ಬೆಂಗಳೂರು ‘ಸ್ಫೋಟ’ಕ ಸುದ್ದಿ: ಕೆಫೆಯಲ್ಲಿ ಬಾಂಬ್‌ ಇಟ್ಟವನಿಗೆ ಇದ್ಯಾ ಇ-ಮೇಲ್ ನಂಟು?

ಕಳೆದ ಕೆಲ ತಿಂಗಳ ಹಿಂದೆ ಬೆಂಗಳೂರಿನ ಶಾಲೆಗಳು, ಮೂಸಿಯಂಗಳು ಮತ್ತು ಉದ್ಯಮ ಕಟ್ಟಡಗಳಿಗೆ ಹುಸಿ ಬಾಂಬ್ ಇ-ಮೇಲ್​ಗಳು ಬಂದಿದ್ದವು. ಈ ಬೆನ್ನಲ್ಲೇ ಬೆನ್ನಲ್ಲೇ ರಾಮೇಶ್ವರಂ ಕೆಫೆನಲ್ಲಿ ಸ್ಫೋಟ ಸಂಭವಿಸಿದೆ. ಹುಸಿ ಬಾಂಬ್ ಇ-ಮೇಲ್ ಹಿಂದೆ ಅಸಲಿ ಸ್ಫೋಟದ ಸಂಚು ನಡೆದಿತ್ತಾ ಎಂಬ ಅನುಮಾನ ಹುಟ್ಟಿಕೊಂಡಿದೆ.

ಬೆಂಗಳೂರು ‘ಸ್ಫೋಟ’ಕ ಸುದ್ದಿ: ಕೆಫೆಯಲ್ಲಿ ಬಾಂಬ್‌ ಇಟ್ಟವನಿಗೆ ಇದ್ಯಾ ಇ-ಮೇಲ್ ನಂಟು?
ರಾಮೇಶ್ವರಂ ಕೆಫೆ
Follow us
Jagadisha B
| Updated By: ವಿವೇಕ ಬಿರಾದಾರ

Updated on: Mar 03, 2024 | 12:11 PM

ಬೆಂಗಳೂರು, ಮಾರ್ಚ್​ 03: ಕಳೆದ ಕೆಲ ತಿಂಗಳ ಹಿಂದೆ ನಗರದ ಶಾಲೆಗಳು, ಮೂಸಿಯಂಗಳು ಮತ್ತು ಉದ್ಯಮ ಕಟ್ಟಡಗಳಿಗೆ ಹುಸಿ ಬಾಂಬ್ ಇ-ಮೇಲ್​ಗಳು (Fake Bomb Threat Call) ಬಂದಿದ್ದ ಬೆನ್ನಲ್ಲೇ ರಾಮೇಶ್ವರಂ ಕೆಫೆನಲ್ಲಿ ಸ್ಫೋಟ (Bengaluru Rameshwaram Cafe Bomb Blast) ಸಂಭವಿಸಿದೆ. ಹುಸಿ ಬಾಂಬ್ ಇ-ಮೇಲ್ ಹಿಂದೆ ಅಸಲಿ ಸ್ಫೋಟದ ಸಂಚು ನಡೆದಿತ್ತಾ ಎಂಬ ಅನುಮಾನ ಹುಟ್ಟಿಕೊಂಡಿದ್ದು, ಈ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.

ಕಳೆದ ಎರಡು ವರ್ಷದಲ್ಲಿ 20ಕ್ಕೂ ಹೆಚ್ಚು ಬಾರಿ ಹುಸಿ ಬಾಂಬ್ ಬೆದರಿಕೆ ಇ-ಮೇಲ್​ಗಳು ಬಂದಿದ್ದವು. ಆದರೆ ಈವರೆಗೂ ಇ-ಮೇಲ್ ಕಳಸಿದವರು ಯಾರು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಇ-ಮೇಲ್ ಸಂದೇಶದಿಂದ ಸ್ಥಳಗಳ ಪರಿಶೀಲನೆ ಆಯ್ತೇ ವಿನಃ ಇ-ಮೇಲ್ ಸಂದೇಶ ಕಳಿಸಿ ಆತಂಕ ಸೃಷ್ಟಿಸಿದವರು ಯಾರು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹುಸಿ ಸಂದೇಶವೆಂದು ಸುಮ್ಮನಾದ ಪೊಲೀಸರಿಗೆ ಹೋಟೆಲ್​ನಲ್ಲಿ ಸ್ಫೋಟ ಸಂಭವಿಸಿದ್ದು, ಶಾಕ್​ ನೀಡಿದೆ. ಇನ್ನು ಹುಸಿ ಬಾಂಬ್​ ಇ-ಮೇಲ್​ನ ಹಿಂದೆ ಶಂಕಿತ ಉಗ್ರರ ಕೈವಾಡವಿದೆಯಾ? ಶಂಕಿತ ಉಗ್ರರು ಪ್ರತಿ ಬಾರಿ ಹುಸಿ ಸಂದೇಶ ಕಳುಹಿಸಿ ಕಾಣಾದಂತೆ ಅಸಲಿ ಸ್ಫೋಟಕ್ಕೆ ಸಂಚು ರೂಪಿಸಿದರಾ? ಎಂಬ ಪ್ರಶ್ನೆಗಳು ಉದ್ಭವವಾಗಿವೆ.

ರಾಮೇಶ್ವರಂ ಕೆಫೆಯಲ್ಲೇ ಬಾಂಬ್ ಇಟ್ಟಿದ್ದು ಯಾಕೆ?

ರಾಮೇಶ್ವರಂ ಕೆಫೆ ಬೆಂಗಳೂರಿನ ಹೊರಭಾಗವಾದ ವೈಟ್​ಫಿಲ್ಡ್​​ನಲ್ಲಿದೆ. ವೈಟ್​ಫಿಲ್ಡ್​​ ಹೊಸೂರಿಗೆ ಹತ್ತಿರದಲ್ಲಿದೆ. ಹೊಸೂರು ಗಡಿ ಭಾಗವಾಗಿದ್ದು, ಕರ್ನಾಟಕ ಮತ್ತು ತಮಿಳನಾಡು ಗಡಿಯಲ್ಲಿದೆ. ರಾಮೇಶ್ವರಂ ಕೆಫೆಯಿಂದ ಹೊಸೂರು ಗಡಿಗೆ ಹೋಗಲು 59 ನಿಮಿಷಗಳು ಬೇಕು. ಒಂದು ವೇಳೆ ಸಂಚಾರ ದಟ್ಟಣೆ ಇದ್ದರೂ 1 ಗಂಟೆ 15 ನಿಮಿಷದಲ್ಲಿ ತಲುಪಬಹುದು. ಹೀಗಾಗಿ ಒಂದೂವರೆ ಗಂಟೆಯಲ್ಲಿ ಬೆಂಗಳೂರು ಬಿಟ್ಟು ಹೊರ ಹೋಗಲು ಆರೋಪಿ ಫ್ಲಾನ್​ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್​: ಉದ್ಯಮದಲ್ಲಿ ಬೆಳವಣಿಗೆ ಸಹಿಸದೆ, ಬೆಂಗಳೂರು ಅನ್​ಸೇಫ್​ ಅಂತ ಸೃಷ್ಟಿಸಲು ಈ ರೀತಿ ಮಾಡಿರಬಹುದು; ಪರಮೇಶ್ವರ್​​

ಅದರಂತೆ ಒಂದೂವರೆ ಗಂಟೆ ಟೈಂ ಇಟ್ಟುಕೊಂಡು ಟೈಮರ್ ಫಿಕ್ಸ್ ಮಾಡಿರುವ ಸಾಧ್ಯತೆ ಇದೆ. ಬ್ಲಾಸ್ಟ್ ಆದ ಬಳಿಕ ಪೊಲೀಸರು ಸ್ಥಳಕ್ಕೆ ಬರಲು ಕನಿಷ್ಟ 10 ನಿಮಿಷಗಳು ಬೇಕು. ಬಳಿಕ ಎಲ್ಲ ಕಡೆ ಅಲರ್ಟ್ ಮಾಡಲು ಅರ್ಧ ಗಂಟೆ ತೆಗೆದುಕೊಳ್ಳುತ್ತಾರೆ. ಪೊಲೀಸರು ನಗರದಾದ್ಯಂತ ಅಲರ್ಟ್ ಆಗುವಷ್ಟರಲ್ಲಿ ಗಡಿ ದಾಟುವ ಫ್ಲಾನ್ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಒಂದು ವೇಳೆ ನಗರದೊಳಗೆ ಬ್ಲಾಸ್ಟ್ ಆಗಿದ್ದರೇ ಅಲ್ಲಿಂದ ಪರಾರಿಯಾಗಲು ಸಮಯ ಬೇಕು. ಎಲ್ಲ ಕಡೆ ಅಲರ್ಟ್ ಆಗಿ ಗಡಿಯಲ್ಲಿ ನಾಕಾಬಂದಿ ಹಾಕಿದರೇ ಸಿಕ್ಕಿ ಹಾಕಿಕೊಳ್ಳುವ ಭಯ ಇರುತ್ತದೆ. ಹೀಗಾಗಿ ಗಡಿ ದಾಟಿದ ಬಳಿಕ ನಾಕಾಬಂದಿ ಹಾಕಿದರೂ ನಾನು ಸಿಗುವುದಿಲ್ಲವೆಂದು ಆರೋಪಿ ಫ್ಲಾನ್ ಮಾಡಿದ್ದಾನೆ. ಆರೋಪಿ ಪ್ರತಿ ಹೆಜ್ಜೆ ಹೆಜ್ಜೆಗೂ ಮಾಸ್ಟರ್ ಪ್ಲಾನ್ ಮಾಡಿರುವಂತಿದೆ.

ಸದ್ಯ ರಾಮೇಶ್ವರಂ ಕೆಫೆಯಿಂದ ತಮಿಳುನಾಡು ಗಡಿವರೆಗಿನ ಎಲ್ಲ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಕೆಫೆಯಿಂದ ವೈಟ್​ಫೀಲ್​ ಕಡೆಗೆ ಹೋಗಿರುವ ಬಗ್ಗೆ ಮಾಹಿತಿ ಬಂದಿದೆ. ಬಳಿಕ ಅಲ್ಲಿಂದ ಚೆನ್ನಸಂದ್ರ ಮೂಲಕ ಸರ್ಜಾಪುರ, ಅತ್ತಿಬೆಲೆ ಮೂಲಕ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಈ ಎಲ್ಲಾ ಮಾರ್ಗಗಳಲ್ಲಿನ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಜೊತೆಗೆ ತಮಿಳುನಾಡು, ಕೇರಳಾ ಪೊಲೀಸರ ಜೊತೆಯೂ ನಗರ ಪೊಲೀಸರು ಸಂಪರ್ಕದಲ್ಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ