ಬೆಂಗಳೂರಿನಲ್ಲಿ ಜಾಂಟಿ ರೋಡ್ಸ್ ಜಾಲಿ ರೈಡ್! ಟ್ಯಾಕ್ಸಿ ಚಾಲಕನ ಸಲಹೆಗೆ ಕೃತಜ್ಞ ಎಂದಿದ್ದೇಕೆ ಖ್ಯಾತ ಮಾಜಿ ಕ್ರಿಕೆಟಿಗ?

ಬೆಂಗಳೂರು ಟ್ರಾಫಿಕ್ ಜಾಮ್​ ಬಿಸಿಯಿಂದ ಪಾರಾಗಲು ಸಮೀಪದ ಹೋಟೆಲ್​ಗೆ ತೆರಳುವಂತೆ ಟ್ಯಾಕ್ಸಿ ಚಾಲಕ ಜಾಂಟಿ ಅವರಿಗೆ ಸಲಹೆ ನೀಡಿದ್ದರು. ಅದರಂತೆ, ವಿಮಾನ ನಿಲ್ದಾಣ ಮಾರ್ಗದಲ್ಲಿರುವ ಹೋಟೆಲ್​ಗೆ ತೆರಳಿ ಮೈಸೂರು ಮಸಾಲದೋಸೆ, ಮಂಗಳೂರು ಬನ್ಸ್ ತಿಂದು, ಮಸಾಲ ಚಹಾ ಸವಿದಿದ್ದಾರೆ.

ಬೆಂಗಳೂರಿನಲ್ಲಿ ಜಾಂಟಿ ರೋಡ್ಸ್ ಜಾಲಿ ರೈಡ್! ಟ್ಯಾಕ್ಸಿ ಚಾಲಕನ ಸಲಹೆಗೆ ಕೃತಜ್ಞ ಎಂದಿದ್ದೇಕೆ ಖ್ಯಾತ ಮಾಜಿ ಕ್ರಿಕೆಟಿಗ?
ಮೈಸೂರು ಮಸಾಲೆ ದೋಸೆ, ಮಂಗಳೂರು ಬನ್ಸ್ ಸವಿದ ಜಾಂಟಿ ರೋಡ್ಸ್
Edited By:

Updated on: Nov 21, 2023 | 8:14 PM

ಬೆಂಗಳೂರು, ನವೆಂಬರ್ 21: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, ಫೀಲ್ಡಿಂಗ್ ದಂತಕಥೆ ಜಾಂಟಿ ರೋಡ್ಸ್​​ (Jonty Rhodes) ಅವರ ಭಾರತ ಪ್ರೀತಿ ಬಗ್ಗೆ ಹೇಳಬೇಕಿಲ್ಲ. ಚುರುಕಿನ ಫೀಲ್ಡಿಂಗ್ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಜಾಂಟಿ ರೋಡ್ಸ್ ಇದೀಗ ಬೆಂಗಳೂರಿನ ಹೋಟೆಲೊಂದರ (Bengaluru Veg Restaurant) ಮೈಸೂರು ಮಸಾಲೆ ದೋಸೆ, ಮಂಗಳೂರು ಬನ್ಸ್ ರುಚಿಗೆ ಮಾರುಹೋಗಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಅಲ್ಲದೆ, ಇಂಥ ರುಚಿಕರ ಆಹಾರ ದೊರೆಯಲು ಕಾರಣರಾದ ಟ್ಯಾಕ್ಸಿ ಚಾಲಕನಿಗೆ ಧನ್ಯವಾದ ತಿಳಿಸಿದ್ದಾರೆ.

ಬೆಂಗಳೂರು ಟ್ರಾಫಿಕ್ ಜಾಮ್​ ಬಿಸಿಯಿಂದ ಪಾರಾಗಲು ಸಮೀಪದ ಹೋಟೆಲ್​ಗೆ ತೆರಳುವಂತೆ ಟ್ಯಾಕ್ಸಿ ಚಾಲಕ ಜಾಂಟಿ ಅವರಿಗೆ ಸಲಹೆ ನೀಡಿದ್ದರು. ಅದರಂತೆ, ವಿಮಾನ ನಿಲ್ದಾಣ ಮಾರ್ಗದಲ್ಲಿರುವ ಹೋಟೆಲ್​ಗೆ ತೆರಳಿ ಮೈಸೂರು ಮಸಾಲದೋಸೆ, ಮಂಗಳೂರು ಬನ್ಸ್ ತಿಂದು, ಮಸಾಲ ಚಹಾ ಸವಿದಿದ್ದಾರೆ. ಬಳಿಕ ಹೋಟೆಲ್ ಸಿಬ್ಬಂದಿ ಜತೆ ಫೊಟೋ ತೆಗೆಸಿಕೊಂಡು ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪ್ರಕಟಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವಾಗ ಟ್ರಾಫಿಕ್​ ಜಾಮ್ ಬಿಸಿ ಅರಿತ ಟ್ಯಾಕ್ಸಿ ಚಾಲಕನು ತನ್ನ ನೆಚ್ಚಿನ ರೆಸ್ಟೋರೆಂಟ್‌ ಬಗ್ಗೆ ಮಾಹಿತಿ ನೀಡಿ, ಕಾಯುವ ಹೊತ್ತಿನಲ್ಲಿ ಅಲ್ಲಿಗೆ ತೆರಳುವಂತೆ ಸಲಹೆ ನೀಡಿದರು. ಕೃತಜ್ಞರಾಗಿ ನಾನು ಅವರ ಸಲಹೆಯನ್ನು ತೆಗೆದುಕೊಂಡೆ. ಅಲ್ಲಿನ ಮೈಸೂರು ಮಸಾಲೆ ದೋಸೆ, ಮಂಗಳೂರು ಬನ್ಸ್ ಹಾಗೂ ಮಸಾಲ ಚಹಾ ಅದ್ಭುತವಾಗಿತ್ತು. #loveIndia ಎಂಬ ಹ್ಯಾಷ್​ಟ್ಯಾಗ್​​ನೊಂದಿಗೆ ಜಾಂಟಿ ರೋಡ್ಸ್ ಟ್ವೀಟ್ ಮಾಡಿದ್ದಾರೆ.


ಬೆಂಗಳೂರಿನ ಭಗಿನಿ ವೆಜ್ ರೆಸ್ಟೋರೆಂಟ್​ನ ಸಿಬ್ಬಂದಿ ಜತೆ ನಿಂತಿರುವ ಫೋಟೊವನ್ನೂ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್​​ ನಿವಾರಣೆಗೆ ಕೃತಕ ಬುದ್ಧಿಮತ್ತೆ ಮೊರೆ ಹೋಗಲಿದ್ದಾರೆ ಪೊಲೀಸರು: ಏನಿದರ ಪ್ರಯೋಜನ? ಇಲ್ಲಿದೆ ವಿವರ

ಭಾರತದ ಜೊತೆ ಜಾಂಟಿ ರೋಡ್ಸ್ ವಿಶೇಷವಾದ ಸಂಬಂಧವನ್ನು ಹೊಂದಿದ್ದಾರೆ. ಅವರು ತಮ್ಮ ಮಗಳಿಗೆ ‘ಇಂಡಿಯಾ’ ಎಂದು ನಾಮಕರಣ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ