Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂತ್ರಸ್ತೆ ಜೊತೆ ವಿವಾಹವಾಗುವ ಷರತ್ತಿನೊಂದಿಗೆ ಅತ್ಯಾಚಾರ ಕೇಸ್ ರದ್ದುಪಡಿಸಿ ಹೈಕೋರ್ಟ್ ಆದೇಶ

ಸಂತ್ರಸ್ತ ಯುವತಿ ಮನವಿ ಪತ್ರವನ್ನು ಗಮನಿಸಿದ ಹೈಕೋರ್ಟ್​, ಆರೋಪಿಯನ್ನು ವಿಚಾರಣೆ ಮಾಡಿದ್ದು,  ಜೈಲಿನಿಂದ ಹಾಜರುಪಡಿಸಿದ್ದ ಆರೋಪಿಯಿಂದಲೂ ಮದುವೆಗೆ ಸಮ್ಮತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಅತ್ಯಾಚಾರ, ಪೋಕ್ಸೋ ಕೇಸ್ ರದ್ದುಪಡಿಸಿ, ಒಂದು ತಿಂಗಳೊಳಗೆ ವಿವಾಹವಾಗಬೇಕೆಂಬ ಷರತ್ತಿನೊಂದಿಗೆ ಹೈಕೋರ್ಟ್​ ಆದೇಶಿಸಿದೆ.

ಸಂತ್ರಸ್ತೆ ಜೊತೆ ವಿವಾಹವಾಗುವ ಷರತ್ತಿನೊಂದಿಗೆ ಅತ್ಯಾಚಾರ ಕೇಸ್ ರದ್ದುಪಡಿಸಿ ಹೈಕೋರ್ಟ್ ಆದೇಶ
ಹೈಕೋರ್ಟ್​
Follow us
Ramesha M
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 21, 2023 | 3:43 PM

ಬೆಂಗಳೂರು, ನ.21: ಸಂತ್ರಸ್ತೆಯೊಂದಿಗೆ ವಿವಾಹವಾಗುವ ಷರತ್ತಿನೊಂದಿಗೆ ಅತ್ಯಾಚಾರ ಪ್ರಕರಣವೊಂದನ್ನು ಹೈಕೋರ್ಟ್​ ರದ್ದುಪಡಿಸಿ ಆದೇಶಿಸಿದೆ. ಇತ್ತೀಚೆಗೆ ಸಂತ್ರಸ್ತ ಯುವತಿ ಹೈಕೋರ್ಟ್​(High Court)ಗೆ ಪ್ರಮಾಣಪತ್ರ ಸಲ್ಲಿಸಿದ್ದಳು. ‘ನಾನೀಗ ವಯಸ್ಕಳಾಗಿದ್ದಾನೆ. ಆರೋಪಿಯೊಂದಿಗೆ ವಿವಾಹವಾಗುವುದಾಗಿ ಹೇಳಿ, ಇದಕ್ಕೆ ಆರೋಪಿಯೂ ಸಹ ಒಪ್ಪಿರುವುದಾಗಿ ಸಂತ್ರಸ್ತ ಯುವತಿ ತಿಳಿಸಿದ್ದರು. ಹೀಗಾಗಿ ಪ್ರಕರಣ ರದ್ದುಪಡಿಸಲು ಅತ್ಯಾಚಾರ ಸಂತ್ರಸ್ತೆ ಮನವಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಆರೋಪಿಯಿಂದಲೂ ಮದುವೆಗೆ ಸಮ್ಮತಿ

ಸಂತ್ರಸ್ತ ಯುವತಿ ಮನವಿ ಪತ್ರವನ್ನು ಗಮನಿಸಿದ ಹೈಕೋರ್ಟ್​, ಆರೋಪಿಯನ್ನು ವಿಚಾರಣೆ ಮಾಡಿದ್ದು,  ಜೈಲಿನಿಂದ ಹಾಜರುಪಡಿಸಿದ್ದ ಆರೋಪಿಯಿಂದಲೂ ಮದುವೆಗೆ ಸಮ್ಮತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಅತ್ಯಾಚಾರ, ಪೋಕ್ಸೋ ಕೇಸ್ ರದ್ದುಪಡಿಸಿ, ಒಂದು ತಿಂಗಳೊಳಗೆ ವಿವಾಹವಾಗಬೇಕೆಂಬ ಷರತ್ತಿನೊಂದಿಗೆ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್​ರಿದ್ದ ಹೈಕೋರ್ಟ್ ಪೀಠ, ಕೇಸ್ ರದ್ದುಪಡಿಸಿ ಆದೇಶಿಸಿದೆ. ಇನ್ನು ಈ ಪಕ್ರರಣ ಚಿಂತಾಮಣಿ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇದೀಗ ಪ್ರಕರಣ ಸುಗಮ ಅಂತ್ಯಕಂಡಿದೆ.

ಇದನ್ನೂ ಓದಿ:ಅತ್ಯಾಚಾರ ಪ್ರಕರಣ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಿಂಗ್​​ಗೆ 21 ದಿನಗಳ ಕಾಲ ಪೆರೋಲ್

ಅತ್ಯಾಚಾರ ಆರೋಪಿಗೆ 43 ವರ್ಷ ಶಿಕ್ಷೆ ವಿಧಿಸಿದ ನ್ಯಾಯಾಲಯ

ಮೈಸೂರು: ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಮೈಸೂರು ನಗರದ ಪೊಕ್ಸೊ ವಿಶೇಷ ನ್ಯಾಯಾಲಯವು 43 ವರ್ಷಗಳ ಕಠಿಣ ಶಿಕ್ಷೆ ಜೊತೆಗೆ 50 ಸಾವಿರ ರೂ ದಂಡವನ್ನು ವಿಧಿಸಿ ತೀರ್ಪು ನೀಡಿತ್ತು. ವಿಶೇಷ ಕೋರ್ಟ್​ನ ನ್ಯಾಯಾಧೀಶೆ ಶೈಮಾ ಕಮರೋಜ್ ಈ ತೀರ್ಪು ನೀಡಿದ್ದರು. ಇದೇ ವೇಳೆ ಸಂತ್ರಸ್ತ ಬಾಲಕಿಗೆ 7 ಲಕ್ಷ ರೂ ಪರಿಹಾರ ನೀಡುವಂತೆ ಸಲಹೆ ಮಾಡಿದ್ದರು. 2021ರಲ್ಲಿ 10 ವರ್ಷದ ಬಾಲಕಿ ಮೇಲೆ ಬಿಹಾರ ಮೂಲದ ಅಪರಾಧಿಯು ನಿರಂತರ ಅತ್ಯಾಚಾರ ಎಸಗಿದ್ದ. ಈ ಕುರಿತು ಮೈಸೂರು ಗ್ರಾಮಾಂತರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:36 pm, Tue, 21 November 23