ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ಶಾಸಕ, ಎಂಎಲ್​ಸಿಗಳಿಗೆ ಮೊದಲ ಆದ್ಯತೆ: ಸಿದ್ದರಾಮಯ್ಯ

ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ನಡುವೆ ಜಟಾಪಟಿ ನಡೆಯುತ್ತಿದೆ. ಶಾಸಕರು ಮತ್ತು ಎಂಎಲ್​ಸಿಗಳಿಗೆ ಮೊದಲ ಆದ್ಯತೆ ನೀಡುವಂತೆ ಸಿದ್ದರಾಮಯ್ಯ ಮನವಿ ಮಾಡಿದರೆ, ಇತ್ತ ಡಿಕೆ ಶಿವಕುಮಾರ್ ಅವರು ಕಾರ್ಯಕರ್ತರಿಗೆ ಮಣೆ ಹಾಕಲು ಪಟ್ಟು ಹಿಡಿದಿದ್ದಾರೆ.

ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ಶಾಸಕ, ಎಂಎಲ್​ಸಿಗಳಿಗೆ ಮೊದಲ ಆದ್ಯತೆ: ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us
Malatesh Jaggin
| Updated By: Rakesh Nayak Manchi

Updated on: Nov 21, 2023 | 6:11 PM

ಬೆಂಗಳೂರು, ನ.21: ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ವಿಚಾರದಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar)​ ನಡುವೆ ಜಟಾಪಟಿ ನಡೆಯುತ್ತಿದೆ. ಶಾಸಕರು ಮತ್ತು ಎಂಎಲ್​ಸಿಗಳನ್ನು ಆಯ್ಕೆ ಮಾಡಲು ಸಿದ್ದರಾಮಯ್ಯ ಲಿಸ್ಟ್ ಹಿಡಿದು ಕುಳಿತುಕೊಂಡರೆ, ಇತ್ತ ಡಿಕೆ ಶಿವಕುಮಾರ್ ಅವರು ಕಾರ್ಯಕರ್ತರಿಗೆ ಮಣೆ ಹಾಕಲು ಪಟ್ಟು ಹಿಡಿದಿದ್ದಾರೆ.

ಈ ನಡುವೆ ಹೇಳಿಕೆ ನಿಡಿದ ಸಿದ್ದರಾಮಯ್ಯ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರು ಇಂದು ಬೆಂಗಳೂರಿಗೆ ಆಗಮಿಸಿದ್ದು, ಇವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಮೊದಲ ಹಂತದಲ್ಲಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಆದ್ಯತೆ ನೀಡುವಂತೆ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ. ಆದರೆ ಇಂದೇ ನಿಗಮ ಮಂಡಳಿ ಪಟ್ಟಿ ಅಂತಿಮ ಆಗುತೋ ಇಲ್ವೋ ಗೊತ್ತಿಲ್ಲ ಎಂದರು.

ಬರ ಪರಿಹಾರ ರೈತರಿಗೆ ತಲುಪಿಲ್ಲ ಎಂಬ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಆರೋಪಗಳಿಗೆ ಬೆಂಗಳೂರಿನಲ್ಲಿ ತಿರುಗೇಟು ನೀಡಿದ ಸಿದ್ದರಾಮಯ್ಯ, ಕುಮಾರಸ್ವಾಮಿಗೆ ಏನು ಗೊತ್ತಿಲ್ಲ. 800 ಕೋಟಿ ಹೆಚ್ಚು ಹಣ ಇದೆ. ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರವನ್ನು ಕೆಳಿದ್ದೇವೆ. ಅವರ ಕಡೆಯಿಂದ ಇನ್ನೂ ಹಣ ಬಂದಿಲ್ಲ ಎಂದರು.

ಇದನ್ನೂ ಓದಿ: ನಿಗಮ ಮಂಡಳಿ ನೇಮಕಾತಿ: ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಪತ್ಯೇಕ ಪಟ್ಟಿ ಸಿದ್ಧ, ಇಲ್ಲಿದೆ ಇಬ್ಬರ ಲೆಕ್ಕಾಚಾರ

ವಿಶ್ವಾದ್ಯಂತ ವಿಶ್ವ ಮೀನುಗಾರಿಕೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಎಲ್ಲ ಒಳನಾಡು ಹಾಗೂ ಕರಾವಳಿ ಮೀನುಗಾರರಿಗೆ, ಮಾರಾಟಗಾರರಿಗೆ, ಸಂಸ್ಕರಣ ಮಾಡುತ್ತರುವವರಿಗೆ ಶುಭಾಶಯ ಕೋರಿ ದಿನಾಚರಣೆಯ ಇತಿಹಾಸವನ್ನು ತಿಳಿಸಿದರು.

ಮೀನುಗಾರರು ಅನೇಕ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಅದಕ್ಕೆ ಪರಿಹಾರ ಸಿಗಬೇಕು. ಮಂಕಾಳು ವೈದ್ಯ ಆ ಜವಾಬ್ದಾರಿ ತಗೊಂಡಿದ್ದಾರೆ. ಮೀನುಗಾರರಿಗೆ ವಿಶ್ವವಿದ್ಯಾನಿಲಯ ಬೇಕು ಅಂತ ಕೇಳಿದ್ದಾರೆ. ಸರ್ಕಾರಕ್ಕೆ ಈ ವರ್ಷ ಅಂತೂ ಮಾಡಲು ಸಾಧ್ಯವಿಲ್ಲ. ಮುಂದಿನ ವರ್ಷ ಈ‌ಬ ಗ್ಗೆ ವಿಚಾರ ಮಾಡುತ್ತೇವೆ ಎಂದರು.

ಮೀನುಗಾರಿಕೆ ಉದ್ಯಮ ಆಹಾರ ಮಾತ್ರ ಒದಗಿಸುವುದಲ್ಲ. ಆರ್ಥಿಕ ಸಾಮರ್ಥ್ಯ ಹೆಚ್ಚಿಸುತ್ತದೆ ಎಂದು ಸಿದ್ದರಾಮಯ್ಯ ಅವರು, ಇಂಗ್ಲೀಷ್​ನಲ್ಲಿ ಬೋಟ್​ಗೆ ಏನಂತಾರೆ ಅಂತ ಪಕ್ಕದಲ್ಲಿದ್ದ ಅಧಿಕಾರಿ ಕೇಳಿ ನಗೆ ಚಟಾಕಿ ಹಾರಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ