ಸೆಲೆಬ್ರಿಟಿ ಮನೆಗಳ್ಳನ ಬಂಧನ, 70 ಲಕ್ಷ ಮೌಲ್ಯದ ಚಿನ್ನ ವಶಕ್ಕೆ
ಆರೋಪಿ ಕಾರ್ತಿಕ್ ಈ ಹಿಂದೆ ಇಬ್ಬರ ಜೊತೆ ಕೊಲೆ ಕೇಸ್ನಲ್ಲಿ ಭಾಗಿಯಾಗಿದ್ದ. ಒಂಟಿ ಮನೆ, ಬೀಗ ಹಾಕಿದ್ದ ಮನೆಗಳನ್ನು ನೋಡಿ ಕಳ್ಳತನ ಮಾಡ್ತಿದ್ದ. ಕಾರ್ತಿಕ್ ಇತ್ತೀಚೆಗೆ ಇಬ್ಬರು ಸಹಚರರೊಂದಿಗೆ ಕಳ್ಳತನಕ್ಕೆ ಯತ್ನಿಸಿದ್ದ. ಸದ್ಯ ಆರೋಪಿ ಕಾರ್ತಿಕ್ನನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು, ನವೆಂಬರ್ 21: ಪೊಲೀಸರು (Bangalore police) ಸೆಲೆಬ್ರಿಟಿ ಮನೆಗಳ್ಳನನ್ನು ಬಂಧಿಸಿದ್ದು, 70 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ (gold) ವಶಪಡಿಸಿಕೊಳ್ಳಲಾಗಿದೆ. ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ ಅರೆಸ್ಟ್ ಆದವ. ಬೆಂಗಳೂರು, ಚೆನ್ನೈ, ತಿರುಪತಿ ಸೇರಿ ವಿವಿಧ ರಾಜ್ಯದಲ್ಲಿ ಈತ ಖ್ಯಾತನಾಮರ ಮನೆಗಳಲ್ಲಿ ಕಳ್ಳತನ (house theft) ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಬೆಂಗಳೂರೊಂದರಲ್ಲೇ ಆರೋಪಿ ವಿರುದ್ಧ 83ಕ್ಕೂ ಹೆಚ್ಚು ಪ್ರಕರಣಗಳಿವೆ. ಅರೋಪಿ ವಿರುದ್ಧ ನ್ಯಾಯಾಲಯದಲ್ಲಿ 18 ಅರೆಸ್ಟ್ ವಾರೆಂಟ್ ಬಾಕಿ ಇವೆ.
ಆರೋಪಿ ಕಾರ್ತಿಕ್ ಈ ಹಿಂದೆ ಇಬ್ಬರ ಜೊತೆ ಕೊಲೆ ಕೇಸ್ನಲ್ಲಿ ಭಾಗಿಯಾಗಿದ್ದ. ಒಂಟಿ ಮನೆ, ಬೀಗ ಹಾಕಿದ್ದ ಮನೆಗಳನ್ನು ನೋಡಿ ಕಳ್ಳತನ ಮಾಡ್ತಿದ್ದ. ಕಾರ್ತಿಕ್ ಇತ್ತೀಚೆಗೆ ಇಬ್ಬರು ಸಹಚರರೊಂದಿಗೆ ಕಳ್ಳತನಕ್ಕೆ ಯತ್ನಿಸಿದ್ದ. ಸದ್ಯ ಆರೋಪಿ ಕಾರ್ತಿಕ್ನನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. 70 ಲಕ್ಷ ರೂಪಾಯಿ ಮೌಲ್ಯದ ಒಂದು ಕೆಜಿ ಇನ್ನೂರು ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಒಬ್ಬಂಟಿಯಾಗಿ 6 ತಿಂಗಳಲ್ಲಿ 15 ಮನೆ ಲೂಟಿ… ಬೇಲ್ ಮೇಲೆ ಬಂದಿದ್ದ ಡಿಜೆ ಹಳ್ಳಿ ಖದೀಮನ ಕೈ ಚಳಕ ನೋಡಿ ಹೊಸಕೋಟೆ ಪೊಲೀಸರಿಗೇ ಶಾಕ್
ಮನೆ ಕೆಲಸದವನಿಂದ ಕಳವು: ಬೆಂಗಳೂರಿನ ಬಸವೇಶ್ವರ ನಗರ ಪೊಲೀಸರು ಶ್ರೀನಿವಾಸ್ ಎಂಬಾತನನ್ನು ಬಂಧಿಸಿದ್ದಾರೆ. ಸುನೀಲ್ ಎಂಬುವರ ಮನೆಯಲ್ಲಿ ಶ್ರೀನಿವಾಸ್ ಕಳವು ಮಾಡಿದ್ದ. ಆರೋಪಿ ಹೋಟಲ್ ವ್ಯವಹಾರ ಮಾಡಿ ಲಾಸ್ ಮಾಡಿಕೊಂಡಿದ್ದ. ಶ್ರೀನಿವಾಸ್, ಸುನೀಲ್ ಮನೆಯಲ್ಲಿ ಕೆಲಸ ಮಾಡ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ 97 ಗ್ರಾಂ ಚಿನ್ನದ ಆಭರಣ ಕದಿದ್ದ. ಬಸವೇಶ್ವರನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ