ಇದು ಸಮುದಾಯದ ಹೋರಾಟ, ವ್ಯಕ್ತಿಯ ಹೋರಾಟ ಅಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ

| Updated By: Rakesh Nayak Manchi

Updated on: Jan 07, 2023 | 10:42 AM

ಮೀಸಲಾತಿ ಹೋರಾಟಕ್ಕೆ ಅನ್ಯಾಯ ಮಾಡಿದರೆ ಅವರನ್ನು ಸಮುದಾಯ ದೂರವಿಡುತ್ತದೆ. ವಿನಾಕಾರಣ ವಿಳಂಬ ಮಾಡಲು ಸಿಎಂ ಮೇಲೆ ಒತ್ತಡ ಹಾಕ್ತಿದ್ದಾರೆ ಅನಿಸುತ್ತದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಇದು ಸಮುದಾಯದ ಹೋರಾಟ, ವ್ಯಕ್ತಿಯ ಹೋರಾಟ ಅಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ
ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ರಾಣೆಬೆನ್ನೂರು ಬಿಜೆಪಿ ಶಾಸಕ ಅರುಣ್ ಕುಮಾರ್
Follow us on

ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ (Panchamasali 2A Reservation) ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ಮಾಡುತ್ತಿರುವ ಹೋರಾಟ ಯಾವುದೇ ವ್ಯಕ್ತಿಯ ಹೋರಾಟ ಅಲ್ಲ, ಇದು ಸಮುದಾಯದ ಹೋರಾಟ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ (Basava Jaya Mrityunjaya swamiji) ಹೇಳಿದ್ದಾರೆ. ಹೋರಾಟಕ್ಕೆ ಅನ್ಯಾಯ ಮಾಡಿದರೆ ಅವರನ್ನು ಸಮುದಾಯ ದೂರವಿಡುತ್ತದೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಸಭೆ ನಡೆಸಿ ಹೋರಾಟದ ಬಗ್ಗೆ ಚರ್ಚಿಸುತ್ತೇನೆ. ಈಗಾಗಲೇ ಶಿಗ್ಗಾಂವಿಯಲ್ಲಿ ನಾವು ಒಂದು ಬಾರಿ ಹೋರಾಟ ಮಾಡಿದ್ದೇವೆ. ವಿನಾಕಾರಣ ವಿಳಂಬ ಮಾಡಲು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕ್ತಿದ್ದಾರೆ ಅನಿಸುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai)ಯವರ ಮನಸ್ಸಿನಲ್ಲಿ ಮೀಸಲಾತಿ ಕೊಡಬೇಕು ಅಂತಾನೇ ಇದೆ. ಯಾರ್ಯಾರು ಏನು ಮಾಡುತ್ತಿದ್ದಾರೆ ಅಂತಾ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್​ ಹೇಳಿದ್ದಾರೆ. ರಾಜಕೀಯ ಏನೇ ಮಾಡಲಿ, ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟ ಮಾಡಬಾರದು ಎಂದರು.

ಮೀಸಲಾತಿ ನೀಡದಿದ್ದರೆ ಚುನಾವಣೆಯಲ್ಲಿ ಪರಿಣಾಮ ಬೀರುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬಾಯಿ ಬಿಟ್ಟು ಹೇಳಲು ಹೋಗಲ್ಲ. ಅದರ ಪರಿಣಾಮ ಸರ್ಕಾರಕ್ಕೆ ಗೊತ್ತಿದೆ. ಈಗಾಗಲೇ ಸಮಾಜ ನಿರಾಸೆಗೊಂಡಿದ್ದು ಅವರಿಗೆ ಗೊತ್ತಿದೆ. ಹೀಗಾಗಿ ಪರಿಣಾಮ ಬೀರದ ಹಾಗೇ ಸರ್ಕಾರ ಆಲೋಚನೆ ಮಾಡಬೇಕು ಎಂದರು.

ಇದನ್ನೂ ಓದಿ: ತುಮಕೂರು: ವಂಶಾಭಿವೃದ್ಧಿಗೆಂದು 2 ಕೋಟಿಗೆ ತಂದಿದ್ದ 2 ಕುದುರೆಗಳು ಹೆಜ್ಜೇನು ದಾಳಿಗೆ ಬಲಿ

ಮೀಸಲಾತಿಗೆ ನ್ಯಾಯ ಸಿಕ್ಕರೆ ಕೂಡಲಸಂಗಮ ಶ್ರೀಗಳಿಗೆ, ಬನಸಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶಪ್ಪನವರ್, ಲಕ್ಷ್ಮೀ ಹೆಬ್ಬಾಳ್ಕರ್, ವಿನಯ್ ಕುಲಕರ್ಣಿ, ಈರಣ್ಣಾ ಕಡಾಡಿ ಅದರ ಜವಾಬ್ದಾರಿ ಹೊತ್ತ ಸಿ.ಸಿ‌.ಪಾಟೀಲ್ ಸೇರಿ ಮುಂಚೂಣಿ ನಾಯಕರು ಎಲ್ಲಿ ಬೆಳೆಯುತ್ತಾರೋ ಸಮಾಜದ ಇತಿಹಾಸದಲ್ಲಿ ಇವರು ಅಜರಾಮರವಾಗಿ ಉಳಿಯುತ್ತಾರೋ ಅಂತಾ ಮುಖ್ಯಮಂತ್ರಿ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದರು.

ರಾಣೆಬೆನ್ನೂರು ಶಾಸಕರೊಂದಿಗೆ ಮಾತನಾಡುವೆ: ಜಯಮೃತ್ಯುಂಜಯ ಸ್ಚಾಮೀಜಿ

2ಎ ಮೀಸಲಾತಿ ಹೋರಾಟ ವಿಚಾರವಾಗಿ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ರಾಣೆಬೆನ್ನೂರು ಶಾಸಕ ಅರುಣ್ ಕುಮಾರ್ ಅಸಮಾಧಾನ ಹೊರಹಾಕಿದ ಹಿನ್ನಲೆ ಪ್ರತಿಕ್ರಿಯೆ ನೀಡಿದ ಜಯಮೃತ್ಯುಂಜಯ ಸ್ಚಾಮೀಜಿ, ಮುಖ್ಯಮಂತ್ರಿ ತವರು ಜಿಲ್ಲೆ ಅಂತಾ ಅನಿವಾರ್ಯವಾಗಿ ಮಾತನಾಡಿರಬಹುದು. ಶಾಸಕ ಅರುಣ್‌ಕುಮಾರ್ ಕರೆಯಿಸಿ ನಾನು ಮಾತನಾಡುತ್ತೇನೆ. ಮೀಸಲಾತಿ ಹೋರಾಟದಲ್ಲಿ ಯಾರೂ ಸಕ್ರಿಯವಾಗಿ ಭಾಗವಹಿಸುತ್ತಾರೆ. ಯಾರಿಗೆ ಕಷ್ಟ ಸುಖ ಗೊತ್ತಿದೆ ಅಂತವರಿಗೆ ಹೆಚ್ಚಿನ ಮಾಹಿತಿ ಗೊತ್ತಿರುತ್ತದೆ ಎಂದರು.

ಹೊಸದಾಗಿ ಶಾಸಕರಾದವರಿಗೆ ತಳ ಬುಡ ಗೊತ್ತಿರಲ್ಲ, ಹೀಗಾಗಿ ಮಾತನಾಡ್ತಾರೆ. ಸಮಾಜದ ಪರ ಗಟ್ಟಿಯಾಗಿ ನಿಲ್ಲಲು ಅವರಿಗೆ ಕಿವಿಮಾತು ಹೇಳುತ್ತೇನೆ. ಮುಖ್ಯಮಂತ್ರಿ ಮನೆ ಎದುರು ಪ್ರತಿಭಟಿಸಿದರೆ ಶ್ರೀಗಳ ವಿರುದ್ಧ ಪ್ರತಿಭಟಿಸುವುದಾಗಿ ಶಾಸಕ ಅರುಣ್ ಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಸ್ವಾಮೀಜಿ, ಮಾಡಲಿ ತಪ್ಪೇನಿಲ್ಲ, ನಾವು ಸಮಾಜಕ್ಕೆ ನ್ಯಾಯ ಸಿಗಬೇಕೆಂದು ಹೋರಾಟ ಮಾಡುತ್ತೇವೆ. ಅವರು ಸಮಾಜದ ವಿರುದ್ಧ ಹೋರಾಟ ಮಾಡುತ್ತೇವೆ ಎಂದಾದರೆ ಅದನ್ನೂ ಸ್ವಾಗತ ಮಾಡುತ್ತೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ