Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ನೈತಿಕ ಪೊಲೀಸಗಿರಿ: ಯುವತಿ ಜೊತೆ ಹೋಗಿದ್ದಕ್ಕೆ ಹಲ್ಲೆ, 6 ಜನರ ಬಂಧನ

ಭಿನ್ನಕೋಮಿನ ಯುವತಿ ಜೊತೆ ಬಂದಿದ್ದ ಯುವಕನ ಮೇಲೆ ಭಿನ್ನಕೋಮಿನ 10ರಿಂದ 12 ಯುವಕರ ಗುಂಪಿನಿಂದ ಹಲ್ಲೆ ಮಾಡಿರುವಂತಹ ಘಟನೆ ಬೆಳಗಾವಿ ನಗರದ ಖಂಜರ್ ಗಲ್ಲಿ ದರ್ಗಾ ಬಳಿ ನಡೆದಿದ್ದು, ಸದ್ಯ 10 ಜನರ ವಿರುದ್ಧ ಕೇಸ್ ದಾಖಲಿಸಿ 6 ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಹೇಳಿದ್ದಾರೆ.

ಬೆಳಗಾವಿಯಲ್ಲಿ ನೈತಿಕ ಪೊಲೀಸಗಿರಿ: ಯುವತಿ ಜೊತೆ ಹೋಗಿದ್ದಕ್ಕೆ ಹಲ್ಲೆ, 6 ಜನರ ಬಂಧನ
ಪೊಲೀಸ್​ ಠಾಣೆ
Follow us
Sahadev Mane
| Updated By: ಗಂಗಾಧರ​ ಬ. ಸಾಬೋಜಿ

Updated on: Aug 27, 2023 | 3:01 PM

ಬೆಳಗಾವಿ, ಆಗಸ್ಟ್ 27:​ ಜಿಲ್ಲೆಯ ಖಂಜರ್​ಗಲ್ಲಿ ದರ್ಗಾ ಬಳಿ ನೈತಿಕ ಪೊಲೀಸ್​ಗಿರಿ (moral policing) ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರ ವಿರುದ್ಧ ಕೇಸ್ ದಾಖಲಿಸಿ 6 ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಹೇಳಿದ್ದಾರೆ. ನಗರದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಅನ್ಯಕೋಮಿನ ಮಹಿಳೆ ಜೊತೆ ಬಂದಿದ್ದಕ್ಕೆ ತಪ್ಪು ತಿಳುವಳಿಕೆಯಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತಕ್ಷಣ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಯುವಕನನ್ನು ರಕ್ಷಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಹಲ್ಲೆಗೊಳಗಾದ ಜ್ಞಾನೇಶ್ವರ ದೂರು ದಾಖಲಿಸಿದ್ದು, 6 ಜನರ ಪೈಕಿ ಇಬ್ಬರು ಅಪ್ರಾಪ್ತರಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರೊಂದಿಗೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಹೇಳಿದ್ದಾರೆ.

ಘಟನೆ ಹಿನ್ನೆಲೆ

ಭಿನ್ನಕೋಮಿನ ಯುವತಿ ಜೊತೆ ಬಂದಿದ್ದ ಯುವಕನ ಮೇಲೆ ಭಿನ್ನಕೋಮಿನ 10ರಿಂದ 12 ಯುವಕರ ಗುಂಪಿನಿಂದ ಹಲ್ಲೆ ಮಾಡಿರುವಂತಹ ಘಟನೆ ಬೆಳಗಾವಿ ನಗರದ ಖಂಜರ್ ಗಲ್ಲಿ ದರ್ಗಾ ಬಳಿ ನಡೆದಿದೆ. ಆಗಸ್ಟ್​ 25ರ ಮಧ್ಯಾಹ್ನ 2.30ಕ್ಕೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗೋಕಾಕ್ ತಾಲೂಕಿನ ಘಟಪ್ರಭಾ ಮೂಲದ ಜ್ಞಾನೇಶ್ವರ ಡವರಿ ಮತ್ತು ಭಿನ್ನಕೋಮಿನ ಯುವತಿ ಇಬ್ಬರೂ ಒಂದೇ ಊರಿನವರು.

ಇದನ್ನೂ ಓದಿ: ಬೆಳಗಾವಿಯಲ್ಲಿ ನೈತಿಕ ಪೊಲೀಸ್ ಗಿರಿ; ಅನ್ಯಕೋಮಿನ ಯುವತಿ ಜೊತೆ ಬಂದಿದಕ್ಕೆ ಯುವಕರ ಗುಂಪಿನಿಂದ ಹಲ್ಲೆ, 8 ಜನರ ವಿರುದ್ಧ ದೂರು

ಜ್ಞಾನೇಶ್ವರ ಊರು ಊರು ತಿರುಗಿ ಚಪ್ಪಲಿ ಮಾರಾಟ ಮಾಡುತ್ತಿದ್ದರೆ, ಯುವತಿ ಘಟಪ್ರಭಾದಲ್ಲಿ ಬ್ಯೂಟಿ ಫಾರ್ಲರ್ ನಡೆಸುತ್ತಿದ್ದಾಳೆ. ಕೇಂದ್ರ ಬಸ್ ನಿಲ್ದಾಣದಲ್ಲಿ ಯುವತಿ ಮತ್ತು ಜ್ಞಾನೇಶ್ವರ ಭೇಟಿಯಾಗಿದ್ದಾರೆ. ಈ ವೇಳೆ ಬ್ಯೂಟಿ ಫಾರ್ಲರ್ ಸಾಮಗ್ರಿ ತೆಗೆದುಕೊಂಡು ಬರೋಣ ಬಾ ಅಂತಾ ಕರೆದಿದ್ದಾಳೆ. ಒಂದೇ ಊರಿನವಳು ಪರಿಚಯಸ್ಥಳು ಆಗಿದ್ದರಿಂದ ಅವಳೊಂದಿಗೆ ಜ್ಞಾನೇಶ್ವರ‌ ಆಟೋ ಹತ್ತಿದ್ದ. ಮಾರ್ಕೆಟ್​ಗೆ ಆಗಮಿಸಿದ್ದ ವೇಳೆ ಚಲಿಸುತ್ತಿದ್ದ ಆಟೋ ಅಡ್ಡಗಟ್ಟಿ ಜ್ಞಾನೇಶ್ವರ ಮೇಲೆ ಭಿನ್ನಕೋಮಿನ ಗುಂಪು ಹಲ್ಲೆ ಮಾಡಿದೆ.

ಯುವಕನಿಗೆ ಹಲ್ಲೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು. ಹಲ್ಲೆಗೊಳಗಾದ ಜ್ಞಾನೇಶ್ವರ ಡವರಿಯಿಂದ ಮಾರ್ಕೆಟ್ ಠಾಣೆಗೆ 8 ಜನರ ವಿರುದ್ಧ ಕೇಸ್ ದಾಖಲಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.