ಬೆಂಗಳೂರು, ಬೆಳಗಾವಿ ಕೇಂದ್ರ ಕಾರಾಗೃಹ ಸ್ಪೋಟಿಸುವುದಾಗಿ ಕರೆ ಮಾಡಿದ್ದ ಆರೋಪಿ ಸುಳಿವು ಪತ್ತೆ

ಬೆಳಗಾವಿ ಹಿಂಡಲಗಾ ಜೈಲು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸ್ಫೋಟಿಸುತ್ತೇವೆ. ಅಲ್ಲದೆ ಬಂದಿಖಾನೆ ಇಲಾಖೆ ಉತ್ತರ ವಲಯ ಡಿಐಜಿಪಿ ಟಿ.ಪಿ.ಶೇಷಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದನು. ಸದ್ಯ ಆರೋಪಿ ಕಿರಣ್ ಮೋಷಿ‌ ಬೆಂಗಳೂರಲ್ಲಿ ತಲೆಮರೆಸಿಕೊಂಡಿದ್ದಾನೆ.

ಬೆಂಗಳೂರು, ಬೆಳಗಾವಿ ಕೇಂದ್ರ ಕಾರಾಗೃಹ ಸ್ಪೋಟಿಸುವುದಾಗಿ ಕರೆ ಮಾಡಿದ್ದ ಆರೋಪಿ ಸುಳಿವು ಪತ್ತೆ
ಆರೋಪಿ ಕಿರಣ ಮೋಷಿ
Edited By: ವಿವೇಕ ಬಿರಾದಾರ

Updated on: Oct 10, 2023 | 10:32 AM

ಬೆಂಗಳೂರು/ಬೆಳಗಾವಿ ಅ.10: ಬೆಂಗಳೂರು ಕೇಂದ್ರ ಕಾರಾಗೃಹ (Bengaluru Central Jail), ಬೆಳಗಾವಿ ಹಿಂಡಲಗಾ ಜೈಲು (Hindalaga Jail) ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯ ಸಳಿವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹುಕ್ಕೇರಿ ನಿವಾಸಿ ಕಿರಣ ಮೋಷಿ (48) ಬೆದರಿಕೆ ಹಾಕಿದ ಆರೋಪಿ.

ಆರೋಪಿ ಕಿರಣ ಮೋಷಿ 2022 ರಲ್ಲಿ ಬೇರೆಯವರ ಅಕೌಂಟ್​ ಹ್ಯಾಕ್​ ಮಾಡಿ ಶ್ಲೀಲ್​ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದನು. ಈ ಹಿನ್ನೆಲೆಯಲ್ಲಿ ಸೈಬರ್​ ಕ್ರೈಮ್​ ಆರೋಪದಡಿ ಬಂಧನವಾಗಿ 10 ದಿನಗಳ ಕಾಲ ಹಿಂಡಲಗಾ ಜೈಲಿನಲ್ಲಿದ್ದನು. ಇದೀಗ ಆರೋಪಿ ಕಿರಣ ಮೋಷಿ ಜಸ್ಟ್ ಡಯಲ್​ನಲ್ಲಿ ಸರ್ಕಾರಿ ಅಧಿಕಾರಿಗಳ ನಂಬರ್ ಪಡೆದು, ಪತ್ನಿ ಹೆಸರಿನಲ್ಲಿ ಇರುವ ಸೀಮ್​ನಿಂದ ಕರೆ ಮಾಡಿದ್ದನು.

ಇದನ್ನೂ ಓದಿ: ಹಾಸನದ ಜಿಲ್ಲಾ ಕಾರಾಗೃಹದ ಕೈದಿಗಳಿಗೆ ಗಾಂಜಾ ಸಪ್ಲೈ ಮಾಡಲು ಸೇಬು, ಮೋಸಂಬಿ ತಂದಿದ್ದ ಮೂವರು ಆರೋಪಿಗಳು ಅರೆಸ್ಟ್

ಬೆಳಗಾವಿ ಹಿಂಡಲಗಾ ಜೈಲು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸ್ಫೋಟಿಸುತ್ತೇವೆ. ಅಲ್ಲದೆ ಬಂದಿಖಾನೆ ಇಲಾಖೆ ಉತ್ತರ ವಲಯ ಡಿಐಜಿಪಿ ಟಿ.ಪಿ.ಶೇಷಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದನು. ಸದ್ಯ ಆರೋಪಿ ಕಿರಣ್ ಮೋಷಿ‌ ಬೆಂಗಳೂರಲ್ಲಿ ತಲೆಮರೆಸಿಕೊಂಡಿದ್ದಾನೆ.

ಬಂದಿಖಾನೆ ಇಲಾಖೆ ಉತ್ತರ ವಲಯ ಡಿಐಜಿಪಿ ಟಿ.ಪಿ.ಶೇಷಗೆ ಬೆದರಿಕೆ ಕರೆ

ಆರೋಪಿ ಬಂದಿಖಾನೆ ಇಲಾಖೆ ಉತ್ತರ ವಲಯ ಡಿಐಜಿಪಿ ಟಿ.ಪಿ.ಶೇಷ ಅವರ ಸರ್ಕಾರಿ ನಂಬರ್‌ಗೆ ಕರೆ ಮಾಡಿ, “ನನಗೆ ಹಿಂಡಲಗಾ ಜೈಲಿನ ಹೆಡ್ ವಾರ್ಡನ್​ಗಳಾದ ಜಗದೀಶ್ ಗಸ್ತಿ, ಎಸ್.ಎಂ.ಗೋಟೆ ಪರಿಚಯವಿದ್ದಾರೆ. ಅಲ್ಲದೆ ಭೂಗತ ಪಾತಕಿ ಬನ್ನಂಜೆ ರಾಜಾ ಕೂಡ ನನಗೆ ಗೊತ್ತು. ನಾನು ಜೈಲಿನಲ್ಲಿದ್ದಾಗ ಆತನಿಗೆ ನಾನು ಸಹಾಯ ಮಾಡಿದ್ದೇನೆ. ಹಿಂಡಲಗಾ ಜೈಲಿನಲ್ಲಿ ಗಲಭೆ ಸೃಷ್ಟಿಸಿ ನಿಮ್ಮ ಮೇಲೆ ಹಲ್ಲೆ ಮಾಡಲಾಗುವುದು. ತಾವು ವಾಸಿಸುವ ವಸತಿಗೃಹವನ್ನೂ ಸ್ಫೋಟಿಸುವುದಾಗಿ” ಬೆದರಿಕೆ ಕರೆ ಹಾಕಿದ್ದನು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us