ಬೆಂಗಳೂರಿನ ಅನಾಥಾಶ್ರಮದಲ್ಲಿ ಅಕ್ರಮವಾಗಿ ಇಸ್ಲಾಂ ಧಾರ್ಮಿಕ ಶಿಕ್ಷಣ: ತಾಲಿಬಾನ್ ಜೀವನ ವಿಧಾನವೆಂದ ಮಕ್ಕಳ ರಕ್ಷಣಾ ಆಯೋಗ
ಇಲ್ಲಿನ ಮಕ್ಕಳು ಮಧ್ಯಯುಗದ ತಾಲಿಬಾನ್ ರೀತಿಯಲ್ಲಿ ಬದುಕುತ್ತಿದ್ದಾರೆ. ಇಲ್ಲಿ ಸುಮಾರು 200 ಮಕ್ಕಳಿದ್ದಾರೆ. ಮಸೀದಿಯ ನಮಾಜ್ ಮಾಡುವ ಎರಡು ಹಾಲ್‌ಗಳಲ್ಲಿ ಮಲಗುತ್ತಾರೆ. ಆಟದ ವಸ್ತುಗಳಿಲ್ಲ, ಟಿವಿ ಇಲ್ಲ, ಮುಗ್ಧ ಮಕ್ಕಳು ಮೌಲ್ವಿಗಳನ್ನು ನೋಡಿದ ತಕ್ಷಣ ಭಯಪಡ್ತಾರೆ. ಇದು ಕರ್ನಾಟಕ ಸರ್ಕಾರದ ನಿರ್ಲಕ್ಷ್ಯ, ಸಂವಿಧಾನದ ಉಲ್ಲಂಘನೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಹೇಳಿದ್ದಾರೆ.
ಬೆಂಗಳೂರು, ನವೆಂಬರ್ 21: ಬೆಂಗಳೂರಿನ ಕಾವಲ್ ಬೈರಸಂದ್ರದಲ್ಲಿರೋ ಮುಸ್ಲಿಂ ಸಮುದಾಯದ (Muslim Community) ದಾರುಲ್ ಉಲೂಮ್ ಸಾದಿಯಾ ಅನಾಥಾಶ್ರಮದಲ್ಲಿ (Orphanage) ಮಕ್ಕಳಿಗೆ ಇಸ್ಲಾಂ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂನ್ಗೊ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅವ್ಯವಹಾರ ನಡೆಯುತ್ತಿರುವುದನ್ನು ಖಚಿತಪಡಿಸಿದ್ದಾರೆ. ಅಲ್ಲದೆ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ನೋಟಿಸ್ ನೀಡುವುದಾಗಿ ಹೇಳಿದ್ದಾರೆ.
ಅನಾಥಾಶ್ರಮದಲ್ಲಿರುವ 200 ಮಕ್ಕಳನ್ನು ಶಾಲೆಗೂ ಕಳುಹಿಸಲಾಗುತ್ತಿಲ್ಲ. ಇಸ್ಲಾಂ ಧಾರ್ಮಿಕ ಶಿಕ್ಷಣ ಮಾತ್ರ ನೀಡಲಾಗುತ್ತಿದೆ ಎಂದು ಪ್ರಿಯಾಂಕ್ ಹೇಳಿದ್ದಾರೆ.
ಇಲ್ಲಿನ ಮಕ್ಕಳು ಮಧ್ಯಯುಗದ ತಾಲಿಬಾನ್ ರೀತಿಯಲ್ಲಿ ಬದುಕುತ್ತಿದ್ದಾರೆ. ಇಲ್ಲಿ ಸುಮಾರು 200 ಮಕ್ಕಳಿದ್ದಾರೆ. ಮಸೀದಿಯ ನಮಾಜ್ ಮಾಡುವ ಎರಡು ಹಾಲ್‌ಗಳಲ್ಲಿ ಮಲಗುತ್ತಾರೆ. ಆಟದ ವಸ್ತುಗಳಿಲ್ಲ, ಟಿವಿ ಇಲ್ಲ, ಮುಗ್ಧ ಮಕ್ಕಳು ಮೌಲ್ವಿಗಳನ್ನು ನೋಡಿದ ತಕ್ಷಣ ಭಯಪಡ್ತಾರೆ. ಇದು ಕರ್ನಾಟಕ ಸರ್ಕಾರದ ನಿರ್ಲಕ್ಷ್ಯ, ಸಂವಿಧಾನದ ಉಲ್ಲಂಘನೆ ಎಂದು ಅವರು ಹೇಳಿದ್ದಾರೆ.
ಅನಾಥಾಶ್ರಮದಲ್ಲಿ ತಪಾಸಣೆ ನಡೆಸಿದ ಬಗ್ಗೆ ಮತ್ತು ಅಲ್ಲಿನ ಅಕ್ರಮಗಳ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸುವ ಮೂಲಕ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸೆಲೆಬ್ರಿಟಿ ಮನೆಗಳ್ಳನ ಬಂಧನ, 70 ಲಕ್ಷ ಮೌಲ್ಯದ ಚಿನ್ನ ವಶಕ್ಕೆ
बंगलुरु,कर्नाटक में दारूल उलूम सैय्यादिया यतीम खाना नाम से अवैध ढंग से चलते हुए एक ग़ैरपंजीकृत अनाथ आश्रम का औचक निरीक्षण किया जिसमें कई अनियमिततायें पायी गयीं।
यहाँ क़रीब 200 यतीम (अनाथ) बच्चों को रखा गया है। 100 वर्गफ़िट के कमरे में 8 बच्चों का रखा जाता है,ऐसे 5 कमरों में 40… pic.twitter.com/dnp1g8Wj7a
— प्रियंक कानूनगो Priyank Kanoongo (@KanoongoPriyank) November 20, 2023
‘ಕರ್ನಾಟಕದ ಬೆಂಗಳೂರಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ದಾರುಲ್ ಉಲೂಮ್ ಸಾದಿಯಾ ಯತೀಂ ಖಾನಾ ಎಂಬ ಅನಾಥಾಶ್ರಮವನ್ನು ದಿಢೀರ್ ತಪಾಸಣೆ ನಡೆಸಿದಾಗ ಹಲವು ಅವ್ಯವಹಾರಗಳು ಪತ್ತೆಯಾಗಿವೆ. ಸುಮಾರು 200 ಯತೀಂ (ಅನಾಥ) ಮಕ್ಕಳನ್ನು ಇಲ್ಲಿ ಇರಿಸಲಾಗಿದೆ. 100 ಚದರ ಅಡಿಯ ಕೊಠಡಿಯಲ್ಲಿ 8 ಮಕ್ಕಳಿಗೆ ವಸತಿ ಕಲ್ಪಿಸಲಾಗಿದೆ. ಅಂತಹ 5 ಕೊಠಡಿಗಳಲ್ಲಿ 40 ಮಕ್ಕಳು ವಾಸಿಸುತ್ತಿದ್ದಾರೆ ಮತ್ತು 16 ಮಕ್ಕಳು ಕಾರಿಡಾರ್‌ನಲ್ಲಿ ವಾಸಿಸುತ್ತಿದ್ದಾರೆ. ಉಳಿದ 150 ಮಕ್ಕಳು ಮಸೀದಿಯ ಎರಡು ವಿಭಿನ್ನ ಪ್ರಾರ್ಥನಾ ಮಂದಿರಗಳಲ್ಲಿ ರಾತ್ರಿ ಮಲಗುತ್ತಾರೆ. ಎಲ್ಲಾ 200 ಮಕ್ಕಳು ದಿನವಿಡೀ ಒಂದೇ ಪ್ರಾರ್ಥನಾ ಮಂದಿರದಲ್ಲಿ ಇರುತ್ತಾರೆ. ಅವರು ಇಸ್ಲಾಮಿಕ್ ಧಾರ್ಮಿಕ ಶಿಕ್ಷಣವನ್ನು ಅಧ್ಯಯನ ಮಾಡುತ್ತಾರೆ. ಮದ್ರಸದಲ್ಲಿ ಮಗುವನ್ನು ಶಾಲೆಗೆ ಕಳುಹಿಸುವುದಿಲ್ಲ, ಆಟದ ಸಾಮಗ್ರಿಗಳೂ ಇಲ್ಲ, ಮಕ್ಕಳು ಟಿವಿ ಕೂಡ ನೋಡುವುದಿಲ್ಲ. ಚಿಕ್ಕ ಮಕ್ಕಳು ತುಂಬಾ ಮುಗ್ಧರು ಮತ್ತು ಮೌಲ್ವಿಗಳು ಬರುವುದನ್ನು ಕಂಡು ಎಲ್ಲರೂ ಹೆದರಿ ಮೌನವಾಗುತ್ತಾರೆ. ಬೆಳಗಿನ ಜಾವ 3:30ಕ್ಕೆ ಎದ್ದು ಮದ್ರಸದಲ್ಲಿ ಓದಲು ಪ್ರಾರಂಭಿಸಿ ಮಧ್ಯಾಹ್ನ ಮಲಗುತ್ತಾರೆ .ನಂತರ ಸಂಜೆಯಿಂದ ರಾತ್ರಿಯವರೆಗೆ ತರಬೇತಿ ಇರುತ್ತದೆ. ಹಗಲಿನಲ್ಲಿ ಪ್ರಾರ್ಥನೆಗೆ ಸಣ್ಣ ವಿರಾಮಗಳು ಇರುತ್ತವೆ. ಆಹಾರ, ವಿಶ್ರಾಂತಿ, ಮನೋರಂಜನೆಗೆ ಬೇರೆ ಜಾಗವಿಲ್ಲ. ಅವರು ಮಸೀದಿಯಲ್ಲೇ ಇರಬೇಕಾಗುತ್ತದೆ. ಆದರೆ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿರುವ ಈ ಅನಾಥಾಶ್ರಮಕ್ಕೆ ಪ್ರತ್ಯೇಕ ಕಟ್ಟಡವಿದ್ದು ಅದರಲ್ಲಿ ಶಾಲೆ ನಡೆಯುತ್ತಿದ್ದರೂ ಈ ಮಕ್ಕಳು ಅಲ್ಲಿಗೆ ಹೋಗಲು ಬಿಡುತ್ತಿಲ್ಲ. ಮಧ್ಯಕಾಲೀನ ತಾಲಿಬಾನ್ ಜೀವನ ವಿಧಾನ ಇಲ್ಲಿದೆ. ಇದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಇದು ಕರ್ನಾಟಕ ಸರ್ಕಾರದ ನಿರ್ಲಕ್ಷ್ಯವಾಗಿದ್ದು, ಸಂವಿಧಾನದ ಉಲ್ಲಂಘನೆಯಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಲಿದೆ’ ಎಂದು ಪ್ರಿಯಾಂಕ್ ಕಾನೂನ್ಗೊ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Tue, 21 November 23