AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ಮರಣಹೊಳ ಗ್ರಾಮಸ್ಥರು ಊರಿಗೆ ಊರೇ ಖಾಲಿ ಮಾಡುವ ಆತಂಕ, ಗ್ರಾಮಸ್ಥರ ಕಣ್ಣೀರು: ಕೆಲ ಅಧಿಕಾರಿಗಳು ಮಾಡಿದ ಎಡವಟ್ಟು

ಒಟ್ಟಾರೆ ಹುಟ್ಟಿ ಬೆಳೆದ ಊರನ್ನು ತೊರೆಯುವ ಸ್ಥಿತಿ ಬಂದಿದೆ ಅಂತಾ ಬೆಳಗಾವಿ ತಾಲೂಕಿನ ಮರಣಹೊಳ ಗ್ರಾಮಸ್ಥರು ಕಣ್ಣೀರಿಡ್ತಾ ನಿತ್ಯ ಜೀವನ ಸಾಗಿಸುತ್ತಿದ್ದಾರೆ. ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಗ್ರಾಮಸ್ಥರು ಕಂಗಾಲಾಗಿದ್ದು ಸರ್ಕಾರಕ್ಕೂ ಮನವಿ ಮಾಡಿದ್ದಾರೆ. ಮತ್ತೊಮ್ಮೆ ಸರ್ವೆ ಮಾಡಿ ವರದಿ ನೀಡಿ ಕೋರ್ಟ್ ಗೆ ಮನವರಿಕೆ ಮಾಡಿಕೊಡಿ ಅಂತಾ ಗೋಗರೆಯುತ್ತಿದ್ದಾರೆ.

ಬೆಳಗಾವಿ: ಮರಣಹೊಳ ಗ್ರಾಮಸ್ಥರು ಊರಿಗೆ ಊರೇ ಖಾಲಿ ಮಾಡುವ ಆತಂಕ, ಗ್ರಾಮಸ್ಥರ ಕಣ್ಣೀರು: ಕೆಲ ಅಧಿಕಾರಿಗಳು ಮಾಡಿದ ಎಡವಟ್ಟು
ಮರಣಹೊಳ ಗ್ರಾಮಸ್ಥರು ಊರಿಗೆ ಊರೇ ಖಾಲಿ ಮಾಡುವ ಆತಂಕ
Sahadev Mane
| Updated By: ಸಾಧು ಶ್ರೀನಾಥ್​|

Updated on: Aug 09, 2023 | 10:25 AM

Share

ಆ ಗ್ರಾಮದಲ್ಲಿ ಹುಟ್ಟಿ ಬೆಳೆದು, ಇರೋ ಅಲ್ಪಸ್ವಲ್ಪ ಜಮೀನಿನಲ್ಲಿ ಜೀವನ ಕಟ್ಟಿಕೊಂಡು ಬರ್ತಿದ್ದಾರೆ ಅವರೆಲ್ಲಾ. ಆದ್ರೇ ಇದೀಗ ಊರಿನ ಜನರೆಲ್ಲರೂ ಇದ್ದ ಮನೆ ಜಮೀನು ಬಿಟ್ಟು ಊರನ್ನೇ ತೊರೆಯುವ (evacuation) ಭೀತಿ ಶುರುವಾಗಿದೆ. ಕೆಲ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಗ್ರಾಮದ ಜನರು ಕಣ್ಣೀರಿಡುವ (crying) ಸ್ಥಿತಿ ನಿರ್ಮಾಣವಾಗಿದ್ದು ಜೀವ ಬಿಡ್ತೇವಿ ಊರು ಬಿಡ್ತಿಲ್ಲಾ ಅಂತಿದ್ದಾರೆ. ಊರಿಗೆ ಊರೇ ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆಯಾ ಅನ್ನೋ ಅನುಮಾನ ಮೂಡುತ್ತಿದೆ. ಅಷ್ಟಕ್ಕೂ ಸಚಿವರು ತವರು ಕ್ಷೇತ್ರದ ಆ ಗ್ರಾಮದಲ್ಲಿ ಆಗಿರೋದಾದ್ರೂ ಎನೂ ಅಂತೀರಾ ಈ ಸ್ಟೋರಿ ನೋಡಿ… ಜೀವ ಬಿಟ್ಟೇವೂ ಊರು ಬಿಡಲ್ಲಾ, ಜಮೀನು ಬಿಡಲ್ಲಾ ಅಂತೀರುವ ಇವರು ಬೆಳಗಾವಿ (Belagavi) ತಾಲೂಕಿನ ಮರಣಹೊಳ (Maranhola) ಗ್ರಾಮಸ್ಥರು.

ಊರಿನ ಹೆಸರಿನಲ್ಲೇ ಇರುವಂತೆ ಈ ಗ್ರಾಮದ ಜನರಿಗೆ ಇದೀಗ ಮರಣ ಒಂದೇ ಬಾಕಿ ಉಳಿದಂತಿದೆ. ಹಿರಿಯರ ಕಾಲದಿಂದಲೂ ಅಲ್ಪಸ್ವಲ್ಪ ಭೂಮಿಯಲ್ಲಿ ಜನ ಉಳುಮೆ ಮಾಡಿಕೊಂಡು ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಆದ್ರೇ ಈ ನಡುವೆ ದೇಸಾಯಿಯವರು ಮತ್ತು ಇನಾಮದಾರರು ಕೋರ್ಟ್ ಮೆಟ್ಟಿಲೇರಿದ್ದಾರಂತೆ. ಗ್ರಾಮದಲ್ಲಿರುವ 1400 ಎಕರೆ ಜಮೀನು ತಮ್ಮ ಹಿರಿಯರದ್ದಾಗಿದ್ದು ಉಳುಮೆ ಮಾಡಲು ಕೊಟ್ಟಿದ್ದ ಜಮೀನನ್ನೇ ಗ್ರಾಮಸ್ಥರು ಕಬ್ಜಾ ಮಾಡಿಕೊಂಡಿದ್ದಾರೆ ಅಂತಾ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದರಂತೆ.

ಇದನ್ನ ಆಲಿಸಿದ್ದ ನ್ಯಾಯಾಲಯ ಬೆಳಗಾವಿ ತಹಶಿಲ್ದಾರ ಅವರಿಗೆ ವರದಿ ನೀಡುವಂತೆ ಸೂಚನೆ ನೀಡಿತ್ತು. ಆದ್ರೇ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಬರೀ ಜಮೀನು ಅಷ್ಟೇ ಅಲ್ಲದೇ ಮನೆ ಸಮೇತ ಊರನ್ನೇ ತೊರೆಯುವ ಭೀತಿ ಈ ಗ್ರಾಮದ ಜನರಿಗೆ ಶುರುವಾಗಿದೆ. ಸರ್ವೆ ನಂಬರ್ 24 ಮತ್ತು 25ರಲ್ಲಿ ಮನೆ ಇಲ್ಲಾ, ಜಮೀನಿನಲ್ಲಿ ಉಳುಮೆ ಮಾಡ್ತಿಲ್ಲ ಅಂತಾ ವರದಿ ನೀಡಿದ್ದಾರೆ ಅಂತಾ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಇನ್ನು ಗ್ರಾಮದಲ್ಲಿ ಸರ್ಕಾರಿ ಶಾಲೆ ಸೇರಿದಂತೆ ಮೂಲಭೂತ ಸೌಕರ್ಯ ಇದೆ, ಪಂಚಾಯಿತಿಗೆ ಮನೆ ಪಟ್ಟಿ ಕಟ್ಟಿತ್ತಿದ್ದು ಇದರಿಂದ ಎಲ್ಲವೂ ಗ್ರಾಮದಲ್ಲಿದ್ರೂ ಸುಳ್ಳು ವರದಿ ಕೊಟ್ಟಿದ್ದಾರಂತೆ ಆರೋಪ ಮಾಡುತ್ತಿದ್ದಾರೆ. ಅಷ್ಟೆ ಅಲ್ಲದೇ ಜೀವನ ಬಿಡ್ತೇವಿ ಭೂಮಿ, ಊರು ಬಿಡಲ್ಲಾ ಅಂತಿದ್ದಾರೆ ಗ್ರಾಮಸ್ಥರು…

ಅಜ್ಜ ಮುತ್ತಜ್ಜನ ಕಾಲದಿಂದಲೂ ಇಲ್ಲೇ ವಾಸ ಮಾಡಿಕೊಂಡು ಬರ್ತಿರುವ ಇವರಿಗೆ ಉಳುವವನೇ ಒಡೆಯ ಕಾಯ್ದೆಯಡಿಯಲ್ಲಿ ಜಮೀನು ದೊರಕಿದೆ. ಅಂದಿನಿಂದ ತಮ್ಮದೇ ಜಮೀನೆಂದು ಜನ ನೆಮ್ಮದಿಯಿಂದ ಜೀವನ ನಡೆಸಿಕೊಂಡು ಬರ್ತಿದ್ದಾರೆ. ಆದ್ರೇ ಇದೀಗ ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿಕೊಂಡು ಊರಿನ ಜನರನ್ನ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದು ಇದರಿಂದ ಸುಳ್ಳು ದಾಖಲೆ ನೀಡಿ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಅಂತಾ ಗ್ರಾಮಸ್ಥರೆಲ್ಲರೂ ಇಂದು ಡಿಸಿ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಗೆ ಮನವಿ ಸಲ್ಲಿಸಿ ತಮ್ಮ ಊರು, ಜಮೀನು ಉಳಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಸ್ಥಳೀಯ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಕೆಲವರು ಬೇರೆಯವರ ಮೂಲಕ ಜಮೀನು ಖರೀದಿ ಮಾಡಿದ್ದಾರೆ. ಮೊದಲು ತಪ್ಪು ವರದಿಯನ್ನ ಅಧಿಕಾರಿಗಳು ನೀಡಿದ್ದರು. ಅದೆಲ್ಲವನ್ನೂ ಸರಿ ಮಾಡಿದ್ದೇವೆ. ಊರನ್ನ ಖಾಲಿ ಮಾಡಿಸಲು ಯಾರಿಂದಲೂ ಆಗಲ್ಲಾ ಅಂತಾ ಸಚಿವ ಸತೀಶ್ ಜಾರಕಿಹೊಳಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.

ಒಟ್ಟಾರೆ ಹುಟ್ಟಿ ಬೆಳೆದ ಊರನ್ನು ತೊರೆಯುವ ಸ್ಥಿತಿ ಬಂದಿದೆ ಅಂತಾ ಜನ ಕಣ್ಣೀರಿಡ್ತಾ ನಿತ್ಯ ಜೀವನ ಸಾಗಿಸುತ್ತಿದ್ದಾರೆ. ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಇದೀಗ ಗ್ರಾಮಸ್ಥರು ಕಂಗಾಲಾಗಿದ್ದು ಸರ್ಕಾರಕ್ಕೂ ಕೂಡ ಮನವಿ ಮಾಡಿಕೊಂಡಿದ್ದಾರೆ. ಮತ್ತೊಮ್ಮೆ ಸರ್ವೆ ಮಾಡಿ ವರದಿ ನೀಡಿ ಕೋರ್ಟ್ ಗೆ ಮನವರಿಕೆ ಮಾಡಿಕೊಡಿ ಅಂತಾ ಗೋಗರೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಚಿವರು ಮತ್ತು ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಈ ಗ್ರಾಮಸ್ಥರ ಬೆನ್ನಿಗೆ ನಿಂತೂ ಜನರ ರಕ್ಷಣೆ ಮಾಡಬೇಕಿದೆ…

 ಬೆಳಗಾವಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ