದಲೆಳೆ ಅಂತರದಲ್ಲಿ ಪಾರಾದ ಶಾಲಾ ವಾಹನ

TV9 Web
| Updated By: ವಿವೇಕ ಬಿರಾದಾರ

Updated on:Dec 03, 2022 | 12:43 AM

ಬ್ರೇಕ್ ಫೇಲ್ ಆಗಿ ಕ್ರೇನ್ ವಾಹನ ರಸ್ತೆ ಡಿವೈಡರ್‌ಗೆ ಗುದ್ದಿರುವ ಘಟನೆ ಬೆಳಗಾವಿಯ ನೆಹರು ನಗರದ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಬೆಳಗಾವಿ: ಬೆಳಗಾವಿಯಲ್ಲಿ ಕೂದಲೇಳೆ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಕೆಎಲ್‌ಇ ಆಸ್ಪತ್ರೆಯ ಕಡೆಯಿಂದ ಕೃಷ್ಣದೇವರಾಯ ಸರ್ಕಲ್ ಕಡೆಗೆ ಬರುತ್ತಿದ್ದ ಕ್ರೇನ್ ಇಳಿಜಾರಿನಲ್ಲಿ ವೇಗವಾಗಿ ಹೋಗುತ್ತಿತ್ತು. ಈ ವೇಳೆ ಏಕಾಏಕಿ ಬ್ರೇಕ್ ವಿಫಲವಾಯಿತು. ಇದರಿಂದ ಕ್ರೇನ್ ವಾಹನ ರಸ್ತೆ ಡಿವೈಡರ್‌ಗೆ ಗುದ್ದಿದೆ. ಅಪಘಾತ ಸಮಯದಲ್ಲಿ  ಅದೇ ರಸ್ತೆಯಲ್ಲಿ ಶಾಲಾ ವಾಹನ  ಕೂದಲೆಳೆ ಅಂತರದಲ್ಲಿ ಪಾರಾಗಿದೆ.

 

Published on: Dec 03, 2022 12:42 AM