V D Savarkar portrait: ಸಿದ್ದರಾಮಯ್ಯನವರೇ, ಸಾವರ್ಕರ್ ಬದಲು ದಾವೂದ್ ಇಬ್ರಾಹಿಂ ಫೋಟೋ ಹಾಕಿದರೆ ನಿಮಗೆ ಸಮಾಧಾನ ಆಗುತ್ತಾ? ಕೇಂದ್ರ ಸಚಿವ ಜೋಶಿ ಖಡಕ್ ಪ್ರಶ್ನೆ
V D Savarkar portrait: ಸ್ವಾತಂತ್ರ್ಯವೀರ ವೀರ್ ಸಾವರ್ಕರ್ ಅವರ ಭಾವಚಿತ್ರ ಅನಾವರಣ ಮಾಡಿದ್ದಕ್ಕೆ ವಿರೋಧಿಸುವ ಸಿದ್ದರಾಮಯ್ಯನವರೇ, ಸಾವರ್ಕರ್ ಬದಲು ದಾವೂದ್ ಇಬ್ರಾಹಿಂ ಫೋಟೋ ಹಾಕಿದರೆ ನಿಮಗೆ ಸಮಾಧಾನ ಆಗುತ್ತಾ..? ಸಿದ್ದರಾಮಯ್ಯಗೆ ಕೇಂದ್ರ ಸಚಿವ ಜೋಶಿ ಖಡಕ್ ಪ್ರಶ್ನೆ
ಸ್ವಾತಂತ್ರ್ಯವೀರ ವೀರ್ ಸಾವರ್ಕರ್ ಅವರ ಭಾವಚಿತ್ರ ಅನಾವರಣ (V D Savarkar portrait) ಮಾಡಿದ್ದಕ್ಕೆ ವಿರೋಧಿಸುವ ಸಿದ್ದರಾಮಯ್ಯನವರೇ (CLP leader Siddaramaiah), ಸಾವರ್ಕರ್ ಬದಲು ದಾವೂದ್ ಇಬ್ರಾಹಿಂ ಫೋಟೋ ಹಾಕಿದರೆ ನಿಮಗೆ ಸಮಾಧಾನ ಆಗುತ್ತಾ..? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಖಡಕ್ ಪ್ರಶ್ನೆ ಕೇಳಿದ್ದಾರೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi).
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿಂದು (Suvarna Vidhana Soudha) ಸ್ವಾತಂತ್ರ್ಯ ವೀರ ವಿ.ಡಿ. ಸಾವರ್ಕರ್ ಅವರ ಭಾವಚಿತ್ರ ಅನಾವರಣ ಮಾಡಿದ್ದನ್ನು ವಿರೋಧಿಸುತ್ತಿರುವ ಸಿದ್ದರಾಮಯ್ಯಗೆ ಈ ಮೂಲಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ತಿರುಗೇಟು ನೀಡಿದ್ದಾರೆ.
वीर सावरकर के साथ आपके वैचारिक मतभेद हो सकते हैं, लेकिन आप इस तथ्य को झुठला नहीं सकते कि वे एक अप्रतिम देशभक्त थे, जिन्होंने कई सालों तक अंडमान में सेल्युलर जेल में प्रताड़ना झेली थी। देश के स्वतंत्रता आंदोलन में भाग लेने वाली कांग्रेस और थी, आज की कांग्रेस तो ‘डुप्लीकेट’ है। pic.twitter.com/FGBeKrVC3w
— Pralhad Joshi (@JoshiPralhad) December 19, 2022
ಸ್ವಾತಂತ್ರ್ಯ ವೀರ ಸಾವರ್ಕರ್ ಬಗ್ಗೆ ಕಾಂಗ್ರೆಸಿಗರಿಗೆ ರಾಜಕೀಯ ಸಿದ್ಧಾಂತದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಆದರೆ ರಾಷ್ಟ್ರಾಭಿಮಾನವನ್ನು ರಕ್ತದ ಕಣಕಣದಲ್ಲೂ ಮೈಗೂಡಿಸಿಕೊಂಡಿದ್ದ ವೀರ ಸಾವರ್ಕರ್ ಅವರು ಅಂಡಮಾನ್ ಸೆಲ್ಯುಲರ್ ಜೈಲಿನಲ್ಲಿ ಅನುಭವಿಸಿದ ಶಿಕ್ಷೆಯನ್ನ ಬೇರೆಯವರು ಯಾರೂ ಸಹ ಕಲ್ಪಿಸಿಕೊಳ್ಳೋದು ಅಸಾಧ್ಯ. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿದ್ದ ಕಾಂಗ್ರೆಸ್‌ಗೂ ಈಗಿರುವ ಕಾಂಗ್ರೆಸ್ ಪಕ್ಷಕ್ಕೂ ಭಾರೀ ವ್ಯತ್ಯಾಸವಿದೆ. ಈಗ ಇರುವುದು ಡೂಪ್ಲಿಕೇಟ್ ಕಾಂಗ್ರೆಸ್ ಎಂದು ಪ್ರಲ್ಹಾದ ಜೋಶಿಯವರು ವಾಗ್ದಾಳಿ ನಡೆಸಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:55 pm, Mon, 19 December 22