AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿ ಭಾಗದ ಕನ್ನಡ ಶಾಲೆಗಳ ಅಭಿವೃದ್ಧಿಗೆ 100 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ: ಸಿಎಂ ಬೊಮ್ಮಾಯಿ ಘೋಷಣೆ

ಕನ್ನಡಿಗರ ರಕ್ಷಣೆ, ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ. ಗಡಿ ಭಾಗದ ಕನ್ನಡ ಶಾಲೆಗಳ ಅಭಿವೃದ್ಧಿಗೆ 100 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಗಡಿ ಭಾಗದ ಕನ್ನಡ ಶಾಲೆಗಳ ಅಭಿವೃದ್ಧಿಗೆ 100 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ: ಸಿಎಂ ಬೊಮ್ಮಾಯಿ ಘೋಷಣೆ
ಸಿಎಂ ಬೊಮ್ಮಾಯಿ
TV9 Web
| Edited By: |

Updated on: Dec 02, 2022 | 4:28 PM

Share

ಬೆಳಗಾವಿ: ಕನ್ನಡಿಗರ ರಕ್ಷಣೆ, ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ. ಗಡಿ (border) ಭಾಗದ ಕನ್ನಡ ಶಾಲೆಗಳ ಅಭಿವೃದ್ಧಿಗೆ 100 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಭಾಷಣದ ಆರಂಭಕ್ಕೂ ಮುನ್ನ ಸಿಎಂ ಬೊಮ್ಮಾಯಿ ಜೈ ಶ್ರೀರಾಮ ಘೋಷಣೆ ಕೂಗಿದರು. ಈ ಹೆಸರಿಗೆ ಜನಪ್ರಿಯ ಬಹಳ ಆಗಿದ್ದಾರೆ. ಕೆಳಮಟ್ಟದಲ್ಲಿ ಬಹುತೇಕ ಯಾರೂ ಕೆಲಸ ಮಾಡೋದಿಲ್ಲ. ಆದರೆ ಜನರ ಸಮಸ್ಯೆ ಅರಿಯುವವರು ಬೇಕಾಗಿದ್ದಾರೆ ಎಂದರು. ಸರ್ಕಾರ ಜನಪ್ರಿಯವಾದರೆ ಸಾಲದು. ಜನಪರ ಸರ್ಕಾರವೂ ಬೇಕಾಗುತ್ತದೆ. ಜನಪರ ಸರ್ಕಾರ ಇದ್ದಾಗ ಮಾತ್ರ ತಾಲೂಕಿನ ಕಡೆಯ ಜನರಿಗೆ ಅಭಿವೃದ್ಧಿ ಆಗುತ್ತದೆ ಎಂದರು.

ಕರ್ನಾಟಕದ ಮಧ್ಯಭಾಗದಿಂದ ಗಡಿಭಾಗಕ್ಕೂ ಅಭಿವೃದ್ಧಿ ಮುಟ್ಟಿಸುವ ಕೆಲಸ ಮಾಡುತ್ತಿದ್ದೇವೆ. ಬೀದರ, ಕಲಬುರ್ಗಿ, ಯಾದಗಿರಿ ಕಲ್ಯಾಣ ಕರ್ನಾಟಕದ ಗಡಿ ಭಾಗಗಳು. ಹಾಗೇಯೆ ಬೆಳಗಾವಿ, ವಿಜಯಪುರ ಜಿಲ್ಲೆಯಲ್ಲಿ ಗಡಿ ಗ್ರಾಮಗಳಿವೆ. ಮಹಾರಾಷ್ಟ್ರ, ಆಂಧ್ರ, ಕೇರಳ, ತಮಿಳುನಾಡು ಭಾಗದಲ್ಲಿ ಗಡಿ ಗ್ರಾಮಗಳಿವೆ. ಇವುಗಳ ಅಭಿವೃದ್ಧಿಗೆ ಈ ಬಜೆಟ್‌ನಲ್ಲಿ ಒತ್ತು ಕೊಡಲಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ: ಡಿ.6ರಂದು ಬೆಳಗಾವಿಗೆ ಮಹಾರಾಷ್ಟ್ರ ಸಚಿವರು: ಪ್ರತಿಬಂಧಕಾಜ್ಞೆ ಹೊರಡಿಸುವ ಸುಳಿವು ಕೊಟ್ಟ ಬೊಮ್ಮಾಯಿ

75 ವರ್ಷ ಆಗದಿರುವುದನ್ನು ನಾವು ಎರಡು ವರ್ಷದಲ್ಲಿ ಮಾಡಿ ತೋರಿಸಿದ್ದೇವೆ:

ಗಡಿ ಭಾಗದ ಸಮಸ್ತ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿದ್ದೇವೆ. ಜಲ ಜೀವನ ಮಿಷನ್ ಅಡಿಯಲ್ಲಿ ಈ ವರ್ಷ ಗಡಿ ಭಾಗದ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇವೆ. 75 ವರ್ಷ ಆಗದೇ ಇರೋದನ್ನು ನಾವು ಎರಡು ವರ್ಷದ ಕೊವಿಡ್‌ನಲ್ಲಿ ಮಾಡಿ ತೋರಿಸಿದ್ದೇವೆ. ಆಕ್ಸಿಜನ್ ಕೊರತೆ ಆಗಿತ್ತು. ಅದನ್ನೂ ಸರಿಯಾಗಿ ನಿರ್ವಹಿಸಿದ್ದೇವೆ. ಕೊವಿಡ್ ಸುರಕ್ಷಾ ಚಕ್ರ ಒದಗಿಸಿದ್ದೇವೆ. ಯಡಿಯೂರಪ್ಪನವರು ಕೊವಿಡ್ ಸಮಯದಲ್ಲಿ‌ ಸಮರ್ಥವಾಗಿ ನಿಭಾಯಿಸಿದ್ದಾರೆ. ಕನ್ನಡಿಗರ ಹಿತ ಚಿಂತನೆ ಮಾಡುವಂಥ, ರಕ್ಷಣೆ ಮಾಡುವಂಥ, ಅಭಿವೃದ್ಧಿ ಮಾಡುವಂಥ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ‌.

ಅಭಿವೃದ್ಧಿ ನಿರಂತರವಾಗಿ ತಿರುಗಬೇಕಾದ ಪ್ರಗತಿಯ ಚಕ್ರ. ಗಡಿಯಿಂದ ಆಚೆಗೂ ನಮ್ಮವರಿದ್ದಾರೆ. ಅಲ್ಲಿನ ಕನ್ನಡದ ಶಾಲೆಗಳು ಅಲ್ಲಿನ ರಾಜ್ಯ ಸರ್ಕಾರಗಳ ಕಡೆಗಣನೆಯಿಂದ ಅಭಿವೃದ್ಧಿ ಆಗಿಲ್ಲ. ಮೂಲಭೂತ ಸೌಲಭ್ಯ ಕೊಟ್ಟಿಲ್ಲ. ಹೀಗಾಗಿ ಗಡಿ ಆಚೆ, ಗಡಿಯೊಳಗಿನ ಕನ್ನಡ ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಕೊಡುತ್ತೇವೆ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನೂರು ಕೋಟಿ ರೂ‌. ಕೊಟ್ಟಿದ್ದೇವೆ. ಇದೇ ವರ್ಷ ಅದನ್ನು ಖರ್ಚು ಮಾಡುತ್ತಿದ್ದೇವೆ. ಗೋವಾದಲ್ಲಿ ಹತ್ತು ಕೋಟಿ ರೂ. ದಲ್ಲಿ ಕನ್ನಡ ಭವನ ಮಾಡಲಿದ್ದೇವೆ. ಗೋವಾ ಸರ್ಕಾರಕ್ಕೆ ಜಾಗಕ್ಕಾಗಿ ಪತ್ರ ಬರೆದಿದ್ದೇವೆ. ಸೊಲ್ಲಾಪುರ, ಕಾಸರಗೋಡಿನಲ್ಲಿಯೂ 10 ಕೋಟಿ ರೂ‌. ದಲ್ಲಿ ಕನ್ನಡ ಭವನ ಮಾಡುತ್ತೇವೆ ಎಂದು ತಿಳಿಸಿದರು.

ಶಾಸಕ ಮಹಾದೇವಪ್ಪ, ಸಚಿವ ಗೋವಿಂದ ಕಾರಜೋಳರನ್ನು ಹೊಗಳಿದ ಸಿಎಂ ಬೊಮ್ಮಾಯಿ

ರಾಮದುರ್ಗ ಶಾಸಕ ಮಹಾದೇವಪ್ಪ ಬಹಳ ಬೆರಕಿ ಅದಾನ. ಸಚಿವ ಗೋವಿಂದ ಕಾರಜೋಳ ಬೆಲ್ಲ. ಇಬ್ಬರೂ ಅಭಿವೃದ್ಧಿ ಪರ ಇರುವವರು. ಟೋಪಿ ಧರಿಸುದ ತಕ್ಷಣ ಸಜ್ಜನ ಅಂತಾ ತಿಳಿದ್ದೇವೆ. ಒಂದು ಯೋಜನೆ ಮುಗಿಯುತ್ತಿದ್ದಂತೆಯೇ ಮತ್ತೊಂದು ಮನವಿ ಇಡುತ್ತಾರೆ. ಈಗ ಇಷ್ಟೆಲ್ಲ ಆದ ಮೇಲೆ 19 ಕೆರೆ ತುಂಬಿಸಿ ಅಂತಾ ಕೇಳಿದ್ದಾರೆ. ಗೋವಿಂದ ಕಾರಜೋಳ ಬೆಲ್ಲದಂತವರು ಯಾವ ಕಡೆ ಮುರಿದು ತಿಂದರು ಅವರು ಬೆಲ್ಲವೇ ಎಂದು ಸಿಎಂ ಬೊಮ್ಮಾಯಿ ಹೊಗಳಿದರು.

ಸದ್ಯ ರಾಜ್ಯದಲ್ಲಿ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಇದೆ. ಈಗ ರೈತ ಕೂಲಿಕಾರರಿಗೆ 6 ಲಕ್ಷ ಮಕ್ಕಳಿಗೆ ವಿದ್ಯಾನಿಧಿ ಕೊಡುತ್ತೇವೆ. ನೇಕಾರ, ಮೀನುಗಾರರು, ಟ್ಯಾಕ್ಸಿ ಡ್ರೈವರ್ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಕೊಡುತ್ತೇವೆ. 20 ಸಾವಿರ ಕುರಿಗಾಹಿ ಸಂಘಗಳಿಗೆ 350 ಕೋಟಿ ರೂ. ಅನುದಾನದ ಯೋಜನೆ ನೀಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.