ಹಾಸನದ ಜಿಲ್ಲಾ ಕಾರಾಗೃಹದ ಕೈದಿಗಳಿಗೆ ಗಾಂಜಾ ಸಪ್ಲೈ ಮಾಡಲು ಸೇಬು, ಮೋಸಂಬಿ ತಂದಿದ್ದ ಮೂವರು ಆರೋಪಿಗಳು ಅರೆಸ್ಟ್
ಸೇಬು ಹಾಗೂ ಮೋಸಂಬಿ ಹಣ್ಣಿನ ಒಳಗೆ ಗಾಂಜಾ ಸೊಪ್ಪು ಇಟ್ಟು ಹಣ್ಣುಗಳನ್ನು ಜೈಲಿನ ಕಾಂಪೌಂಡ್ ಒಳಗಡೆಗೆ ಎಸೆಯಲು ಪ್ರಯತ್ನಿಸಿದ ಮೂವರು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ನಗರ ಠಾಣೆ ಸಿಬ್ಬಂದಿ ವಶಕ್ಕೆ ಪಡೆದು ಆರೋಪಿಗಳ ಬಳಿಯಿದ್ದ ಬ್ಯಾಗ್ ಪರಿಶೀಲಿಸಿದಾಗ ಗಾಂಜಾ ತುಂಬಿದ್ದ 3 ಸೇಬು ಮತ್ತು 2 ಮೋಸುಂಬಿ ಹಣ್ಣು ಪತ್ತೆಯಾಗಿದೆ.
ಹಾಸನ, ಸೆ.05: ತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದ ಕೈದಿಗಳಿಗೆ(Hassan District jail) ಗಾಂಜಾ ಸಪ್ಲೈ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದ ಮೂವರು ಕಿಲಾಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸೇಬು ಹಾಗೂ ಮೋಸಂಬಿ ಹಣ್ಣಿನ ಒಳಗೆ ಗಾಂಜಾ(Ganja) ಸೊಪ್ಪು ಇಟ್ಟು ಹಣ್ಣುಗಳನ್ನು ಜೈಲಿನ ಕಾಂಪೌಂಡ್ ಒಳಗಡೆಗೆ ಎಸೆಯಲು ಪ್ರಯತ್ನಿಸಿದ ಮೂವರು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಂಬೇಡ್ಕರ್ ನಗರದ ತರಕಾರಿ ವ್ಯಾಪಾರಿ ತಬ್ರೇಜ್(28), ಪೆನ್‌ಷನ್ ಮೊಹಲ್ಲಾದ ಗುಜರಿ ಅಂಗಡಿ ವ್ಯಾಪಾರಿ ವಾಸಿಂ(21), ರಕೀಬ್ ಬಂಧಿತ ಆರೋಪಿಗಳು.
ಸೇಬು ಹಾಗೂ ಮೂಸಂಬಿ ಹಣ್ಣನ್ನು ಕೊರೆದು ಅದರೊಳಗೆ ಗಾಂಜಾ ಸೊಪ್ಪನ್ನು ಇಟ್ಟು ಕೈದಿಗಳಿಗೆ ಸಪ್ಲೈ ಮಾಡಲು ಈ ಮೂವರು ಆರೋಪಿಗಳು ಹೊಂಚು ಹಾಕುತ್ತಿದ್ದರು. ಜೈಲಿನ ಹಿಂಬದಿಯಿಂದ ಕಾಂಪೌಂಡ್ ಒಳಗೆ ಗಾಂಜಾದ ಸೊಪ್ಪು ತುಂಬಿದ ಹಣ್ಣುಗಳನ್ನು ಎಸೆಯಲು ಹೊಂಚು ಹಾಕುತ್ತ ಜೈಲಿನ ಸಮೀಪದ ಹಳೇಬಸವಣ್ಣ ವೃತ್ತದ ಬಳಿ ಆರೋಪಿಗಳು ಅತ್ತಿಂದಿತ್ತ ಓಡಾಡುತ್ತಿದ್ದರು. ಈ ವೇಳೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ನಗರ ಠಾಣೆ ಸಿಬ್ಬಂದಿ ವಶಕ್ಕೆ ಪಡೆದು ಆರೋಪಿಗಳ ಬಳಿಯಿದ್ದ ಬ್ಯಾಗ್ ಪರಿಶೀಲಿಸಿದಾಗ ಗಾಂಜಾ ತುಂಬಿದ್ದ 3 ಸೇಬು ಮತ್ತು 2 ಮೋಸುಂಬಿ ಹಣ್ಣು ಪತ್ತೆಯಾಗಿದೆ. ಹೊಸ ಐಡಿಯಾ ಮೂಲಕ ಜೈಲ್‌ನೊಳಗೆ ಗಾಂಜಾ ಸಪ್ಲೈ ಮಾಡಲು ಯತ್ನಿಸುತ್ತಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದೆ ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿ ಮೊಬೈಲ್, ಗಾಂಜಾ ವಶಪಡಿಸಿಕೊಂಡಿದ್ದರು. ದಾಳಿ ಬೆನ್ನಲ್ಲೆ ಜೈಲಿನ ಸೂಪರಿಂಟೆಂಡೆಂಟ್ ಸೇರಿ ನಾಲ್ವರು ಅಧಿಕಾರಿಗಳು ಅಮಾನತ್ತಗೊಂಡಿದ್ದರು.
ಇದನ್ನೂ ಓದಿ: ರಾತ್ರಿ ಯಾವ್ದೋ ಆಟೋ ಸಿಕ್ತು ಎಂದು ಓಡಿ ಬಂದು ಹತ್ತಿದ ಮಹಿಳೆ, ಚಾಲಕ ಹಾಗೂ ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ
ಬೆಂಗಳೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಅರೆಸ್ಟ್
ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಿದ್ದು ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಎಂಡಿಎಂಎ ಮಾರಾಟ ಮಾಡ್ತಿದ್ದ ಓರ್ವ ಡ್ರಗ್ ಪೆಡ್ಲರ್ನನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಳಿಯಿಂದ 1.5 ಲಕ್ಷ ಮೌಲ್ಯದ 55 ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿದೆ.
ಇನ್ನು ಸೆಪ್ಟೆಂಬರ್ 1ರಂದು ಹುಳಿಮಾವು ಪೊಲೀಸರು ಇಬ್ಬರು ನೈಜೀರಿಯನ್ ಪ್ರಜೆಗಳನ್ನ ಬಂಧಿಸಿದ್ದರು. ಹುಚೇನಾ ಲಿವಿನೇಸ್ ಹಾಗು ಇಮ್ಯಾನ್ಯುಯೆಲ್ಲ್ ಎಂಬಿಬ್ಬರನ್ನ ಬಂಧಿಸಿ 1 ಕೋಟಿ 20 ಲಕ್ಷ ಮೌಲ್ಯದ ಎಕ್ಸ್ಟೆಸಿ ಟ್ಯಾಬ್ಲೇಟ್ ಹಾಗೂ ಎಂಡಿಎಂಎ ವಶಕ್ಕೆ ಪಡೆದಿದ್ದರು. ಈ ಇಬ್ಬರೂ ಆರೋಪಿಗಳು ಓದೋದಕ್ಕೆಂದು ಸ್ಟೂಡೆಂಟ್ ವೀಸಾದಲ್ಲಿ ಭಾರತಕ್ಕೆ ಬಂದು ಇಲ್ಲಿಯೇ ನೆಲಸಿ ಡ್ರಗ್ ಪೆಡ್ಲಿಂಗ್ ಮಾಡ್ತಿದ್ದರು. ಡ್ರಗ್ಸ್ ನಿಂದ ಬಳ್ಳೆ ಹಣ ಮಾಡಬಹುದು ಎಂಬ ಕಾರಣಕ್ಕೆ ವೀಸಾ ಅವಧಿ ಮುಗಿದರೂ ಕೂಡ ಭಾರತ ಬಿಟ್ಟು ಹೊರಹೋಗದ ತಮ್ಮದೇ ಆದಂತಹ ಟ್ರೂಪ್ಗಳನ್ನ ಸೃಷ್ಟಿಸಿಕೊಂಡು ಡ್ರಗ್ಸ್ ಸೇಲ್ ಮಾಡ್ತಿದ್ದರು. ಕೆಲವೊಂದು ಜಾಗದಲ್ಲಿ ಡ್ರಗ್ಸ್ಗಳನ್ನ ಇಟ್ಟು ಹಣ ಬಂದ ಬಳಿಕ ಅದರ ಲೊಕೇಷನ್ ಕಳಿಸುತ್ತಿದ್ರು. ಇನ್ನು ಈ ಡ್ರಗ್ ನ್ನು ಸ್ವತಃ ನೈಜೀರಿಯನ್ ಪ್ರಜೆಗಳಾದ ಇಮ್ಯಾನುವಲ್ ಹಾಗು ಹುಚೇನಾ ಲಿವಿನೆಸ್ ಹೋಗಿ ಡ್ರಗ್ಸ್ ಗಳನ್ನ ಬಚ್ಚಿಡುತ್ತಿದ್ದರು. ಸದ್ಯ ಅರೆಸ್ಟ್ ಆಗಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ