ಹಾವೇರಿ: ಬೇರೆ ಜಾತಿಯ ಹಾವನ್ನು ಕೊಂದು ನುಂಗಲು ಪ್ರಯತ್ನಿಸಿದ ನಾಗರಹಾವು, ಉರಗ ತಜ್ಞ ಪೊಲೀಸ್ ಪೇದೆಯಿಂದ ರಕ್ಷಣೆ
ವೃತ್ತಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿರುವ ಸ್ನೇಕ್ ರಮೇಶ್ ಸ್ಥಳಕ್ಕೆ ಧಾವಿಸಿ ನಾಗರಹಾವನನ್ನು ರಕ್ಷಿಸಿದ್ದಾರೆ. ಆದರೆ ಮತ್ತೊಂದು ಹಾವು ಸತ್ತುಹೋಗಿದೆ.
ಹಾವೇರಿ: ನಾಗರಹಾವುಗಳು (cobras) ಬೇರೆ ಹಾವುಗಳನ್ನು ತಿನ್ನಲು ಪ್ರಯತ್ನಿಸುವುದು ಇತ್ತೀಚಿಗೆ ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯ. ಅವುಗಳಿಗೆ ತಿನ್ನಲು ಕೀಟಗಳ ಕೊರತೆಯಾದಂತಿದೆ. ಹಾವೇರಿ ಜಿಲ್ಲೆಯ ಕನವಳ್ಳಿ (Kanavalli) ಗ್ರಾಮದ ಮನೆಯೊಂದರಲ್ಲಿ ನಾಗರಹಾವೊಂದು ಇನ್ನೊಂದು ಹಾವಿನ ಜೊತೆ ಕಾದಾಡುತ್ತಾ ಮನೆಮಾಳಿಗೆಗೆ ಹೋಗಿದೆ. ಅದು ಹಾವನ್ನು ಕೊಂದು ತಿನ್ನುವ ಪ್ರಯತ್ನದಲ್ಲಿದ್ದಾಗ ಮನೆಯವರು ನೋಡಿದ್ದಾರೆ. ವೃತ್ತಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿರುವ ಸ್ನೇಕ್ ರಮೇಶ್ (Snake Ramesh) ಸ್ಥಳಕ್ಕೆ ಧಾವಿಸಿ ನಾಗರಹಾವನನ್ನು ರಕ್ಷಿಸಿದ್ದಾರೆ. ಆದರೆ ಮತ್ತೊಂದು ಹಾವು ಸತ್ತುಹೋಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Dec 03, 2022 10:47 AM
Latest Videos