ಹುಬ್ಬಳ್ಳಿ ಕಿಮ್ಸ್ನಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಸಾವು ಆರೋಪ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಹುಬ್ಬಳ್ಳಿ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಂಡಗೋಡ ಮೂಲದ ಅನ್ನಪೂರ್ಣ ಶಂಕರ ಹುಲಿಯಾಳ್ ಎಂಬುವವರು ಸಾವನ್ನಪ್ಪಿದ್ದು, ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯದಿಂದ ಹೀಗಾಗಿದೆ ಎಂದು ಆರೋಪಿಸಿದ್ದಾರೆ. ರಾತ್ರಿ ವೇಳೆ ಆಸ್ಪತ್ರೆಗೆ ಸಿಬ್ಬಂದಿಗಳು ಕುಡಿದು ಬರುತ್ತಿದ್ದರು ಎಂದು ಆರೋಪಿಸಿದ್ದು, ಆಸ್ಪತ್ರೆ ಮುಂದೆ ಅನ್ನಪೂರ್ಣ ಪುತ್ರಿಯ ಗೋಳಾಟ ಮುಗಿಲು ಮುಟ್ಟಿದೆ. ಹೆತ್ತ ತಾಯಿಯನ್ನು ಕಳೆದುಕೊಂಡು ಮಗಳು ಕಂಗಾಲಾಗಿದ್ದಾರೆ.
ಹುಬ್ಬಳ್ಳಿ, ಆ.25: ಹುಬ್ಬಳ್ಳಿ ಕಿಮ್ಸ್ (Hubballi Kims) ಒಂದಿಲ್ಲೊಂದು ಅಪಖ್ಯಾತಿಗೆ ಒಳಗಾಗುತ್ತಿರುತ್ತದೆ. ಅದರಂತೆ ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಹೌದು, ಮುಂಡಗೋಡ (Mundgod) ಮೂಲದ ಅನ್ನಪೂರ್ಣ ಶಂಕರ ಹುಲಿಯಾಳ್ ಎಂಬುವವರು ಸಾವನ್ನಪ್ಪಿದ್ದು, ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯದಿಂದ ಹೀಗಾಗಿದೆ ಎಂದು ಆರೋಪಿಸಿದ್ದಾರೆ. ಬಿಸಿ ಸಾಂಬಾರ್ ಮೈಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಅನ್ನಪೂರ್ಣ ಅವರನ್ನು ಒಂದು ವಾರದ ಹಿಂದೆ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಇವತ್ತೀನ ವರೆಗೂ ಚಿಕಿತ್ಸೆ ಪಡಿಯುತ್ತಿದ್ದ ಅನ್ನಪೂರ್ಣ ಅವರು ಇಂದು ಮೃತರಾಗಿದ್ದಾರೆ.
ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಗಾಯಾಳು ಅನ್ನಪೂರ್ಣ
ಇನ್ನು ಮೃತ ಅನ್ನಪೂರ್ಣ ಅವರು ಪ್ಲಾಸ್ಟಿಕ್ ಸರ್ಜರಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು (ಆ.25) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇನ್ನು ರಾತ್ರಿ ವೇಳೆ ಆಸ್ಪತ್ರೆಗೆ ಸಿಬ್ಬಂದಿಗಳು ಕುಡಿದು ಬರುತ್ತಿದ್ದರು ಎಂದು ಆರೋಪಿಸಿದ್ದು, ಆಸ್ಪತ್ರೆ ಮುಂದೆ ಅನ್ನಪೂರ್ಣ ಪುತ್ರಿಯ ಗೋಳಾಟ ಮುಗಿಲು ಮುಟ್ಟಿದೆ. ಹೆತ್ತ ತಾಯಿಯನ್ನು ಕಳೆದುಕೊಂಡು ಮಗಳು ಕಂಗಾಲಾಗಿದ್ದಾರೆ.
ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಡುಗೆ ಮುಖ್ಯಸ್ಥರಾಗಿದ್ದ ಅನ್ನಪೂರ್ಣ
ಹೌದು, ಅನ್ನಪೂರ್ಣ ಅವರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಡುಗೆ ಮುಖ್ಯಸ್ಥರಾಗಿದ್ದರು. ಕಳೆದ ಶನಿವಾರ ಅಚಾನಕ್ಕಾಗಿ ಸಿದ್ದ ಪಡಿಸಿದ ಬಿಸಿ ಸಾಂಬಾರ್ನಲ್ಲೆ ಬಿದ್ದು ಸುಟ್ಟುಕೊಂಡಿದ್ದರು. ಕೂಡಲೇ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡದೆ ಪ್ರಾಣ ತೆಗೆದಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ ವೇಳೆ ಅಲ್ಲಿಗೆ ಬಂದಿದ್ದ ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಯಂತ ಗೌಡ ಅವರ ಕಾಲು ಹಿಡಿದು ಅಳಲು ತೋಡಿಕೊಳ್ಳಲು ಬಂದ ಮಹಿಳೆಯನ್ನು ಇನ್ಸ್ಪೆಕ್ಟರ್ ಒದ್ದಿದ್ದಾರಂತೆ. ಬಳಿಕ ಕುಟುಂಬಸ್ಥರ ಹಾಗೂ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ