AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವನಹಳ್ಳಿ: ಕೆಮ್ಮು, ಕಫಾ ಎಂದು ಆಕಾಶ್ ಆಸ್ಪತ್ರೆಗೆ ದಾಖಲಾಗಿದ್ದ 6 ವರ್ಷದ ಮಗು ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ

6 ವರ್ಷದ ರಾಬಿಯಾ ಎಂಬ ಮಗುವಿಗೆ ಕೆಮ್ಮು, ಕಫಾ ಕಾಣಿಸಿಕೊಂಡಿತ್ತು. ಹೀಗಾಗಿ ಚಿಕಿತ್ಸೆಗೆಂದು ಮಗುವನ್ನು ದೇವನಹಳ್ಳಿಯ ಆಕಾಶ್ ಆಸ್ವತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಈಗ ಮಗು ಮೃತಪಟ್ಟಿದ್ದು ವೈದ್ಯರ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಮಗುವಿಗೆ ಮೂರು ದಿನದಿಂದ ಜನರಲ್ ವಾರ್ಡ್​ನಲ್ಲಿ ಚಿಕಿತ್ಸೆ ನೀಡಿದ್ದು ಸಂಜೆ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಐಸಿಯುಗೆ ಶಿಫ್ಟ್​ ಮಾಡಿದ ಮೂರು ಗಂಟೆಗಳಲ್ಲಿ ಮಗು ಮೃತಪಟ್ಟಿದೆ.

ದೇವನಹಳ್ಳಿ: ಕೆಮ್ಮು, ಕಫಾ ಎಂದು ಆಕಾಶ್ ಆಸ್ಪತ್ರೆಗೆ ದಾಖಲಾಗಿದ್ದ 6 ವರ್ಷದ ಮಗು ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ
ಮೃತ ಮಗು ರಾಬಿಯಾ ಹಾಗೂ ತಂದೆ ದಾದಾಪೀರ್
ನವೀನ್ ಕುಮಾರ್ ಟಿ
| Updated By: ಆಯೇಷಾ ಬಾನು|

Updated on: Sep 16, 2023 | 10:39 AM

Share

ದೇವನಹಳ್ಳಿ, ಸೆ.16: ಕೆಮ್ಮು, ಕಫಾ ಇತ್ತು ಎಂದು ಆಸ್ವತ್ರೆಗೆ ಬಂದಿದ್ದ‌ ಮಗು ಮೃತಪಟ್ಟಿದ್ದು ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪ ಮಾಡಿದ್ದಾರೆ(Doctor’s Negligence). ಮೂರು ದಿನದ ಹಿಂದೆ ಚೆನ್ನಾಗಿ ಓಡಾಡ್ತಿದ್ದ ಬೆಂಗಳೂರು ಗ್ರಾ. ಜಿಲ್ಲೆ ವಿಜಯಪುರ ನಗರದ ದಾದಾಪೀರ್ ಮತ್ತು ನಜಿಯಾ ಬಾನು ದಂಪತಿಯ ಮಗಳಾದ 6 ವರ್ಷದ ರಾಬಿಯಾ ಎಂಬ ಮಗುವಿಗೆ ಕೆಮ್ಮು, ಕಫಾ ಕಾಣಿಸಿಕೊಂಡಿತ್ತು. ಹೀಗಾಗಿ ಚಿಕಿತ್ಸೆಗೆಂದು ಮಗುವನ್ನು ದೇವನಹಳ್ಳಿಯ ಆಕಾಶ್ ಆಸ್ವತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಈಗ ಮಗು ಮೃತಪಟ್ಟಿದ್ದು ವೈದ್ಯರ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ(Child Death).

ಮಗುವಿಗೆ ಮೂರು ದಿನದಿಂದ ಜನರಲ್ ವಾರ್ಡ್​ನಲ್ಲಿ ಚಿಕಿತ್ಸೆ ನೀಡಿದ್ದು ಸಂಜೆ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಐಸಿಯುಗೆ ಶಿಫ್ಟ್​ ಮಾಡಿದ ಮೂರು ಗಂಟೆಗಳಲ್ಲಿ ಮಗು ಮೃತಪಟ್ಟಿದೆ. ರಿಸರ್ಚ್‌ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ ಕಾರಣ ಸಾವು ಸಂಭವಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಆಸ್ವತ್ರೆ ವೈದ್ಯರು ಸಿಬ್ಬಂದಿ ವಿರುದ್ದ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಮಗು ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ.

ಮಾನವೀಯತೆಯನ್ನು ಮರೆತ ಖಾಸಗಿ ಆಸ್ವತ್ರೆ ಸಿಬ್ಬಂದಿ

ಇನ್ನು ಮತ್ತೊಂದೆಡೆ ಆಕಾಶ್ ಆಸ್ವತ್ರೆ ಸಿಬ್ಬಂದಿ ಮಾನವೀಯತೆಯನ್ನೂ ಮರೆತು ವರ್ತಿಸಿದ್ದಾರೆ. ಮಗು ಸಾವನ್ನಪಿದ್ರೆ ಆ್ಯಂಬುಲೆನ್ಸ್ ಸಹ ನೀಡದೆ ನಿರ್ಲಕ್ಷ್ಯವಹಿಸಿದ್ದಾರೆ. ಮಗುವಿನ ಮೃತದೇಹ ತೆಗೆದುಕೊಂಡು ಹೋಗಲು ವಾಹನ ನೀಡದಿದಕ್ಕೆ ಪೋಷಕರು ಇಂಡಿಕಾ ಕಾರಿನಲ್ಲಿ ಮಗಳ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾರೆ. ಕಾರಿನಲ್ಲಿ 6 ಜನ ಕೂತು ಹರಸಾಹಸ ಪಟ್ಟು ತೊಡೆ ಮೇಲೆ ಮೃತದೇಹವಿಟ್ಟುಕೊಂಡು ಹೋಗಿದ್ದಾರೆ. ಪೋಸ್ಟ್ ಮಾರ್ಟಂ‌ ಸಹ ಮಾಡದೆ ಮಗುವಿನ ಮೃತದೇಹವನ್ನು ತರಾತುರಿಯಲ್ಲಿ ಕೊಟ್ಟು ಕಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಆಕಾಶ್ ಮೆಡಿಕಲ್ ಕಾಲೇಜು ಮತ್ತು ಆಸ್ವತ್ರೆ ವೈದ್ಯರ ನಿರ್ಲಕ್ಷ್ಯದಿಂದ ಸಾವು ಆರೋಪ ಹಿನ್ನೆಲೆ ಮಾನವೀಯತೆಯನ್ನೂ ಸಹ ಇಲ್ಲಿನ ಸಿಬ್ಬಂದಿ ಮರೆತಿದ್ದಾರೆ. ವೈದ್ಯರ ವಿರುದ್ಧ ಆರೋಪ ಕೇಳಿ ಬಂದ ಹಿನ್ನೆಲೆ ಸಿಬ್ಬಂದಿ ತರಾತುರಿಯಲ್ಲಿ ಕುಟುಂಬಸ್ಥರನ್ನು ಮನೆಗೆ ಕಳಿಸಿದ್ದಾರೆ.

ಇದನ್ನೂ ಓದಿ: ವಂಚನೆ ಪ್ರಕರಣ: ಡೀಲ್ ವಿಫಲವಾದ ಬಳಿಕ ಹಣ ಮರು ಪಾವತಿಗೆ ಉದ್ಯಮಿ ಬಳಿ ಸಮಯ ಕೇಳಿದ್ದ ಚೈತ್ರಾ ಕುಂದಾಪುರ

ಹೇಮಾವತಿ ನದಿ ಹಿನ್ನೀರಿನಲ್ಲಿ ಮುಳುಗಿ ಸರ್ಕಾರಿ ವೈದ್ಯ ಸಾವು

ಹಾಸನ ತಾಲೂಕಿನ ಖೋನಾಪುರ ಗ್ರಾಮದ ಬಳಿ ಹೇಮಾವತಿ ನದಿ ಹಿನ್ನೀರಿನಲ್ಲಿ ಮುಳುಗಿ ಸರ್ಕಾರಿ ವೈದ್ಯರೊಬ್ಬರು ಮೃತಪಟ್ಟಿದ್ದಾರೆ. ಚಂದ್ರಶೇಖರ್ (31) ಮೃತಪಟ್ಟ ಯುವ ವೈದ್ಯ. ಹೊಳೆನರಸೀಪುರ ತಾಲೂಕಿನ ಕೆರಗೋಡು ಪಿಎಚ್‌ಸಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್ ಅವರು ನಿನ್ನೆ ಕರ್ತವ್ಯಕ್ಕೂ ಮುನ್ನ‌ ಹೇಮಾವತಿ ನದಿ ಹಿನ್ನೀರಿನ ಖೋನಾಪುರದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ತೆರಳಿದ್ದರು. ಪೂಜೆಗೂ ಮುನ್ನ ಹೇಮಾವತಿ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಹೇಮಾವತಿ ನದಿ ನೀರು ಸಂಪೂರ್ಣ ಕಡಿಮೆಯಾಗಿದ್ದರಿಂದ ಸ್ನಾನಕ್ಕೆ ಇಳಿದ ವೇಳೆ, ಆಳ ಅರಿಯದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ರಾತ್ರಿಯವರೆಗೂ ಮಗ ಮನೆಗೆ ಬಾರದೆ ಇದ್ದಾಗ ಪೋಷಕರು ಕರೆ ಮಾಡಿದ್ದು ಮಗ ಫೋನ್ ರಿಸಿವ್ ಮಾಡದ ಹಿನ್ನೆಲೆ ಅರಕಲಗೂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅರಕಲಗೂಡು ಪೊಲೀಸರ ಸೂಚನೆ ಮೇರೆಗೆ ನಿನ್ನೆ ಗೊರೂರು ಪೊಲೀಸರು ಹುಡಕಾಟ ನಡೆಸಿದ್ದು ನದಿಯ ದಡದಲ್ಲಿ ಚಂದ್ರಶೇಖರ್ ಬಟ್ಟೆ ಪತ್ತೆಯಾಗಿದೆ. ಅಣತಿ ದೂರದಲ್ಲಿ ಚಂದ್ರಶೇಖರ್ ಶವ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಶವ ಹೊರಗೆ ತೆಗೆದಿದ್ದಾರೆ. ಘಟನೆ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ