ದೇಶಪ್ರೇಮ, ದೇಶ ಭಕ್ತಿ ಬರೀ ಭಾಷಣಕ್ಕೆ ಸೀಮಿತವಾಗಿದೆ, ಅಧಿಕಾರದಲ್ಲಿರುವವರು ಸ್ವಾತಂತ್ರ್ಯಕ್ಕೆ ಹೋರಾಡಿದ್ರಾ? ಬಿಜೆಪಿಗೆ ಸಿಎಂ ಟಾಗ್
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಉತ್ಸವದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದೇಶಪ್ರೇಮ, ದೇಶ ಭಕ್ತಿ ಬರೀ ಭಾಷಣಕ್ಕೆ ಸೀಮಿತವಾಗಿದೆ. ಇಂದು ಅಧಿಕಾರದಲ್ಲಿರುವವರು ಸ್ವಾತಂತ್ರ್ಯಕ್ಕೆ ಹೋರಾಡಿದರಾ ಎಂದು ಪರೋಕ್ಷವಾಗಿ ಬಿಜೆಪಿಯವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಬೆಳಗಾವಿ, ಜನವರಿ 17: ದೇಶಪ್ರೇಮ, ದೇಶ ಭಕ್ತಿ ಬರೀ ಭಾಷಣಕ್ಕೆ ಸೀಮಿತವಾಗಿದೆ. ಇಂದು ಅಧಿಕಾರದಲ್ಲಿರುವವರು ಸ್ವಾತಂತ್ರ್ಯಕ್ಕೆ ಹೋರಾಡಿದ್ರಾ? ಅವರು ಎಂದಾದರೂ ತ್ಯಾಗ, ಬಲಿದಾನ ಮಾಡಿದ್ದಾರೆಯೇ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಉತ್ಸವದಲ್ಲಿ ಮಾತನಾಡಿದ ಅವರು, ಸಿಪಾಯಿ ದಂಗೆಗೂ ಮೊದಲು ಟಿಪ್ಪು ಸುಲ್ತಾನ್, ವೆಂಕಟಪ್ಪ ನಾಯಕ, ಕಿತ್ತೂರು ಚೆನ್ನಮ್ಮ, ರಾಯಣ್ಣ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಇದನ್ನು ನಾವು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಯವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಸರ್ಕಾರದ ವತಿಯಿಂದ ಸೈನಿಕ ಶಾಲೆ
ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಸೈನಿಕ ಶಾಲೆಯನ್ನ ಸರ್ಕಾರ ನಿರ್ಮಿಸಿದೆ. ಯುವಕ, ಯುವತಿಯರಿಗೆ ರಾಯಣ್ಣ ಸೈನಿಕ ಶಾಲೆ ಸ್ಫೂರ್ತಿಯಾಗಬೇಕು. ದೇಶಭಕ್ತಿಯಿಂದ ವಿಮುಕ್ತರಾಗಬಾರದು ಎಂದು ಸೈನಿಕ ಶಾಲೆ ಸ್ಥಾಪನೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಾಧಿಕಾರ ರಚನೆ ಬಳಿಕ ರಾಯಣ್ಣ ಹೆಸರು ಶಾಶ್ವತವಾಗಿ ಇರಬೇಕು. ಪ್ರಾಧಿಕಾರಕ್ಕೆ ಅಂದು ನಮ್ಮ ಸರ್ಕಾರ 100 ಎಕರೆ ಜಮೀನು ನೀಡಿತ್ತು ಎಂದು ಹೇಳಿದ್ದಾರೆ.
ಸಂಗೊಳ್ಳಿ ರಾಯಣ್ಣ ಶೌರ್ಯವಂತ, ಶೂರನಾಗಿದ್ದರು, ದೇಶ ಭಕ್ತಿ ಇಟ್ಟುಕೊಂಡಿದ್ದರು. 267 ಕೋಟಿ ರೂ. ಖರ್ಚು ಮಾಡಿ ಸೈನಿಕ ಶಾಲೆ, ರಾಕ್ ಗಾರ್ಡನ್, ಸಮಾಧಿ ಅಭಿವೃದ್ಧಿ ಮಾಡಲಾಗಿದೆ. 2018ರಲ್ಲಿ ಘೋಷಣೆ ಮಾಡಿ ನಾನೇ ಇಲ್ಲಿಗೆ ಬಂದು ಶಂಕುಸ್ಥಾಪನೆ ನೆರವೇರಿಸಿದ್ದೆ. ಈಗ 230 ವಿದ್ಯಾರ್ಥಿಗಳು ಈಗ ಕಲಿಯುತ್ತಿದ್ದು ಬಹಳ ಸಂತೋಷ ಆಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ನೇತೃತ್ವದಲ್ಲಿ ಲೋಕಸಭೆ ಚುನಾವಣೆ: ಡಿಕೆ ಶಿವಕುಮಾರ್ ಘೋಷಣೆ
ಸಂಗೊಳ್ಳಿ ರಾಯಣ್ಣ ಬಹಳ ಓದಿದವರು ಅಲ್ಲಾ. ತಾಯಿ ನಾಡಿನ ಬಗ್ಗೆ ಪ್ರೀತಿ ಇತ್ತು, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ. ಮೊದಲ ಯುದ್ದದಲ್ಲಿ ಗೆದ್ದು ಎರಡನೇ ಯುದ್ದದಲ್ಲಿ ರಾಯಣ್ಣ ಸೋತರು. ನಮ್ಮವರನ್ನೇ ಉಪಯೋಗಿಸಿಕೊಂಡು ನಮ್ಮವರನ್ನ ಸೋಲಿಸಿ ದೇಶ ಆಳಿದರು. ನಮ್ಮ ನಮ್ಮಲ್ಲಿದ್ದ ಒಡಕು ಉಪಯೋಗಿಸಿಕೊಂಡು ದೇಶದಲ್ಲಿ ಆಡಳಿತ.
ಇದನ್ನೂ ಓದಿ: ನಿದ್ದೆ ಮಾಡುವುದಕ್ಕೆ ನೀವೇ ಬ್ರ್ಯಾಂಡ್ ಅಂಬಾಸಿಡರ್, ನಿದ್ದೆರಾಮಯ್ಯ ಎಂದೇ ನಿಮಗೆ ಹೆಸರಿದೆ: ಆರ್ ಅಶೋಕ್
ಇಂದು ಬಹಳ ಜನ ರಾಷ್ಟ್ರ ಪ್ರೇಮದ ಬಗ್ಗೆ ದೇಶ ಭಕ್ತಿ ಬಗ್ಗೆ ಮಾತಾಡುತ್ತಾರೆ. ಮೊಘಲರು, ಬ್ರಿಟಿಷರು ಆಳಿದಾಗ ಇವರ ದೇಶ ಪ್ರೇಮ ಎಲ್ಲಿ ಹೋಗಿತ್ತು.
ಸ್ವಾತಂತ್ರ್ಯ ತಂದು ಕೊಟ್ಟವರು ಕಾಂಗ್ರೆಸ್ನವರು
ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಕಾಂಗ್ರೆಸ್ನವರು ಮಹಾತ್ಮ ಗಾಂಧಿ. ದೇಶ ಪ್ರೇಮದ ಬಗ್ಗೆ ಉದ್ದೂದ ಭಾಷಣ ಮಾಡುತ್ತಾರೆ. ಇದನ್ನ ಅರ್ಥ ಮಾಡಿಕೊಳ್ಳಬೇಕು. ಸಿಪಾಯಿ ದಂಗೆಗೂ ಮೊದಲು ಟಿಪ್ಪು ಸುಲ್ತಾನ್, ವೆಂಕಟಪ್ಪ ನಾಯಕ, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟ ಮಾಡಿದವರು. ಇದನ್ನ ನಾವು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:21 pm, Wed, 17 January 24