ಸರ್ದಾರ್ ಮೈದಾನದಲ್ಲಿ ಕ್ರೀಡೆ ಬದಲು ರಾಜಕೀಯ ಚಟುವಟಿಕೆ ಶುರುವಾಗುತ್ತಾ?
ಬೆಳಗಾವಿ: ಅದು ಸರ್ಕಾರಿ ಮೈದಾನ. ಅಲ್ಲಿ ರಾಜಕೀಯ ಚಟುವಟಿಕೆ ಸೇರಿದಂತೆ ಯಾವುದಕ್ಕೂ ಅವಕಾಶವಿಲ್ಲ. ಆದ್ರೆ ಅಧಿಕಾರ ಇದೆ ಎಂಬ ಕಾರಣಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಪ್ಲೇ ಗ್ರೌಂಡ್‌ನಲ್ಲಿ ಪೊಲಿಟಿಕಲ್ ಗೇಮ್ ಆಡಲು ಹೋರಟಿರೋದು ಬೆಳಗಾವಿಯಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಹೌದು, ಬೆಳಗಾವಿಯ ಹೃದಯಭಾಗದಲ್ಲಿರುವ ಸರ್ದಾರ್ ಮೈದಾನ ಕೇವಲ ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಬಳಕೆ ಆಗಬೇಕು. ತಾನೇ ಮಾಡಿದ ನಿಯಮವನ್ನು ಬೆಳಗಾವಿ ಮಹಾನಗರ ಪಾಲಿಕೆ ಗಾಳಿಗೆ ತೂರುತ್ತಿದೆ. ಶಿಕ್ಷಣ ಇಲಾಖೆಯ ಆಸ್ತಿಯಾಗಿರುವ ಬೆಳಗಾವಿಯ ಸರ್ದಾರ್ ಮೈದಾನವವನ್ನು ಪಾಲಿಕೆ ವಿಶೇಷ ಅನುದಾನದಲ್ಲಿ […]

ಬೆಳಗಾವಿ: ಅದು ಸರ್ಕಾರಿ ಮೈದಾನ. ಅಲ್ಲಿ ರಾಜಕೀಯ ಚಟುವಟಿಕೆ ಸೇರಿದಂತೆ ಯಾವುದಕ್ಕೂ ಅವಕಾಶವಿಲ್ಲ. ಆದ್ರೆ ಅಧಿಕಾರ ಇದೆ ಎಂಬ ಕಾರಣಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಪ್ಲೇ ಗ್ರೌಂಡ್‌ನಲ್ಲಿ ಪೊಲಿಟಿಕಲ್ ಗೇಮ್ ಆಡಲು ಹೋರಟಿರೋದು ಬೆಳಗಾವಿಯಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, ಬೆಳಗಾವಿಯ ಹೃದಯಭಾಗದಲ್ಲಿರುವ ಸರ್ದಾರ್ ಮೈದಾನ ಕೇವಲ ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಬಳಕೆ ಆಗಬೇಕು. ತಾನೇ ಮಾಡಿದ ನಿಯಮವನ್ನು ಬೆಳಗಾವಿ ಮಹಾನಗರ ಪಾಲಿಕೆ ಗಾಳಿಗೆ ತೂರುತ್ತಿದೆ. ಶಿಕ್ಷಣ ಇಲಾಖೆಯ ಆಸ್ತಿಯಾಗಿರುವ ಬೆಳಗಾವಿಯ ಸರ್ದಾರ್ ಮೈದಾನವವನ್ನು ಪಾಲಿಕೆ ವಿಶೇಷ ಅನುದಾನದಲ್ಲಿ ಒಂದು ಕೋಟಿಗೂ ಹೆಚ್ಚು ಖರ್ಚು ಮಾಡಿ ಅಭಿವೃದ್ಧಿಪಡಿಸಿದೆ. ಮೈದಾನದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಿ ಕೆಲವೊಂದನ್ನ ಬಾಡಿಗೆಗೆ ನೀಡಿದೆ. ಇದರ ಮಧ್ಯೆ ಈ ಸಂಕೀರ್ಣದಲ್ಲಿ ಇನ್ನುಮುಂದೆ ಕ್ರೀಡಾ ಚಟುವಟಿಕೆ ಬದಲು ರಾಜಕೀಯ ಚಟುವಟಿಕೆ ಶುರುವಾಗಲಿದೆಯಾ ಎನ್ನುವ ಭಯ ಸ್ಥಳೀಯರಲ್ಲಿ ಶುರವಾಗಿದೆ.

ಸಿಎಂ ರಾಜಕೀಯ ಕಾರ್ಯದರ್ಶಿಯ ಪ್ರಭಾವ ಸರ್ದಾರ್ ಮೈದಾನದ ಕ್ರೀಡಾ ಸಂಕೀರ್ಣದಲ್ಲಿ ತಮ್ಮ ರಾಜಕೀಯ ಪ್ರಭಾವ ಬಳಸಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ್ ಕಚೇರಿ ಆರಂಭಿಸಲು ಹೊರಟ್ಟಿದ್ದಾರೆ. ಈ ಕಚೇರಿಯನ್ನು ಮಹಾನಗರ ಪಾಲಿಕೆಯೇ ನಿರ್ಮಿಸಿ ಕೊಡುತ್ತಿದೆ ಎಂಬ ಆಘಾತಕಾರಿ ವಿಷಯ ಈಗ ಬೆಳಗಾವಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಮೈದಾನ ಕ್ರೀಡಾ ಚಟುವಟಿಕೆಗೆ ಮಾತ್ರ ಸೀಮೀತವಾಗಬೇಕು ಎಂದು 2010 ರಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ನಿರ್ಧರಿಸಿತ್ತು. ಆಗಿನ ಪಾಲಿಕೆ ಆಡಳಿತಾಧಿಕಾರಿ ಆಗಿದ್ದ ಆಗಿನ ಜಿಲ್ಲಾಧಿಕಾರಿ ಜೆ. ರವಿಶಂಕರ್, ಸರ್ದಾರ್ ಮೈದಾನ ಕೇವಲ ಕ್ರೀಡಾ ಚಟುವಟಿಕೆಗೆ ಮಾತ್ರ ಸೀಮಿತ ಎಂದು ಆದೇಶ ಮಾಡಿದ್ದರು.

ತರಾತುರಿಯಲ್ಲಿ ಪಾಟೀಲ್‌ರಿಗೆ ಕಚೇರಿ ಆದರೆ ಮಹಾನಗರ ಪಾಲಿಕೆ ಮಾತ್ರ ತರಾತುರಿಯಲ್ಲಿ ಶಂಕರಗೌಡ ಪಾಟೀಲ ಅವರಿಗೆ ಕಚೇರಿ ಮಾಡಿಕೊಡಲು ಹೊರಟಿದೆ. ಕ್ರೀಡಾಂಗಣದಲ್ಲಿ ಶಂಕರಗೌಡ ಪಾಟೀಲರಿಗೆ ಬಿಎಂಪಿ ಕಚೇರಿ ಮಾಡಿ ಕೊಡುವದಾದರೆ, ಮೈದಾನದಲ್ಲಿ ಕ್ರೀಡಾ ಚಟುವಟಿಕೆ ಬಂದ್ ಮಾಡಿ ಇಡೀ ಮೈದಾನವನ್ನೇ ರಾಜಕೀಯ ನಾಯಕರಿಗೆ ಸಮರ್ಪಿಸಲಿ ಎಂದು ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗಾವಿ ಪಾಲಿಕೆ ಕ್ರಮಕ್ಕೆ ಸಾರ್ವಜನಿಕರ ಆಕ್ರೋಶ ಇವತ್ತು ಶಂಕರಗೌಡ ಪಾಟೀಲರಿಗೆ ಕಚೇರಿ ಮಾಡಿಕೊಟ್ಟರೆ, ನಾಳೆ ಇತರ ರಾಜಕೀಯ ನಾಯಕರು ಸರ್ದಾರ್ ಮೈದಾನದಲ್ಲಿ ಠಿಕಾಣಿ ಹೂಡುತ್ತಾರೆ. ಆಗ ಪಾಲಿಕೆಗೆ ಎನೂ ಮಾಡಲಾಗದಂಥ ಸ್ಥಿತಿ ಬರುತ್ತೆ. ರಾಜಕೀಯ ಕಾರ್ಯದರ್ಶಿ ಆಗಲಿ, ಯಾರೇ ಆಗಲಿ ಕ್ರೀಡೆಗೆಂದು ಮೀಸಲಿಟ್ಟ ಮೈದಾನದಲ್ಲಿ ಪ್ರಭಾವ ಬಳಸಿಕೊಂಡು ಕಚೇರಿ ಮಾಡಲು ಹೊರಟ್ಟಿದ್ದು ಸರಿಯಲ್ಲ. ಪಾಲಿಕೆ ಮಾಡಿದ್ದ ನಿಯಮಗಳನ್ನ ಅವರೇ ಬ್ರೇಕ್ ಮಾಡುತ್ತಿರುವುದರ ಹಿಂದಿನ ಉದ್ದೇಶವಾದ್ರೂ ಏನೂ ಬೆಳಗಾವಿ ಜನತೆ ಆಕ್ರೋಶದಿಂದ ಕೇಳುತ್ತಿದ್ದಾರೆ. -ಸಹದೇವ ಮಾನೆ



