ಬೆಂಗಳೂರು ಟ್ರಾಫಿಕ್​​ ನಿವಾರಣೆಗೆ ಕೃತಕ ಬುದ್ಧಿಮತ್ತೆ ಮೊರೆ ಹೋಗಲಿದ್ದಾರೆ ಪೊಲೀಸರು: ಏನಿದರ ಪ್ರಯೋಜನ? ಇಲ್ಲಿದೆ ವಿವರ

Bengaluru Traffic: ಪೊಲೀಸರ ಪ್ರಕಾರ, ಯೋಜನೆಗೆ ಆಯ್ಕೆಯಾದ ಸಂಸ್ಥೆಯು ಎಐ ಆಧಾರಿತ ಸರ್ಚ್ ಎಂಜಿನ್ ಅನ್ನು ಅಭಿವೃದ್ಧಿಪಡಿಸಲಿದೆ. ಅದು ಟ್ರಾಫಿಕ್ ಅನ್ನು ನಿರ್ವಹಿಸುವಲ್ಲಿ ಪೊಲೀಸರಿಗೆ ಸಹಾಯ ಮಾಡಲಿದೆ. ಸರ್ಚ್ ಇಂಜಿನ್‌ನ ಡೇಟಾವು ಟ್ರಾಫಿಕ್ ಮಾದರಿಗಳು, ಅಪಘಾತಗಳು ಮತ್ತು ಸಂಚಾರ ಉಲ್ಲಂಘನೆಗಳನ್ನು ಅರ್ಥಮಾಡಿಕೊಳ್ಳಲು ಪೊಲೀಸರಿಗೆ ಸಹಾಯ ಮಾಡಲಿದೆ.

ಬೆಂಗಳೂರು ಟ್ರಾಫಿಕ್​​ ನಿವಾರಣೆಗೆ ಕೃತಕ ಬುದ್ಧಿಮತ್ತೆ ಮೊರೆ ಹೋಗಲಿದ್ದಾರೆ ಪೊಲೀಸರು: ಏನಿದರ ಪ್ರಯೋಜನ? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
|

Updated on: Nov 21, 2023 | 5:22 PM

ಬೆಂಗಳೂರು, ನವೆಂಬರ್ 21: ಬೆಂಗಳೂರು ನಗರ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿರ್ವಹಣಾ ಯೋಜನೆಯ ಭಾಗವಾಗಿ ದಟ್ಟಣೆಯ ಪರಿಣಾಮಕಾರಿ ನಿರ್ವಹಣೆಗಾಗಿ ನಗರ ಪೊಲೀಸರು ಕೃತಕ ಬುದ್ಧಿಮತ್ತೆ (AI), ಮ್ಯಾಪ್​​ ಎಪಿಐಗಳು (Map APIs), ಎಮೋಜಿ ಸ್ಪೀಡ್ ಅಲರ್ಟ್ ಡಿಸ್​​​ಪ್ಲೇಗಳು (Emoji Speed Alert Displays) ಮತ್ತು ಇತರ ಸುಧಾರಿತ ತಂತ್ರಜ್ಞಾನಗಳನ್ನು ಬಳಸಲು ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಹೊರ ವರ್ತುಲ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ಮೈಸೂರು ರಸ್ತೆ ಮತ್ತು ಹೊಸೂರು ರಸ್ತೆಯಂತಹ 20 ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಅನ್ನು ಮೇಲ್ವಿಚಾರಣೆ ಮಾಡಲು ಕೃತಕ ಬುದ್ಧಿಮತ್ತೆ ಆಧಾರಿತ ಸರ್ಚ್ ಇಂಜಿನ್ ಅನ್ನು ಬಳಸಲಾಗುವುದು ಎಂದು ಹೇಳಲಾಗಿದೆ.

ಪೊಲೀಸರಿಗೆ, ಜನರಿಗೆ ಹೇಗೆ ನೆರವಾಗಲಿದೆ ಕೃತಕ ಬುದ್ಧಿಮತ್ತೆ?

ಪೊಲೀಸರ ಪ್ರಕಾರ, ಯೋಜನೆಗೆ ಆಯ್ಕೆಯಾದ ಸಂಸ್ಥೆಯು ಎಐ ಆಧಾರಿತ ಸರ್ಚ್ ಎಂಜಿನ್ ಅನ್ನು ಅಭಿವೃದ್ಧಿಪಡಿಸಲಿದೆ. ಅದು ಟ್ರಾಫಿಕ್ ಅನ್ನು ನಿರ್ವಹಿಸುವಲ್ಲಿ ಪೊಲೀಸರಿಗೆ ಸಹಾಯ ಮಾಡಲಿದೆ. ಸರ್ಚ್ ಇಂಜಿನ್‌ನ ಡೇಟಾವು ಟ್ರಾಫಿಕ್ ಮಾದರಿಗಳು, ಅಪಘಾತಗಳು ಮತ್ತು ಸಂಚಾರ ಉಲ್ಲಂಘನೆಗಳನ್ನು ಅರ್ಥಮಾಡಿಕೊಳ್ಳಲು ಪೊಲೀಸರಿಗೆ ಸಹಾಯ ಮಾಡಲಿದೆ. ಡೇಟಾವು ಪೊಲೀಸರಿಗೆ ಕ್ರಿಯಾ ಯೋಜನೆಗಳನ್ನು ಪ್ರಾರಂಭಿಸಲು ಮತ್ತು ಸಂಭವನೀಯ ದಟ್ಟಣೆಯ ಸ್ಥಳಗಳ ಬಗ್ಗೆ ಪ್ರಯಾಣಿಕರಿಗೆ ತಿಳಿಸಲು ಸಹಾಯ ಮಾಡುತ್ತದೆ.

ಯೋಜನೆಗೆ ಆಯ್ಕೆಯಾದ ಸಂಸ್ಥೆಯು ಮ್ಯಾಪ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಿದೆ. ಅದು ಮರ ಬೀಳುವಿಕೆ, ಅಪಘಾತಗಳು, ವಾಹನಗಳ ಸ್ಥಗಿತ, ನೀರು ನಿಂತಿರುವುದು ಮತ್ತು ಇತರ ದಟ್ಟಣೆಗೆ ಕಾರಣವಾಗುವ ಅಂಶಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಿದೆ. ಇದನ್ನು ಬಳಸಿಕೊಂಡು ಪ್ರಯಾಣಿಕರಿಗೆ ವಾಟ್ಸಾಪ್, ಟೆಲಿಗ್ರಾಮ್ ಇತ್ಯಾದಿಗಳ ಮೂಲಕ ಟ್ರಾಫಿಕ್ ಬಗ್ಗೆ ಬಗ್ಗೆ ಮಾಹಿತಿ ನೀಡಲಾಗುತ್ತದೆ.

20 ಕಡೆಗಳಲ್ಲಿ ಎಮೋಜಿ ಡಿಸ್​ಪ್ಲೇ

20 ಹೆಚ್ಚಿನ ಸಂಚಾರ ದಟ್ಟಣೆಯ ಕಾರಿಡಾರ್‌ಗಳಲ್ಲಿ ಎಮೋಜಿ ಡಿಸ್​ಪ್ಲೇಗಳನ್ನು ಸ್ಥಾಪಿಸಲಾಗುವುದು. ಡಿಸ್​ಪ್ಲೇಗಳು ಗಂಟೆಗೆ 5 ರಿಂದ 199 ಕಿಲೋಮೀಟರ್​ ವರೆಗಿನ ವೇಗವನ್ನು ತೋರಿಸುತ್ತವೆ. ಡಿಸ್​ಪ್ಲೇಗಳ ಪತ್ತೆ ವ್ಯಾಪ್ತಿಯು 5 ರಿಂದ 300 ಮೀಟರ್ ಆಗಿರುತ್ತದೆ ಮತ್ತು ಪ್ರದರ್ಶನ ಗೋಚರತೆ 300 ಮೀಟರ್ಗಳಿಗಿಂತ ಹೆಚ್ಚು ಇರಲಿದೆ. ವರದಿಗಳ ಪ್ರಕಾರ, ಅತಿವೇಗದ ವಾಹನಗಳಿಗೆ ಕೆಂಪು ಮುಖದ ಎಮೋಜಿ ಮತ್ತು ವೇಗದ ಮಿತಿಯಲ್ಲಿ ಚಾಲನೆ ಮಾಡುವ ವಾಹನಗಳಿಗೆ ಹಸಿರು ಎಮೋಜಿಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ‘ಮನಿ ಕಂಟ್ರೋಲ್’ ವರದಿ ಮಾಡಿದೆ.

ಪೊಲೀಸರು ಹೇಳುವ ಪ್ರಕಾರ, ಏರ್‌ಪೋರ್ಟ್ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್, ಗೊರಗುಂಟೆಪಾಳ್ಯ, ಮತ್ತು ನಾಯಂಡಹಳ್ಳಿ ರಸ್ತೆ ಮತ್ತು ಹೆಚ್ಚಿನ ವೇಗ ಉಲ್ಲಂಘನೆ ಪ್ರಕರಣಗಳು ವರದಿಯಾಗುವ ಇತರ ರಸ್ತೆಗಳಲ್ಲಿ ಡಿಸ್‌ಪ್ಲೇಗಳನ್ನು ಅಳವಡಿಸಲಾಗುವುದು ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಬೆಂಗಳೂರಿನ ಅನಾಥಾಶ್ರಮದಲ್ಲಿ ಅಕ್ರಮವಾಗಿ ಇಸ್ಲಾಂ ಧಾರ್ಮಿಕ ಶಿಕ್ಷಣ: ತಾಲಿಬಾನ್ ಜೀವನ ವಿಧಾನವೆಂದ ಮಕ್ಕಳ ರಕ್ಷಣಾ ಆಯೋಗ

ಟ್ರಾಫಿಕ್ ಕಣ್ಗಾವಲುಗಾಗಿ 12 ಪ್ರಮುಖ ಸ್ಥಳಗಳಲ್ಲಿ ಬಹುಮಹಡಿ ಕಟ್ಟಡಗಳಲ್ಲಿ PTZ ಕ್ಯಾಮೆರಾಗಳನ್ನು ಅಳವಡಿಸಲು ಸಂಚಾರ ಪೊಲೀಸರು ಯೋಜಿಸಿದ್ದಾರೆ. ಮೂರು ಡ್ರೋನ್‌ಗಳನ್ನು ಸಹ ಬಳಸಲಾಗುವುದು ಮತ್ತು ಇನ್ನೂ ಐದು ಡ್ರೋನ್‌ಗಳನ್ನು ಶೀಘ್ರದಲ್ಲೇ ಖರೀದಿಸಲಾಗುವುದು ಎಂದು ಪೊಲೀಸರು ಹೇಳಿರುವುದಾಗಿ ವರದಿ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ