ಆನೇಕಲ್: ಹೆರಿಗೆ ವೇಳೆ ಮಗು ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಪೋಷಕರ ಆರೋಪ
ಬೆಂಗಳೂರು(Bengaluru) ನಗರ ಜಿಲ್ಲೆಯ ಆನೇಕಲ್ ಸರ್ಕಾರಿ ಆಸ್ಪತ್ರೆ (Government Hospital)ಯಲ್ಲಿ ನಡೆದಿದೆ. ಇದೀಗ ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಕೊನೆಯುಸಿರೆಳೆದಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಆನೇಕಲ್‌ನ ಪಂಪ್‌ಹೌಸ್ ನಿವಾಸಿಯಾಗಿದ್ದ ಸುಮಲತಾ ಎಂಬುವವರು ಇಂದು(ನ.21) ಬೆಳಗ್ಗೆ 10.30ಕ್ಕೆ ಹೆರಿಗೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬಂದಿದ್ದರು.
ಬೆಂಗಳೂರು, ನ.21: ಹೆರಿಗೆ ವೇಳೆ ಮಗು ಸಾವನ್ನಪ್ಪಿರುವ(Child Death) ಘಟನೆ ಬೆಂಗಳೂರು(Bengaluru) ನಗರ ಜಿಲ್ಲೆಯ ಆನೇಕಲ್ ಸರ್ಕಾರಿ ಆಸ್ಪತ್ರೆ (Government Hospital)ಯಲ್ಲಿ ನಡೆದಿದೆ. ಇದೀಗ ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಕೊನೆಯುಸಿರೆಳೆದಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಆನೇಕಲ್‌ನ ಪಂಪ್‌ಹೌಸ್ ನಿವಾಸಿಯಾಗಿದ್ದ ಸುಮಲತಾ ಎಂಬುವವರು ಇಂದು(ನ.21) ಬೆಳಗ್ಗೆ 10.30ಕ್ಕೆ ಹೆರಿಗೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬಂದಿದ್ದರು. ಬೆಳಗ್ಗೆ 11 ಗಂಟೆಯಿಂದ ನಾರ್ಮಲ್ ಡೆಲಿವರಿಗೆ ಟ್ರೈ ಮಾಡಿದ್ದರು. ಆದರೆ, ಈ ವೇಳೆ ಮಗುವಿಗೆ ಉಸಿರಾಟದ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದ್ದರಂತೆ.
ಇನ್ನು ನಾರ್ಮಲ್ ಹೆರಿಗೆ ಮಾಡಿಸಲು ವೈದ್ಯರು ಪ್ರಯತ್ನಪಟ್ಟಿದ್ದಾರೆ. ಆದರೆ, ಮಗು 4.5 ಕೆ.ಜಿ ತೂಕ ಇದ್ದಿದ್ದರಿಂದ ನಾರ್ಮಲ್ ಡೆಲಿವರಿ ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಮಗುವನ್ನು ಹೊರತೆಗೆಯಲು ವೈದ್ಯರು ಪ್ರಯತ್ನಿಸಿದ್ದರು. ಮಗುವನ್ನು ಹೊರತೆಗೆಯಲು ಆಗದಿದ್ದಾಗ ಸಿಸೇರಿಯನ್ ಮಾಡಿದ್ದರು. ಹಸುಗೂಸನ್ನು ಹೊರ ತೆಗೆದಾಗ ದೇಹದ ತುಂಬೆಲ್ಲಾ ಗಾಯವಾಗಿದೆ. ಬಳಿಕ ಹಸುಗೂಸು ಮೃತಪಟ್ಟಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರಂತೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ:19 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ, ಸಂಬಂಧಿಕರಿಂದ ಪ್ರತಿಭಟನೆ
ಇನ್ನು ಇಂತಹ ಘಟನೆಗಳು ನಡೆಯುತ್ತಲೆ ಇರುತ್ತದೆ. ಕಳೆದ ಸೆ.16 ರಂದು ಬೆಂಗಳೂರು ಗ್ರಾ. ಜಿಲ್ಲೆಯ ವಿಜಯಪುರ ನಗರದ ದಾದಾಪೀರ್ ಮತ್ತು ನಜಿಯಾ ಬಾನು ದಂಪತಿಯ ಮಗಳಾದ 6 ವರ್ಷದ ರಾಬಿಯಾ ಎಂಬ ಮಗುವಿಗೆ ಕೆಮ್ಮು, ಕಫಾ ಕಾಣಿಸಿಕೊಂಡಿತ್ತು. ಹೀಗಾಗಿ ಚಿಕಿತ್ಸೆಗೆಂದು ಮಗುವನ್ನು ದೇವನಹಳ್ಳಿಯ ಆಕಾಶ್ ಆಸ್ವತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಬಳಿಕ ಮಗು ಮೃತಪಟ್ಟಿದ್ದು ವೈದ್ಯರ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದರು. ಇದೀಗ ಮತ್ತೊಂದು ಹಸುಗೂಸು ಮೃತಪಟ್ಟಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ