ಬೆಳಗಾವಿ: ಹಳೆದಾಯ್ತು ಅಂತ ಹೇಳಿ ಬೆಳಗಾವಿಗೆ ಸ್ಥಳಾಂತರಿದ ಬಿಎಂಟಿಸಿ ಬಸ್ಗಳು (BMTC Buses) ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಎಲ್ಲೆಂದರಲ್ಲಿ ಕೆಟ್ಟು ನಿಂತಿವೆ. ಇದು ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದ್ದು, ಸಂಚಾರ ದಟ್ಟಣೆ ಉಂಟಾಗುತ್ತಿದೆ. ಹೀಗೆ ಟ್ರಾಫಿಕ್ ಜಾಮ್ನಲ್ಲಿ (Traffic Jam) ಸಿಲುಕಿದ ಆ್ಯಂಬುಲೆನ್ಸ್ ಸುಮಾರು 15 ನಿಮಿಷಗಳ ಕಾಲ ದಟ್ಟಣೆಯಿಂದ ಹೊರಬರಲು ಪರದಾಡಿದೆ. ಪೊಲೀಸರು ಹರಸಾಹಸೊಟ್ಟು ಕೊನೆಗೂ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ದಾರಿಮಾಡಿಕೊಟ್ಟರು. ಒಂದು ಗಂಟೆ ಬಳಿಕ ಪೊಲೀಸರು ಮೆಕ್ಯಾನಿಕ್ ಕರೆಸಿ ಬಸ್ ಸರಿ ಮಾಡಿಸಿ ರಸ್ತೆಯಿಂದ ಕಳಿಸಿದ್ದಾರೆ.
ಬೆಂಗಳೂರಿನಿಂದ ಸುಮಾರು 50 ಹಳೆಯ ಬಿಎಂಟಿಸಿ ಬಸ್ಗಳನ್ನು ಬೆಳಗಾವಿಗೆ ತರಲಾಗಿದೆ. ಇನ್ನು, ಜಿಲ್ಲೆಯಲ್ಲಿ ಚೆನ್ನಾಗಿದ್ದ ಬಸ್ಗಳನ್ನು ಬೇರೆ ಕಡೆಗಳಿಗೆ ಕಳುಹಿಸಿ ಹಳೆಯ ಬಿಎಂಟಿಸಿ ಬಸ್ಗಳನ್ನು ಅಧಿಕಾರಿಗಳು ತಂದಿರುವುದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಬಸ್ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿರುವುದರಿಂದ ಪ್ರಯಾಣಿಕರು ಕೂಡ ಆಕ್ರೋಶ ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಡಿಪೋ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಬಿಎಂಟಿಸಿ ಚಾಲಕ ಆತ್ಮಹತ್ಯೆಗೆ ಯತ್ನ
ಬೆಂಗಳೂರು: ಅಜಾಗರೂಕತೆಯಿಂದ ಬಸ್ ಚಾಲನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರಯಾಣಿಕರು ದೂರು ನೀಡಿದ ಹಿನ್ನಲೆ ಬಿಎಂಟಿಸಿ ಡಿಪೋ-33ರ ವ್ಯವಸ್ಥಾಪಕರಿಂದ ಚಾಲಕ ವಿವೇಕಾನಂದಸ್ವಾಮಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕಾರು ಓವರ್ಟೇಕ್ ಮಾಡಿದ್ದ ಬಿಎಂಟಿಸಿ ಬಸ್ ಚಾಲಕನ ವಿರುದ್ಧ ಪ್ರಯಾಣಿಕ ದೂರು ಹಿನ್ನೆಲೆ 3 ದಿನದೊಳಗೆ ಉತ್ತರ ನೀಡುವಂತೆ ಚಾಲಕ ವಿವೇಕಾನಂದಸ್ವಾಮಿಗೆ ಡಿಪೋ ಮ್ಯಾನೇಜರ್ ನೋಟಿಸ್ ನೀಡಿದ್ದಾರೆ. ಅಲ್ಲದೆ, ಸೂಕ್ತ ಉತ್ತರ ನೀಡದಿದ್ದಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳವ ಎಚ್ಚರಿಕೆಯೂ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:31 pm, Thu, 2 February 23