Belagavi: ಬೆಳಗಾವಿ ಪೊಲೀಸ್ ಕಮಿಷನರ್​ ಆಗಿ ಬೋರಲಿಂಗಯ್ಯ ಅಧಿಕಾರ ಸ್ವೀಕಾರ

| Updated By: ganapathi bhat

Updated on: Jan 01, 2022 | 5:50 PM

ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಎಂಇಎಸ್ ಪುಂಡಾಟ ನಡೆದಿತ್ತು. ಕಲ್ಲು ತೂರಾಟ, ರಾಯಣ್ಣ ಮೂರ್ತಿ ಭಗ್ನ ಪ್ರಕರಣ ಸಂಬಂಧಿಸಿದಂತೆ 38 ಜನರು ಬಂಧನ ಆಗಿತ್ತು. ಎಲ್ಲಾ ಗಲಾಟೆಗಳಿಗೆ ಪೊಲೀಸ್ ವೈಫಲ್ಯ ಎಂಬ ಆರೋಪ ಕೇಳಿ ಬಂದಿತ್ತು.

Belagavi: ಬೆಳಗಾವಿ ಪೊಲೀಸ್ ಕಮಿಷನರ್​ ಆಗಿ ಬೋರಲಿಂಗಯ್ಯ ಅಧಿಕಾರ ಸ್ವೀಕಾರ
ಬೆಳಗಾವಿ ಪೊಲೀಸ್ ಕಮಿಷನರ್​ ಆಗಿ ಬೋರಲಿಂಗಯ್ಯ ಅಧಿಕಾರ ಸ್ವೀಕಾರ
Follow us on

ಬೆಳಗಾವಿ: ಬೆಳಗಾವಿ ಕಮಿಷನರ್​ ಆಗಿ ಬೋರಲಿಂಗಯ್ಯ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬೆಳಗಾವಿಯ ಕಮಿಷನರ್ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ನಿರ್ಗಮಿತ ಆಯುಕ್ತ ಕೆ. ತ್ಯಾಗರಾಜನ್​ರಿಂದ ಅಧಿಕಾರ ಹಸ್ತಾಂತರ ಮಾಡಲಾಗಿದೆ. ಬೆಳಗಾವಿಯಲ್ಲಿ ಕಲ್ಲು ತೂರಾಟ, ರಾಯಣ್ಣ ಮೂರ್ತಿ ಭಗ್ನ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ನಗರ ಪೊಲೀಸ್ ಕಮಿಷನರ್​ ತಲೆದಂಡವಾಗಿತ್ತು. ಕೆ. ತ್ಯಾಗರಾಜನ್ ಎತ್ತಂಗಡಿ ಮಾಡಿ ಬೋರಲಿಂಗಯ್ಯ ನೇಮಕ ಮಾಡಿದ್ದಾರೆ.

ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಎಂಇಎಸ್ ಪುಂಡಾಟ ನಡೆದಿತ್ತು. ಕಲ್ಲು ತೂರಾಟ, ರಾಯಣ್ಣ ಮೂರ್ತಿ ಭಗ್ನ ಪ್ರಕರಣ ಸಂಬಂಧಿಸಿದಂತೆ 38 ಜನರು ಬಂಧನ ಆಗಿತ್ತು. ಎಲ್ಲಾ ಗಲಾಟೆಗಳಿಗೆ ಪೊಲೀಸ್ ವೈಫಲ್ಯ ಎಂಬ ಆರೋಪ ಕೇಳಿ ಬಂದಿತ್ತು.

ಸರ್ಕಾರದ ಆದೇಶದಂತೆ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಈ ಹಿಂದೆ ಇದ್ದ ಅಧಿಕಾರಿಗಳು ಮಾಡಿದ ಉತ್ತಮ ಕೆಲಸಗಳನ್ನ ಮುಂದುವರೆಸುತ್ತೇನೆ. ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಕ್ರೈಂ ಪ್ರಕರಣಗಳನ್ನ ಪರಿಶೀಲನೆ ಮಾಡಿ ಹೆಚ್ಚಿನ ರೀತಿಯಲ್ಲಿ ಕಂಟ್ರೋಲ್ ಮಾಡುತ್ತೇವೆ ಎಂದು ಬೆಳಗಾವಿಯ ನೂತನ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಟಿವಿ9ಗೆ ಹೇಳಿಕೆ ನೀಡಿದ್ದಾರೆ.

ನೂತನ ಕಮೀಷನರ್, ಅಧಿಕಾರಿಗಳು ಮತ್ತು ನಾಗರಿಕ ಸಹಕಾರ ಕೋರಿದ್ದಾರೆ. ಕನ್ನಡ ಮರಾಠಿಗರು ಅನ್ನೋದಕ್ಕಿಂತ ಎಲ್ಲರೂ ಭಾರತೀಯರು. ಎಲ್ಲಾ ರೀತಿಯ ಜನರಿದ್ದು ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುತ್ತೇವೆ. ಕಾನೂನು ಕೈಗೆತ್ತಿಕೊಂಡ್ರೇ ಕಾನೂನಿನಲ್ಲಿ ಇರುವ ಕ್ರಮಗಳನ್ನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅಧಿವೇಶನದ ವೇಳೆ ಎಂಇಎಸ್ ಪುಂಡಾಟಿಕೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಆ ಕೇಸ್‌ಗೆ ಸಂಬಂಧಿಸಿದಂತೆ ಡಿಟೈಲ್ ತೆಗೆದುಕೊಂಡು ನೋಡಿಕೊಳ್ಳುತ್ತೇನೆ. ಕೇಸ್ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಮುಂದುವರೆಯುತ್ತೇವೆ ಎಂದು ಡಾ. ಬೋರಲಿಂಗಯ್ಯ ಹೇಳಿದ್ದಾರೆ.

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿಯಾಗಿ ಕ್ಯಾ.ಪಿ‌. ಮಣಿವಣ್ಣನ್ ವರ್ಗಾವಣೆ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿಯಾಗಿ ಕ್ಯಾ.ಪಿ‌. ಮಣಿವಣ್ಣನ್ ವರ್ಗಾವಣೆ ಮಾಡಲಾಗಿದೆ. ಪಶು ಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಕಾರ್ಯದರ್ಶಿಯಾಗಿ ಸಲ್ಮಾ ಕೆ. ಫಾಹಿಂ ವರ್ಗಾವಣೆ ಮಾಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಎಸಿಎಸ್ ಆಗಿ ಬಿ.ಹೆಚ್. ಅನಿಲ್ ಕುಮಾರ್​​​ಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

ಇದನ್ನೂ ಓದಿ: ಬೆಳಗಾವಿ ಅಧಿವೇಶನದ ವೇಳೆ ಎಂಇಎಸ್​ ಪುಂಡಾಟಿಕೆ: ಪೊಲೀಸ್ ಆಯುಕ್ತ ಎತ್ತಂಗಡಿ, ದುಷ್ಕರ್ಮಿಗಳಿಗೆ ಸಿಗಲಿಲ್ಲ ಜಾಮೀನು

ಇದನ್ನೂ ಓದಿ: ಬೆಳಗಾವಿ ನ್ಯಾಯಾಲಯಕ್ಕೆ ಅಣ್ಣಾಮಲೈ: ಭೂಗತ ಪಾತಕಿ ಬನ್ನಂಜೆ ರಾಜ ವಿರುದ್ಧ ಸಾಕ್ಷ್ಯ

Published On - 5:43 pm, Sat, 1 January 22