ಚಿಕ್ಕೋಡಿ, ಮಾರ್ಚ್ 09: ನಿಪ್ಪಾಣಿ ಪಟ್ಟಣದ (Nippani) ಶ್ರೀರಾಮ ಮಂದಿರವನ್ನು (Sri Ram Mandir) ಸ್ಫೋಟಿಸುತ್ತೇವೆ, ಸುಧಾರಿಸಿಕೊಳ್ಳಿ ಎಂದು ಅಲ್ಲಾ ಹು ಅಕ್ಬರ್ ಹೆಸರಿನಲ್ಲಿ ದುಷ್ಕರ್ಮಿಗಳು ಬೆದರಿಕೆ ಪತ್ರ (Bomb Threat Letter) ಬರೆದಿದ್ದಾರೆ. ಕಳೆದ ತಿಂಗಳು ಫೆಬ್ರವರಿ 7 ಹಾಗೂ 28 ರಂದು ಹಿಂದಿ ಭಾಷೆಯಲ್ಲಿ ಎರಡು ಪತ್ರಗಳು ಬಂದಿದ್ದು, ಮುಂದಿನ 20, 21 ತಾರೀಖಿನ ಒಳಗಡೆ ರಾಮ ಮಂದಿರವನ್ನ ದೊಡ್ಡ ಪ್ರಮಾಣದಿಂದ ಸ್ಪೋಟಿಸುತ್ತೇವೆ. ಎಂದು ಅನಾಮಧೇಯ ವ್ಯಕ್ತಿಗಳು ಪತ್ರ ಬರೆದಿದ್ದಾರೆ. ದುಷ್ಕರ್ಮಿಗಳ ಪತ್ರ ಸದ್ಯ ಸಂಚಲನ ಸೃಷ್ಟಿಸಿದೆ.
ಶ್ರೀರಾಮ ಮಂದಿರ 101 ವರ್ಷಗಳ ಇತಿಹಾಸ ಹೊಂದಿದೆ. ಮೊದಲನೆಯ ಪತ್ರ ರಾಮ ಮಂದಿರ ಗರ್ಭ ಗುಡಿಯಲ್ಲಿ ಪತ್ತೆಯಾಗಿದೆ. ಎರಡೆನೇ ಪತ್ರ ಮಂದಿರದ ಆವರಣದ ಹನುಮಾನ ಮಂದಿರದಲ್ಲಿ ಪತ್ತೆಯಾಗಿವೆ. ಬೆದರಿಕೆ ಪತ್ರ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಪೋಲಿಸ್ ಹೈ ಅಲರ್ಟ್ ಆಗಿದ್ದು, ಮಂದಿರದ ಆವರಣದಲ್ಲಿ 14 ಸಿಸಿಟಿವಿಗಳನ್ನು ಅಳವಡಿಸಿಲಾಗಿದೆ. ಒಂದು ಡಿಆರ್ ಪೋಲಿಸ್ ತುಕಡಿಯನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ. ನಿಪ್ಪಾಣಿ ಶಹರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಬೆಂಗಳೂರು ‘ಸ್ಫೋಟ’ಕ ಸುದ್ದಿ: ಕೆಫೆಯಲ್ಲಿ ಬಾಂಬ್ ಇಟ್ಟವನಿಗೆ ಇದ್ಯಾ ಇ-ಮೇಲ್ ನಂಟು?
ಕೆಲ ದಿನಗಳ ಹಿಂದೆ 2.5 ಮಿಲಿಯನ್ ಡಾಲರ್ ಕೊಟ್ಟಿಲ್ಲ ಅಂದರೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರನ್ನು ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್ ಬಂದಿತ್ತು. ಹಾಗೆ ಬಸ್ , ರೈಲು ನಿಲ್ದಾಣ ಸೇರಿದಂತೆ ಹಲವಾರು ಕಡೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು.
ಸರಿಯಾಗಿ ಎಂಟು ದಿನಗಳ ಹಿಂದೆ ಮಾರ್ಚ್ 01 ರಂದು ಬೆಂಗಳೂರಿನ ವೈಟ್ಫೀಲ್ಡ್ ಬಳಿಯ ಕುಂದಹಳ್ಳಿಯಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಪ್ರಕರಣದ ತನಿಖೆಯನ್ನು ಎನ್ಐಎ ಅಧಿಕಾರಿಗಳು ನಡೆಸುತ್ತಿತ್ತು, ಆರೋಪಿ ಜಾಡು ಹಿಡಿದು ಹೊರಟಿದ್ದಾರೆ. ಸದ್ಯ ಅಧಿಕಾರಿಗಳು ಆರೋಪಿಗಾಗಿ ಕಲಬುರಗಿ ಜಿಲ್ಲೆಯಲ್ಲಿ ತಲಾಷ್ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:48 pm, Sat, 9 March 24