ತುಮಕೂರು: ವಂಶಾಭಿವೃದ್ಧಿಗೆಂದು 2 ಕೋಟಿಗೆ ತಂದಿದ್ದ 2 ಕುದುರೆಗಳು ಹೆಜ್ಜೇನು ದಾಳಿಗೆ ಬಲಿ
ಜಿಲ್ಲೆಯ ಕುಣಿಗಲ್ ಪಟ್ಟಣದ ಸ್ಟಡ್ ಫಾರಂ ನಲ್ಲಿ ವಂಶಾಭಿವೃದ್ಧಿಗೆಂದು 2 ಕೋಟಿಗೆ ತಂದಿದ್ದ 2 ಕುದುರೆಗಳು ಹೆಜ್ಜೇನು ದಾಳಿಗೆ ಬಲಿಯಾಗಿದೆ.
ತುಮಕೂರು: ಜಿಲ್ಲೆಯ ಕುಣಿಗಲ್ ಪಟ್ಟಣದ ಸ್ಟಡ್ ಫಾರಂ ನಲ್ಲಿ ವಂಶಾಭಿವೃದ್ಧಿಗೆಂದು 2 ಕೋಟಿಗೆ ತಂದಿದ್ದ 2 ಕುದುರೆಗಳು ಹೆಜ್ಜೇನು ದಾಳಿಗೆ ಬಲಿಯಾಗಿದೆ. ವಂಶಾಭಿವೃದ್ಧಿಗೆ ಬಳಸುತ್ತಿದ್ದ ಅಮೆರಿಕ ಮೂಲದ ಏರ್ ಸಪೋರ್ಟ್ 15 ಹಾಗೂ ಐರ್ಲೆಂಡ್ ಮೂಲದ ಸನಸ್ ಪರ್ ಅಕ್ಷಮ್ 10 ಎಂಬ ಹೆಸರಿನ ಕುದುರೆಗಳು ಸಾವನ್ನಪ್ಪಿದೆ.
ತಮ್ಮ ದೇಶಗಳಲ್ಲಿ ರೇಸ್ನಲ್ಲಿ ತೋರಿದ ಸಾಧನೆ ಪರಿಗಣಿಸಿ ವಂಶಾಭಿವೃದ್ಧಿಗೆ ಬಳಕೆ ಮಾಡಲು ಇದನ್ನು ತರಲಾಗಿದ್ದು, ಇದೀಗ ಹೆಜ್ಜೆನು ದಾಳಿಗೆ ಬಲಿಯಾಗಿದೆ. ವಂಶಾಭಿವೃದ್ಧಿಗೆ ಬಳಸುತ್ತಿದ್ದ ತಲಾ ಒಂದು ಕೋಟಿಗೂ ಅಧಿಕ ಬೆಲೆ ಬಾಳುತ್ತಿದ್ದ ಎರಡು ಕುದುರೆಗಳು ಮೃತಪಟ್ಟಿದ್ದು, ಫಾರಂ ನಲ್ಲಿ ಶೋಕ ಮಡುಗಟ್ಟಿದೆ. ಕುದುರೆಗಳ ಸಾವಿನಿಂದ ಸ್ಟಡ್ ಫಾರಂನಲ್ಲಿ ಆತಂಕ ವ್ಯಕ್ತವಾಗಿದೆ. ಫಾರಂ ನಲ್ಲಿ ಮೇಯುವಾಗ ಹೆಜ್ಜೆನು ದಾಳಿ ಮಾಡಿದ್ದಾವೆ. ಈ ವೇಳೆ ಎರಡು ಕುದುರೆಗಳು ತೀವ್ರ ಅಸ್ವಸ್ಥಗೊಂಡಿದ್ದವು ಎನ್ನಲಾಗಿದೆ.
ಇದನ್ನೂ ಓದಿ:Mandya News: ಮಂಡ್ಯದಲ್ಲಿ ಮುಂದುವರೆದ ಚಿರತೆ ದಾಳಿ, ಚಿರತೆ ಬಾಯಿಗೆ ತುತ್ತಾದ ಹಸು, ಮಾಲೀಕನ ಗೋಳಾಟ
ಕುದುರೆಗಳಿಗೆ ಸ್ಟಡ್ ಫಾರಂನ ವೈದ್ಯರು ಚಿಕಿತ್ಸೆ ನೀಡಿ ಪ್ರಾಣ ಉಳಿಸಲು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಅಮೆರಿಕ ಮೂಲದ ಏರ್ ಸಪೋರ್ಟ್ 15 ಹಾಗೂ ಐರ್ಲೆಂಡ್ ಮೂಲದ ಸನಸ್ ಪರ್ ಅಕ್ಷಮ್ 10 ಹೆಸರಿನ ಈ ಕುದುರೆಗಳ ಅಂತ್ಯಕ್ರಿಯೆ ಸ್ಟಡ್ ಫಾರಂ ನಲ್ಲಿ ನಡೆದಿದೆ. ಏರ್ ಸಪೋರ್ಟ್ 2008 ರಲ್ಲಿ ಜನಿಸಿದ್ದು, ಸನಸ್ ಪರ್ ಅಕ್ಷಮ್ 2013 ರಲ್ಲಿ ಜನಿಸಿತ್ತು ಎನ್ನಲಾಗಿದೆ. ಈ ಎರಡು ಕುದುರೆಗಳು ತಮ್ಮ ತಮ್ಮ ದೇಶಗಳಲ್ಲಿ ಐದು ವರ್ಷಗಳ ಕಾಲ ರೇಸ್ನಲ್ಲಿ ತೋರಿದ ಸಾಧನೆ ಪರಿಗಣಿಸಿ ಕುಣಿಗಲ್ ಸ್ಟಡ್ ಫಾರಂ ಗೆ ವಂಶಾಭಿವೃದ್ಧಿಗಾಗಿ ಬಳಕೆ ಮಾಡಲು ತರಲಾಗಿತ್ತು. ಸದ್ಯ ಕುದುರೆಗಳ ಸಾವಿನಿಂದ ಸ್ಟಡ್ ಫಾರಂ ನ ನೌಕರರಲ್ಲಿ ಶೋಕ ಮನೆ ಮಾಡಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:17 am, Sat, 7 January 23