Belagavi News: ಉಚಿತ ವಿದ್ಯುತ್ ಸಿಗುವ ನಿರೀಕ್ಷೆಯಲ್ಲಿದ್ದವರಿಗೆ ಬಂತು ದುಪ್ಪಟ್ಟು ಬಿಲ್; ಬೆಳಗಾವಿ ಜನರಿಗೆ ಶಾಕ್
ವಿದ್ಯುತ್ ಬಿಲ್ ಕಂಡು ಕಕ್ಕಾಬಿಕ್ಕಿಯಾದ ಗ್ರಾಹಕರು, ನಿಮ್ಮ ಸರ್ಕಾರಕ್ಕೆ ಬೆಂಕಿ ಹಚ್ಚಲಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ: ಉಚಿತ ವಿದ್ಯುತ್ ಸಿಗಲಿದೆ ಎಂಬ ನಿರೀಕ್ಷೆಲ್ಲಿದ್ದ ನಮಗೆ ಸರ್ಕಾರ ದುಪ್ಪಟ್ಟು ವಿದ್ಯುತ್ ಬಿಲ್ (Electricity Bill) ನೀಡುವ ಮೂಲಕ ಶಾಕ್ ಕೊಟ್ಟಿದೆ ಎಂದು ಬೆಳಗಾವಿ (Belagavi) ನಿವಾಸಿಗಳು ದೂರಿದ್ದಾರೆ. ಯುನಿಟ್ ಲೆಕ್ಕದಲ್ಲಿ ಹೆಳಚ್ಚಳ ಮಾಡಿ ದರ ಹೆಚ್ಚಿಸಲಾಗಿದೆ. ಮೇ ತಿಂಗಳಲ್ಲಿ ಪಾವತಿಸಿದ ಬಿಲ್‌ಗಿಂತ ಈ ಬಾರಿ ದುಪ್ಪಟ್ಟು ಬಿಲ್ ಬಂದಿದೆ. ಈ ಹಿಂದೆ ಗರಿಷ್ಠ 400 ರೂ. ವರೆಗೆ ವಿದ್ಯುತ್ ಬಿಲ್ ಪಾವತಿಸುತ್ತಿದ್ದವರ ಮನೆಗೆ ಈ ಬಾರಿ 1000 ರೂ. ವರೆಗೆ ಬಿಲ್ ಬಂದಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ವಿದ್ಯುತ್ ಬಿಲ್ ಕಂಡು ಕಕ್ಕಾಬಿಕ್ಕಿಯಾದ ಗ್ರಾಹಕರು, ನಿಮ್ಮ ಸರ್ಕಾರಕ್ಕೆ ಬೆಂಕಿ ಹಚ್ಚಲಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಿಮ್ಮ ಗ್ಯಾರಂಟಿ ಎನೂ ಬೇಡಾ. ಬೆಲೆ ಏರಿಕೆಯನ್ನು ಕಡಿಮೆ ಮಾಡಿದ್ರೇ ಸಾಕು. ಐದು ಕೆಜಿ ಅಕ್ಕಿ ಕೊಟ್ಟು ಮೊದಲಿದ್ದ ದರ ಮಾಡಿದ್ರೇ ಸಾಕು. ಇನ್ನೂರು ಯುನಿಟ್ ಫ್ರೀ ಅಂತಾ ಹೇಳಿ ಈಗ ಯುನಿಟ್ ಲೆಕ್ಕದಲ್ಲಿ ಹೆಚ್ಚಿಗೆ ಮಾಡಿ ಬಿಲ್ ಕಟ್ಟಿಸಿಕೊಳ್ತಿದ್ದೀರಿ. ಬಿಲ್ ಕಟ್ಟದಿದ್ರೇ ಕರೆಂಟ್ ಕಟ್ ಮಾಡ್ತೇವಿ ಅಂತೀರಿ. ವೋಟ್ ಹಾಕಿ ಗೆಲ್ಲಿಸಿಕೊಂಡು ಬಂದಿದ್ದಕ್ಕೆ ಈ ರೀತಿ ಮಾಡೋದು ಸರಿಯಲ್ಲ. ಎನೇ ಆದ್ರೂ ನಾವು ಬಿಲ್ ಕಟ್ಟುವುದಿಲ್ಲ ಅಂತಾ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆಯಲ್ಲಿ ಗಂಡ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ಇದೆ ಎಂದು ಕನಕಲಕ್ಷ್ಮಿ ಎಂಬವರು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಉಚಿತ ಗ್ಯಾರಂಟಿ ಚುನಾವಣಾ ಗಿಮಿಕ್ ಅಷ್ಟೇ ಎಂದ ಸಚಿವ ಚೆಲುವರಾಯಸ್ವಾಮಿ; ಇನ್ನೂ ಏನೇನಂದ್ರು? ವಿಡಿಯೋ ನೋಡಿ
ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ನಮಗೆ ಕರೆಂಟ್ ಶಾಕ್ ನೀಡಿದೆ ಅಂತ ಬಿಕ್ಕಿ ಬಿಕ್ಕ ಅತ್ತ ಮಹಿಳೆ, ಚುನಾವಣೆ ವೇಳೆ ಎಲ್ಲರಿಗೂ ಫ್ರೀ ಅಂದಿದ್ದರು. ಈಗ ಸಾವಿರ ಸಾವಿರ ಬಿಲ್ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡವರನ್ನು ಹೀಗೆ ಸಾಯಿಸುವ ಬದಲು ಗುಂಡು ಹೊಡೆದು ಸಾಯಿಸಲಿ ಎಂದು ತಕ್ಕಣ್ಣ ಬಂಡಾ ಎಂಬವರು ಕಿಡಿಕಾರಿದ್ದಾರೆ. ಉಚಿತ ವಿದ್ಯುತ್ ಘೋಷಣೆ ಬಳಿಕವೇ ಬಡ ಕುಟುಂಬಗಳಿಂದ ಸಾವಿರ ಸಾವಿರ ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಬಿಲ್ ಇಷ್ಟೊಂದು ಯಾಕೆ ಅಂತ ಪ್ರಶ್ನೆ ಮಾಡಿದ್ರೆ ನಮಗೆ ಗೋತ್ತಿಲ್ಲ ಸರ್ಕಾರಕ್ಕೆ ಕೇಳಿ ಅಂತಿದ್ದಾರೆ ಹೆಸ್ಕಾಂ ಸಿಬ್ಬಂದಿ ಎಂದು ಅವರು ದೂರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ